
ಜೀನ್ಸ್ ಪ್ಯಾಂಟ್ ಗೆ ಟೈ ಕಟ್ಟಿದರೆ ಹೇಗಿರುತ್ತದೆ? ಬೋಲ್ದ್ ಲುಕ್ ಹೊಂದಿರುವ ಟೀ ಶರ್ಟ್ ಗೆ ಧೋತಿ ಧರಿಸಿದರೆ ಹೇಗೆ ಕಾಣಬಹುದು? ಟೀ ಶರ್ಟ್ ಗೆ ಸಾಂಪ್ರದಾಯಿಕ ಲಂಗ ಹಾಕಿಕೊಂಡರೆ ಏನನ್ನಿಸಬಹುದು? ಅದರಲ್ಲೂ ಗಂಡುಮಕ್ಕಳು ಘಾಗ್ರಾ ಧರಿಸಿದರೆ ಎಲ್ಲರೂ ಬೇರೆಯದೇ ರೀತಿ ತಿಳಿದುಕೊಳ್ಳುವುದು ಗ್ಯಾರೆಂಟಿ. ಜತೆಗೆ, “ಏನೂ ಟೇಸ್ಟ್ ಇಲ್ಲ, ಇಂತಹ ಮಿಚ್ ಮ್ಯಾಚ್ ಎಲ್ಲೂ ನೋಡಿಲ್ಲʼ ಎಂದು ಮೂಗು ಮುರಿಯಬಹುದು. ಆದರೆ, ಈ ಕಾಲೇಜು ವಿದ್ಯಾರ್ಥಿಗಳು ಮಾತ್ರ ಇಂತಹ ಮಿಸ್ ಮ್ಯಾಚ್ ದಿರಿಸುಗಳನ್ನು ಗ್ರ್ಯಾಂಡಾಗಿ ಧರಿಸಿ ಮಜಾ ಮಾಡಿದ್ದಾರೆ. ಅದಕ್ಕಾಗೇ ಒಂದು ದಿನವನ್ನೇ ಆಚರಿಸಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಕಾಲೇಜಿನ ಕೆಲವು ಸಮಾರಂಭಗಳು ಜೀವನಪೂರ್ತಿ ಸವಿ ನೆನಪನ್ನು ಬಿತ್ತುತ್ತವೆ. ಈ ವಿದ್ಯಾರ್ಥಿಗಳಿಗೆ ಖಂಡಿತವಾಗಿ ಇದೊಂದು ಜೀವಮಾನದ ಸವಿ ಸವಿ ನೆನಪಾಗಿ ಉಳಿಯಲಿದೆ. ಏಕೆಂದರೆ, ಇವರು ಸಾಮಾಜಿಕವಾಗಿ ಬಟ್ಟೆಯ ವಿಚಾರದಲ್ಲಿ ನಾವು ಯಾವುದನ್ನು ವಿಚಿತ್ರ ಎಂದು ಭಾವಿಸುತ್ತೇವೆಯೋ ಅಂಥದ್ದೇ ಬಟ್ಟೆ ತೊಟ್ಟು ಮೆರೆದಿದ್ದಾರೆ. ಇವರು ಮಹಾರಾಷ್ಟ್ರದ ಉಲ್ಲಾಸನಗರದ ಸಿಎಚ್ ಎಂ ಕಾಲೇಜು ವಿದ್ಯಾರ್ಥಿಗಳು. ಇವರು ಆಚರಿಸಿದ್ದುದು “ಮಿಸ್ ಮ್ಯಾಚ್ ಡೇʼ!
ಘಾಗ್ರಾ (Ghagra) ಧರಿಸಿದ ಯುವಕರು (Youth)
ಕಾಲೇಜು ವಿದ್ಯಾರ್ಥಿಗಳೆಂದರೆ (College Students) ಕೇಳಬೇಕೆ? ಯಾವುದನ್ನೇ ಆದರೂ ಗ್ರ್ಯಾಂಡಾಗಿ ಮಾಡುವ ಉತ್ಸಾಹ (Enthusiasm), ಉಮೇದಿ, ಉಲ್ಲಾಸ ಹೊಂದಿರುತ್ತಾರೆ. ಹಾಗೆಯೇ ಈ ವಿದ್ಯಾರ್ಥಿಗಳು ಮಿಸ್ ಮ್ಯಾಚ್ ದಿನವನ್ನು (MisMatch Day) ಅದ್ದೂರಿಯಾಗಿ ಆಚರಿಸಿ ಯುವ ಹೈಕಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಎಂತೆಂತಹ ವಿಚಿತ್ರ ಡ್ರೆಸ್ (Dress) ಧರಿಸಿದ್ದರೆಂದರೆ, ನೋಡಿದ ತಕ್ಷಣ ನಗು ಬಾರದೇ ಇರದು. ಗಂಡುಮಕ್ಕಳು ಘಾಗ್ರಾ, ಲಂಗ, ಸೇರಿದಂತೆ ಎಲ್ಲ ರೀತಿಯ ಮಿಸ್ ಮ್ಯಾಚ್ ಮಾಡಿ ಕ್ಯಾಂಪಸ್ (Campus) ನಲ್ಲಿ ಅಡ್ಡಾಡುತ್ತಿದ್ದರೆ ಉಳಿದವರೆಲ್ಲ ಫೋಟೊ ತೆಗೆದಿದ್ದೇ ತೆಗೆದಿದ್ದು. ಶರ್ಟ್ (Shirt) ಮೇಲೆ ಉದ್ದನೆಯ ಸ್ಕಾರ್ಫ್ ಧರಿಸಿ ಸೀರೆಯಂತೆ ಸುತ್ತಿಕೊಂಡವರು, ಕೆಂಪನೆಯ (Red) ವಿಚಿತ್ರ ನಿಲುವಂಗಿ ಧರಿಸಿದವರು, ಟೀ ಶರ್ಟ್ ಲುಂಗಿ ಸುತ್ತಿಕೊಂಡವರು ಜತೆಯಾಗಿ ರೆಡ್ ಕಾರ್ಪೆಟ್ (Red Carpet) ಮೇಲೆ ಕೈ ಕೈ ಬೆಸೆದು ನಡೆದು ಬರುತ್ತಿದ್ದರೆ ಅಲ್ಲೊಂದು ವಿನೋದದ ಲೋಕವೇ ತೆಗೆದುಕೊಂಡಿತ್ತು.
ಕೆಫೆಯೊಳಗೆ ಈ ಯುವಕರು ಪ್ರತಿ ಮಂಗಳವಾರ ಏನ್ ಮಾಡ್ತಾರೆ ಅಂತ ತಿಳಿದ್ರೆ ಖಂಡಿತಾ ಅಚ್ಚರಿ ಪಡ್ತೀರಿ!
ಹಿರಿಯರಿಗೆ ಹೊಟ್ಟ ತುಂಬ ನಗು
ಇಂತಹ ಮಜಾ ಎನಿಸುವ ಡ್ರೆಸ್ ಧರಿಸಿದ ಗಂಡು ಮಕ್ಕಳು ಕಾಲೇಜು ಎಂಟ್ರೆನ್ಸ್ ಗೆ ಬರುತ್ತಿದ್ದರೆ ಹಿರಿಯರು (Elder) ನಗುತ್ತ ಅವರತ್ತ ದೃಷ್ಟಿ ಬೀರಿದರು. ಕೆಲವರು ನಕ್ಕು ನಕ್ಕು ವಿದ್ಯಾರ್ಥಿಗಳ ಹಾಸ್ಯ ಮನೋವೃತ್ತಿಗೆ ಭೇಷ್ ಎಂದರು. ಹಲವು ಫೋಟೊ(Photo) ಕ್ಲಿಕ್ಕಿಸಿದರು. ಎಲ್ಲರೂ ಹರ್ಷೋದ್ಗಾರ ಮಾಡಿ ಅವರನ್ನು ಸ್ವಾಗತಿಸಿದರು. ಇವರ ಈ ದಿರಿಸುಗಳ ಬಗ್ಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಕೆಲವರು “ನೀವು ಹುಡುಗರು ಎಲ್ಲವೂ ಆಗಿದ್ದೀರಿʼ ಎಂದು ನಕ್ಕಿದ್ದಾರೆ. “ಹಿಂದಿರುವ ಅಂಕಲ್ ಒಬ್ಬರು ಹೊಟ್ಟೆ ತುಂಬ ನಕ್ಕಿದ್ದಾರೆ. ಅವರ ದಿನವನ್ನು ಸಾರ್ಥಕಗೊಳಿಸಿರುವುಕ್ಕೆ ಧನ್ಯವಾದಗಳುʼ ಎಂದು ಯಾರೋ ಹೇಳಿದ್ದಾರೆ.
ಖುಷಿಯಾಗಿ ಬದುಕೋದು ಹೇಗೆ?: ಪರಮ ಪೋಲಿ ಗುರು ಖುಷ್ವಂತ್ ಸಿಂಗ್ ಹೇಳಿದ 10 ಸೂತ್ರ
ಡ್ರೆಸ್ ನಿಯಮದಿಂದ ಮುಕ್ತ
ನೆಟ್ಟಿಗರ (Netizens) ಭಾರೀ ಪ್ರಶಂಸೆಗೆ ಈ ಘಟನೆ ಕಾರಣವಾಗಿದೆ. ಸ್ಟೀರಿಯೋಟೈಪ್ (Stereotype) ಎನಿಸುವ ಡ್ರೆಸ್ ನಿಯಮಗಳಿಂದ ಅತೀತರಾಗಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನೂ ಹೇಳಿದವರಿದ್ದಾರೆ. ಯಾರೋ ಒಬ್ಬರು “ನಮ್ಮ ದೇಶ ಉಡುಪಿನ ವಿಚಾರದಲ್ಲಿ ಎಷ್ಟು ಮುಕ್ತ ಮನಸ್ಥಿತಿ ಹೊಂದಿದೆ ಎನ್ನುವುದಕ್ಕೆ ಸಂತಸವಾಗುತ್ತಿದೆʼ ಎಂದು ಹೇಳಿದ್ದಾರೆ. “ಈ ಧನಾತ್ಮಕ ಮನಸ್ಥಿತಿ (Positive Mentality) ಇಷ್ಟವಾಗುತ್ತಿದೆ. ಇಂತಹ ಸಕಾರಾತ್ಮಕ ಧೋರಣೆ ಎಲ್ಲರಲ್ಲೂ ಇರಬೇಕಾಗಿದೆʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.