5 ವರ್ಷದ ಮಗುವಿನ ಅಡ್ಮಿಷನ್‌ಗೆ 15 ಪೇಜಿನ ರೆಸ್ಯೂಮ್ ...!

By Web DeskFirst Published Jan 18, 2019, 2:02 PM IST
Highlights

ಸಾಮಾನ್ಯವಾಗಿ ರೆಸ್ಯೂಮ್ ಯಾವಾಗ ತಯಾರು ಮಾಡಲಾಗುತ್ತದೆ? ಹೊಸ ಕೆಲಸಕ್ಕೆ ಸೇರುವಾಗ ತಾನೇ? ಅದೂ ಎಲ್ಲಾ ವಿದ್ಯಾಭ್ಯಾಸ ಪೂರ್ತಿಯಾಗಿ ಕೆಲಸ ಹುಡುಕಾಟದಲ್ಲಿರುವಾಗ ಅಥವಾ  ಕೆಲಸದ ಬದಲಾವಣೆ ವೇಳೆ ರೆಸ್ಯೂಮ್ ಸಿದ್ಧವಾಗುತ್ತದೆ. ಆದರೆ ಚೀನಾದಲ್ಲೊಬ್ಬರು ತಮ್ಮ ಐದು ವರ್ಷದ ಮಗುವಿನ ಅಡ್ಮಿಷನ್‌ಗೆ 15 ಪೇಜಿನ ಸಿವಿ ರೆಡಿ ಮಾಡಿದ್ದಾರೆ!

ಏನು? ಐದು ವರ್ಷದ ಮಗುವಿಗೆ ರೆಸ್ಯೂಮ್ ಯಾಕೆ ಎಂದು ಶಾಕ್ ಆಯ್ತಾ? ಆದರೆ ಇದು ನಿಜ. ತಮ್ಮ ಮಗುವಿಗೆ ಶಾಂಘೈನ ಅತ್ಯುತ್ತಮ  ಶಾಲೆಗಳಲ್ಲಿ ಒಂದಾದ ಬೈ ಲಿಂಗ್ವಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರವೇಶ ಕೊಡಿಸುವ ನಿಟ್ಟಿನಲ್ಲಿ  ಪೋಷಕರು ತಮ್ಮ ಮಗುವಿಗಾಗಿ 15 ಪೇಜಿನ ಸಿವಿ ತಯಾರಿಸಿದ್ದಾರೆ. ಅದನ್ನು ಮಗುವಿನ ಅಡ್ಮಿಷನ್ ಫಾರ್ಮ್ ಜೊತೆ ನೀಡಿದ್ದಾರೆ. ಈ ಸಿವಿ ಸದ್ಯ ಚೀನಾದಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ರೆಸ್ಯೂಮ್‌ನಲ್ಲಿ ಏನಿದೆ...?

  • ಮಗುವಿಗೆ ಎರಡನೇ ವರ್ಷದಲ್ಲಿಯೇ ಪ್ರಾಚೀನ ಚೀನಾ ಕವಿತೆಗಳ ಬಗ್ಗೆ ತಿಳಿಸಿ ಕೊಡಲಾಗಿದೆ.
  • ಪ್ರತಿ ವರ್ಷ ಮಗು 500 ಇಂಗ್ಲೀಷ್ ಪುಸ್ತಕ ಓದುತ್ತಾನೆ.
  • ಪಿಯಾನೋ ನುಡಿಸುತ್ತಾನೆ.
  • ಹಿಪ್ ಹಾಪ್ ಮಾಡುತ್ತಾನೆ.
  • ಸಾಕರ್ ಆಡುತ್ತಾನೆ.
  • ಸ್ವಿಮ್ಮಿಂಗ್ ಗೊತ್ತು. - ಇಷ್ಟಲ್ಲದೇ ವಿಶ್ವದ ಅನೇಕ ದೇಶಗಳಿಗೂ ಮಗು ಭೇಟಿ ನೀಡಿದೆ.

ಇಷ್ಟೆಲ್ಲವನ್ನೂ ಐದು ವರ್ಷಕ್ಕೇ ಸಾಧಿಸಿರುವ ಮಗುವಿಗೆ ಶಾಲೆಯಲ್ಲಿ ಸೀಟು ನಿರಾಕರಿಸುವುದಾದರೂ ಹೇಗೆ? 

ಇನ್ನು ಹೇಳಬೇಕೆಂದರೆ ಚೀನಾದಲ್ಲಿ 6ನೇ ವಯಸ್ಸಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತದೆ. ಅಲ್ಲದೆ ಪುಟ್ಟ ಮಕ್ಕಳ ಪ್ರವೇಶಕ್ಕೆ ಭಾರಿ ಸ್ಪರ್ಧೆ ಕೂಡ ನಡೆಯುತ್ತದೆ. ಹೀಗಿರುವಾಗ ಮಕ್ಕಳನ್ನು ಬೆಸ್ಟ್ ಸ್ಕೂಲ್ಗೆ ಸೇರಿಸಲು ತಂದೆ ತಾಯಿ ಏನೇನೋ ಮಾಡುತ್ತಾರೆ. ಅವರಲ್ಲಿ ಈ ತಂದೆ ತಾಯಿ ಕೂಡ ಒಬ್ಬರು. ಪೋಷಕರ ಈ ಸಿವಿಗೆ ಹಲವರು ಉತ್ತಮವಾಗಿ ಪ್ರತಿಕ್ರಿಯಿಸಿದರೆ, ಇನ್ನು ಹಲವೆಡೆಯಿಂದ ಟೀಕೆಗಳು ಸಹ ಹರಿದು ಬಂದಿದೆ. 

click me!