ಅಮ್ಮನಾದರೆ ಮುಗೀತು ಅಡ್ಡಾ ದಿಡ್ಡಿ ದೇಹ ಬೆಳೆಸಿಕೊಳ್ಳುವ ಹೆಣ್ಣು ಮಕ್ಕಳು ಜೀವನವೇ ಮುಗಿದು ಹೋಯಿತು ಎನ್ನುವಂತೆ ಆಡುತ್ತಾರೆ. ಅಷ್ಟಕ್ಕೂ ಮಗುವಾದ ನಂತರ ರೊಮ್ಯಾಂಟಿಕ್ ಲೈಫ್ ಚೆಂದವಾಗಿಸಲೇನು ಮಾಡಬೇಕು?
ಆರೋಗ್ಯಯುತ ವೈವಾಹಿಕ ಜೀವನ ನಿಮ್ಮದಾಗಬೇಕೆಂದರೆ ಅಲ್ಲಿ ರೊಮ್ಯಾನ್ಸ್ ಇರಲೇಬೇಕು. ಉತ್ತಮವಾದ ಸೆಕ್ಸ್ ಲೈಫ್ ವೈವಾಹಿಕ ಜೀವನವನ್ನು ಇನ್ನಷ್ಟು ಸ್ಟ್ರಾಂಗ್ ಆಗಿಸುತ್ತದೆ. ಆದುದರಿಂದ ಮದುವೆಯಾಗಿ ಮಕ್ಕಳಾದ ಮೇಲೂ ಇಂಟಿಮೆಸಿ ಇರುವಂತೆ ನೋಡಿಕೊಳ್ಳುವುದು ದಂಪತಿ ಕರ್ತವ್ಯ.
ಮಕ್ಕಳಾದ ಮೇಲೆ ಜೀವನದಲ್ಲಿ ರೊಮ್ಯಾನ್ಸ್ ಉಳಿಸಿ ಕೊಳ್ಳಲೇನು ಮಾಡಬೇಕು?
ನಿದ್ರಾ ಸಮಯ: ಮಗುವಿಗೆ ಸಾಧ್ಯವಾದಷ್ಟು ಬೇಗ ನಿದ್ರೆ ಮಾಡಿಸಿ. ಇದರಿಂದ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಜೊತೆಗೆ ದಂಪತಿ ವೈವಾಹಿಕ ಜೀವನವೂ ಉತ್ತಮವಾಗಿರಲು ಸಹಾಯವಾಗುತ್ತದೆ. ಮಗು ಬೇಗನೆ ಮಲಗಿದರೆ ದಂಪತಿ ಸುಖ ದುಃಖ ಹಂಚಿ ಕೊಳ್ಳಲು, ರೊಮ್ಯಾನ್ಸ್ ಮಾಡಲು ಎಲ್ಲವಕ್ಕೂ ಸಮಯ ಸಿಗುತ್ತದೆ.
ಬೇರೆ ರೂಮ್: ಮಗು ದೊಡ್ಡದಾಗಿದ್ದರೆ ಅವರಿಗಾಗಿ ಬೇರೆ ರೂಮ್ ಮಾಡಿ. ಇದರಿಂದ ನಿಮಗೆ ಪ್ರೈವೇಸಿ ಸಿಗುತ್ತದೆ.
ಜೊತೆಯಾಗಿ ಸಮಯ ಕಳೆಯಿರಿ: ವಾರದಲ್ಲಿ ಒಂದು ಬಾರಿಯಾದರೂ ಪತಿ-ಪತ್ನಿ ಜೊತೆಯಾಗಿ ಎಲ್ಲಾದರೂ ಹೊರಗೆ ಹೋಗಿ. ಇದನ್ನು ಜೀವನದ ಕೊನೆಯವರೆಗೂ ಮುಂದುವರೆಸಿಕೊಂಡು ಹೋದರೆ ಉತ್ತಮ.
ಸಪ್ರೈಸ್: ಮದುವೆಯಾದ ಆರಂಭದಲ್ಲಿ ಮಾತ್ರ ಯಾಕೆ? ಅದೆಷ್ಟು ವರ್ಷ ಕಳೆದರೂ ಸಂಗಾತಿಗೆ ಗಿಫ್ಟ್ ಕೊಡಲು ಮರೆಯಬೇಡಿ. ಗಿಫ್ಟ್ ಕೊಡುತ್ತ ಹೋದರೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ.