ಸಂಧಿವಾತದ ನೋವಿಗೆ ಅರಿಶಿನ ಉಪಶಮನ ನೀಡಬಲ್ಲದು. ನಿಮ್ಮ ಡಯಟ್‌ನಲ್ಲಿ ಅರಿಶಿನ ಬಳಕೆ ಹೆಚ್ಚಿಸಿ. ಅರಿಶಿನ ಬಳಸಿ ತಯಾರಿಸುವ ಕೆಲ ರೆಸಿಪಿಗಳನ್ನಿಲ್ಲಿ ಕೊಡಲಾಗಿದೆ. ಆರ್ಥ್ರೈಟಿಸ್ ಇರುವವರು ಇವನ್ನು ಮಾಡಿ ಸೇವಿಸುವುದರಿಂದ ಫಲಿತಾಂಶ ಕಾಣಬಹುದು.
ಆರ್ಥ್ರೈಟಿಸ್‌ನ ನೋವು ಅನುಭವಿಸಿದವರಿಗೇ ಗೊತ್ತು. ತಡೆಯಲಸಾಧ್ಯವೆನ್ನುತ್ತಲೇ ಪೇನ್ ಕಿಲ್ಲರ್ಸ್ ಮೊರೆ ಹೋಗುವವರು ಹಲವರು. ಇದರಿಂದ ತಕ್ಷಣ ರಿಲೀಫ್ ಸಿಗುತ್ತದೆ ನಿಜ. ಆದರೆ ಧೀರ್ಘಕಾಲದ ಅನುಭವದಲ್ಲಿ ಪೇನ್ ಕಿಲ್ಲರ್ ಕೂಡಾ ದೇಹಕ್ಕೆ ಒಗ್ಗಿ ಹೋಗಿ ಕೆಲಸ ಮಾಡುವುದು ನಿಲ್ಲಿಸುತ್ತದಲ್ಲದೆ, ಅತಿಯಾದ ಪೇನ್ ಕಿಲ್ಲರ್ ಸೇವನೆ ಅಪಾಯಕಾರಿ ಕೂಡಾ. ಮತ್ತೆ ಈ ಗಂಟುನೋವನ್ನು ಗುಣಪಡಿಸೋ ಮಾರ್ಗವೇನು?
ನೋವೆಂಬುದು ಲೈಫ್‌ಟೈಂ ಪನಿಶ್‌ಮೆಂಟ್ ಅಂದುಕೊಂಡು ಅದರೊಂದಿಗೇ ಬದುಕಬೇಕಾ ಕೇಳಬೇಡಿ? ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳುವ ಮ್ಯಾಜಿಕ್ ಪದಾರ್ಥವೊಂದು ನಿಮ್ಮ ಅಡುಗೆಕೋಣೆಯಲ್ಲಿಯೇ ಇದೆ. ಅದೇ ಅರಿಶಿನ. ಇದರಲ್ಲಿರುವ ಆ್ಯಂಟಿ ಇನ್ಫಮೇಟರಿ ಗುಣ ಹಾಗೂ ಆ್ಯಂಟಿಆಕ್ಸಿಡೆಂಟ್ಸ್‌ಗಳು ಸಂಧಿವಾತ ಓಡಿಸಲು ಬಹಳ ಪರಿಣಾಮಕಾರಿ. ಸಾಮಾನ್ಯವಾಗಿ ಭಾರತೀಯರು ತಯಾರಿಸುವ ಬಹುತೇಕ ಅಡಿಗೆಗಳಿಗೆ ಅರಿಶಿನ ಬಳಸುತ್ತಾರೆ. ಅದಲ್ಲದೆ, ಅರಿಶಿನ ಬಳಸುವ ಕೆಲ ರೆಸಿಪಿಗಳು ಇಲ್ಲಿವೆ ನೋಡಿ.
ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್...
1. ಅರಿಶಿನ ಟೀ
ಅರಿಶಿನವನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಿಕೊಳ್ಳಲು ಪ್ರತಿದಿನ ಅರಿಶಿನ ಟೀ ಮಾಡಿ ಸೇವಿಸಿ. ನಾಲ್ಕು ಕಪ್ ಕುದಿಯುವ ನೀರಿಗೆ 1 ಚಮಚ ಅರಿಶಿನ, ಸ್ವಲ್ಪ ಶುಂಠಿ, ಚಕ್ಕೆ, ಜೇನುತುಪ್ಪ ಹಾಗೂ ನಿಂಬೆಹಣ್ಣನ್ನು ಹಾಕಿ 10 ನಿಮಿಷ ಕುದಿಸಿ. ಶೋಧಿಸಿ ಕುಡಿಯಿರಿ.
2. ಗೋಲ್ಡನ್ ಮಿಲ್ಕ್
ಹಾಲಿಗೆ ಅರಿಶಿನ ಸೇರಿಸಿದಾಗ ಅದು ಗೋಲ್ಡನ್ ಬಣ್ಣಕ್ಕೆ ತಿರುಗುವುದರಿಂದ ಇದಕ್ಕೆ ಗೋಲ್ಡನ್ ಮಿಲ್ಕ್ ಎಂಬ ಹೆಸರು ಬಂದಿದೆ. ಬಿಸಿಯಾದ ಹಾಲಿಗೆ 1 ಚಮಚ ಅರಿಶಿನ ಪುಡಿ ಹಾಕಿ, ಅದರ ಪರಿಣಾಮ ಡಬಲ್ ಆಗುವಂತೆ ಮಾಡಲು ಸ್ವಲ್ಪ ತಾಜಾ ಪೆಪ್ಪರ್ ಪೌಡರ್ ಹಾಕಿ. ಇದಕ್ಕೊಂಚೂರು ಕೊಬ್ಬರಿಎಣ್ಣೆ ಅಥವಾ ಬಾದಾಮಿ ಎಣ್ಣೆಯಂಥ ಎಕ್ಸ್ಟ್ರಾ ಫ್ಯಾಟ್ ಸೇರಿಸುವುದರಿಂದ ದೇಹ ಅರಿಶಿನವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.
ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?
3. ಅರಿಶಿನ ಸ್ಮೂತಿ
ಬೆಳಗೊಂದನ್ನು ಎನರ್ಜಿಯುತವಾಗಿ ಆರಂಭಿಸಲು ಸ್ಮೂತಿಯ ಸೇವನೆ ಬೆಸ್ಟ್. ಪಪ್ಪಾಯಾ, ಅರಿಶಿನ ಪುಡಿ, ಬಾಳೆಹಣ್ಣು, ಕಾಯಿಹಾಲು, ಗೋಡಂಬಿ ಹಾಗೂ ಜೇನುತುಪ್ಪ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ನಿಮ್ಮ ರುಚಿಗೆ ಅಗತ್ಯದಂತೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು.
4. ಅರಿಶಿನದ ಸೂಪ್
ಈ ಮಳೆಗಾಲದಲ್ಲಿ ಟರ್ಮರಿಕ್ ಸೂಪ್‌ನಿಂದ ನಿಮ್ಮನ್ನು ಬೆಚ್ಚಗಿರಿಸಿಕೊಳ್ಳಿ. ಬೇಯಿಸಿದ ಈರುಳ್ಳಿ, ಕ್ಯಾರೆಟ್, ಬೆಳ್ಳುಳ್ಳಿ, ಶುಂಠಿ, ಅರಿಶಿನವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಬಾಣಲೆಗೆ ಹಾಕಿ ಸ್ವಲ್ಪ ಕಾಯಿಹಾಲು, ಎಳ್ಳು ಸೇರಿಸಿ ಕುದಿಸಿ.
5. ಅರಿಶಿನ ಡ್ರೆಸ್ಸಿಂಗ್‌ನ ಹಸಿರು ಸಲಾಡ್
ಹಸಿರು ತರಕಾರಿಗಳು ಹಾಗೂ ಅರಿಶಿನದ ಕಾಂಬಿನೇಶನ್‌ಗಿಂತ ಉತ್ತಮವಾದುದು ಇನ್ನೇನಿರಲು ಸಾಧ್ಯ? ಕ್ಯಾರೆಟ್, ಪಾಲಕ್, ಸೌತೆಕಾಯಿ ಹಾಗೂ ಇತ್ಯಾದಿ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಂಡು ಸಲಾಡ್ ರೆಡಿ ಮಾಡಿಟ್ಟುಕೊಳ್ಳಿ. ಇದಕ್ಕೆ ಸಾಸಿವೆ, ಅರಿಶಿನ, ಉಪ್ಪು, ಪೆಪ್ಪರ್, ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಕಲೆಸಿ.
ಬಿಡಿ ಅರಿಶಿನ ಬಳಕೆಯಿಂದ ಕ್ಯಾನ್ಸರ್ ಬರುತ್ತೆ!
6. ಸ್ಟಿರ್ ಫ್ರೈಯ್ಡ್ ಕ್ಯಾಬೇಜ್
ಫ್ರಿಡ್ಜ್‌ನಲ್ಲಿ ಒಂದಿಷ್ಟು ಕೋಸು ಉಳಿದಿದ್ದು, ಏನಪ್ಪಾ ಮಾಡುವುದು ಎಂದು ಯೋಚಿಸುತ್ತಿದ್ದರೆ ಈ ರೆಸಿಪಿ ಟ್ರೈ ಮಾಡಿ. ಇದು ಜೀರ್ಣಖ್ರಿಯೆಗೆ ಸಹಾಯ ಮಾಡಿ, ಉರಿಯೂತ ತಡೆಗಟ್ಟುತ್ತದೆ. ಕೋಸನ್ನು ಸಣ್ಣಗೆ ಹೆಚ್ಚಿಕೊಂಡು, ಕ್ಯಾರೆಟ್‌ನೊಂದಿಗೆ ಫ್ರೈ ಮಾಡಿ. ಇದಕ್ಕೆ ಅರಿಶಿನ, ಪೆಪ್ಪರ್, ಉಪ್ಪು ಸೇರಿಸಿ.
7. ಅರಿಶಿನ ಗೋಲ್ಡನ್ ಮಿಲ್ಕ್ ಓಟ್‌ಮೀಲ್
ಸಂಧಿವಾತ ಇರುವವರು ಹೈ ಫೈಬರ್ ಇರುವ, ಆ್ಯಂಟಿ ಇನ್ಫ್ಲಮೇಟರಿ ಗುಣ ಹೊಂದಿರುವ ಓಟ್‌ಮೀಲ್ ಸೇವಿಸುವಂತೆ ಆರ್ಥ್ರೈಟಿಸ್ ಫೌಂಡೇಶನ್ ಶಿಫಾರಸು ಮಾಡುತ್ತದೆ. ಈ ಓಟ್‌ಮೀಲ್‌ಗೆ ಅರಿಶಿನ ಆ್ಯಡ್ ಮಾಡುವುದರಿಂದ ಆ್ಯಂಟಿ ಇನ್ಫ್ಲಮೇಟರಿ ಗುಣ ಮತ್ತಷ್ಟು ಹೆಚ್ಚುತ್ತದೆ. ಈ ರೆಸಿಪಿಯನ್ನು ಗೋಲ್ಡನ್ ಮಿಲ್ಕ್‌ಗೆ ಹಾಕಿದರೆ ಬೆಳಗಿನ ಉಪಾಹಾರವೇ ಮುಗಿದುಹೋಗುತ್ತದೆ. ಬೇಕಿದ್ದರೆ ಸ್ಟ್ರಾಬೆರಿ, ಬ್ಲೂಬೆರಿ, ಡ್ರೈಫ್ರೂಟ್‌ಗಳನ್ನು ಸೇರಿಸಿಕೊಳ್ಳಬಹುದು.