
ತೆಳ್ಳಗೆ ಆಗಬೇಕೆಂಬ ಬಯಕೆಯೋ, ಶುಗರ್‌ಗೆ ಬೆಸ್ಟ್ ಮದ್ದು ಎಂಬ ಅಪ ನಂಬಿಕೆಯೋ, ಮಂದಿ ಚಪಾತಿ ತಿನ್ನೋದು ಕಾಮನ್ ಆಗುತ್ತಿದೆ. ಸದಾ ಅನ್ನವೇ ತಿಂದು ಅಭ್ಯಾಸವಾಗಿರೋ ಜನರಿಗೆ ಚಪಾತಿ ತಿಂದು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅದಕ್ಕೆ ಒಂದೆರಡು ಚಪಾತಿಯನ್ನೂ ತಿಂದು, ಅನ್ನು ತಿನ್ನುವುದನ್ನೂ ರೂಢಿಸಿಕೊಳ್ಳುತ್ತಾರೆ. ಆದರಿದು ಒಳ್ಳೆ ಅಭ್ಯಾಸವಲ್ಲ ಎನ್ನುವುದು ತಜ್ಞರ ಅಭಿಮತ.
ಡಯಟ್ ತಜ್ಞರು ಹೇಳುವಂತೆ ಚಪಾತಿ ಮತ್ತು ಅನ್ನವನ್ನು ಜೊತೆಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆರಡನ್ನೂ ಜೊತೆಯಾಗಿ ಸೇವಿಸಿದರೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ದೇಹವನ್ನು ಸೇರುತ್ತದೆ. ಒಂದೇ ಸಲ ಹೆಚ್ಚು ಕ್ಯಾಲರಿ ದೇಹವನ್ನು ಸೇರಿದರೆ ಜೀರ್ಣಕ್ರಿಯೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆಯೂ ಕಾಡಬಹುದು. ಬೊಜ್ಜು ಹೆಚ್ಚಾದರೆ ಒಂದಲ್ಲ ಒಂದು ಸಮಸ್ಯೆ ಫಾಲೋ ಮಾಡಿಯೋ ಮಾಡುತ್ತೆ.
ಚಪಾತಿ ಅಥವಾ ಅನ್ನ ಎರಡರಲ್ಲಿ ಒಂದೇ ನಿಮ್ಮ ಆಯ್ಕೆಯಾಗಬೇಕು. ಬೇಗ ಜೀರ್ಣವಾಗುವ ಆಹಾರ ಯಾವುದೋ ಅದನ್ನು ರಾತ್ರಿ ಸೇವಿಸುವುದು ಉತ್ತಮ. ಏಕೆಂದರೆ ರಾತ್ರಿ ಹೊತ್ತು ದೇಹಕ್ಕೆ ಹೆಚ್ಚು ಕೆಲಸ ಇರುವುದಿಲ್ಲ. ಆದುದರಿಂದ ಅಂಥ ಲೈಟ್ ಆಹಾರಗಳನ್ನೇ ಸೇವಿಸಿ. ಚಪಾತಿ ತಿಂದರೆ ಉತ್ತಮ. ಇದರಲ್ಲಿ ಕಡಿಮೆ ಕ್ಯಾಲರಿ ಇದೆ. ಇದನ್ನು ಸೇವಿಸಿದರೆ ನಿದ್ರೆಯ ಸಮಸ್ಯೆ ಕೂಡ ಇರೋದಿಲ್ಲ. ಜೊತೆಗೆ ಬೊಜ್ಜಿನ ಸಮಸ್ಯೆಯೂ ಇರೋಲ್ಲ.
ರಾತ್ರಿ ಹೆಚ್ಚು ಊಟ ಮಾಡಿದರೆ ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಅಸ್ತಮಾ ಇರುವವರು ರಾತ್ರಿ ಊಟವನ್ನು ಸಾಧ್ಯವಾದಷ್ಟು ಅವೈಯ್ಡ್ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಉಸಿರಾಟದ ಸಮಸ್ಯೆ ಕಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.