ಇತ್ತೀಚಿನ ವರ್ಷಗಳಲ್ಲಿ ಮದ್ವೆ ಅನ್ನೋದು ನಿಜವಾಗಿಯೂ ದುಬಾರಿಯಾಗಿದೆ. ಕೋಟಿ ಕೋಟಿ, ಲಕ್ಷಗಟ್ಟಲೆ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಕೆಲವೊಬ್ಬರು ಜೀವಮಾನ ಪೂರ್ತಿ ದುಡಿದ ಹಣವನ್ನು ಮದುವೆಗೆ ವಿನಿಯೋಗಿಸಿಬಿಡುತ್ತಾರೆ. ಆದ್ರೆ ಇಲ್ಲೊಬ್ಬಾಕೆ ಮದ್ವೆಯ ಖರ್ಚನ್ನು ಉಳಿಸೋಕೆ ಅದೆಂಥಾ ಐಡಿಯಾ ಮಾಡಿದ್ದಾಳೆ ನೋಡಿ.
ಮದುವೆ ಅನ್ನೋದು ಜೀವನದಲ್ಲಿ ಮಹತ್ವದ ದಿನ. ಲೈಫ್‌ನ ಈ ಸ್ಪೆಷಲ್ ಡೇ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಬೇಕೆಂದು ಹೆಚ್ಚಿನವರು ಬಯಸುತ್ತಾರೆ. ಹೀಗಾಗಿ ಗ್ರ್ಯಾಂಡ್ ಡೆಕೊರೇಷನ್, ಡ್ರೆಸ್, ಊಟ ಎಲ್ಲವನ್ನೂ ಸಿದ್ಧಪಡಿಸುತ್ತಾರೆ. ಎಲ್ಲರಿಗಿಂತಲೂ ನಮ್ಮ ಮದುವೆ ಡಿಫರೆಂಟ್ ಆಗಿರಬೇಕೆಂದು ಸ್ಪೆಷಲ್ ಆರೇಂಜ್‌ಮೆಂಟ್ಸ್ ಮಾಡಿಕೊಳ್ಳುತ್ತಾರೆ. ಮದುವೆ ಖರ್ಚಿಗಾಗಿ ಲಕ್ಷಗಟ್ಟಲೆ ಸಾಲವನ್ನೂ ಮಾಡುತ್ತಾರೆ. ಜಮೀನು, ಮನೆಯನ್ನು ಸಹ ಮಾರಿ ಮದುವೆ ಮಾಡುವವರೂ ಇದ್ದಾರೆ. ಆದರೆ ಮದುವೆಯೆಂಬ ಒಂದು ದಿನದ ಕಾರ್ಯಕ್ರಮಕ್ಕೆ ಇಷ್ಟೆಲ್ಲಾ ಖರ್ಚು ಮಾಡುವ ಅಗತ್ಯವಿದೆಯಾ?
ಬಹುತೇಕರು ಮದುವೆಗೆ ವಿನಿಯೋಗಿಸುವ ಈ ದುಡ್ಡನ್ನು ಅನಗತ್ಯ ಖರ್ಚು ಎಂದೇ ಅಂದುಕೊಳ್ಳುತ್ತಾರೆ. ಹೀಗಾಗಿ ಹಲವಾರು ರೀತಿಯಲ್ಲಿ ಹಣವನ್ನು ಉಳಿಸಲು ಯತ್ನಿಸುತ್ತಾರೆ. ಸಿಂಪಲ್ ಡೆಕೊರೇಶನ್, ಸಿಂಪಲ್ ಊಟದ ವ್ಯವಸ್ಥೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ವಧು ಮದುವೆಯೆ ದುಡ್ಡು ಉಳಿಸೋಕೆ ಸಿಂಪಲ್ ಊಟ ಆರೇಂಜ್ ಮಾಡೋ ಬದಲು ಬಂದ ಅತಿಥಿಗಳಿಗೆ ಕೂಲ್ಡ್‌ಡ್ರಿಂಕ್ಸ್, ಅಲ್ಕೋಹಾಲ್ ಕೊಡೋ ಬದಲು ನೀರನ್ನು ನೀಡಲು ನಿರ್ಧರಿಸಿದ್ದಾಳೆ. ಅರೆ, ಇದೆಂಥಾ ವಿಚಿತ್ರ ಅನ್ಬೇಡಿ, ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
ಗುಂಡಿನ ಗಮ್ಮತ್ತು..ಫುಲ್ ಟೈಟ್ ಆಗಿ ತನ್ನದೇ ಮದ್ವೆಗೆ ಬರಲು ಮರೆತ ವರ!
ಮದುವೆ ಹಣವನ್ನು ಉಳಿಸಲು ವಧುವಿನ ಡಿಫರೆಂಟ್ ಪ್ಲಾನ್
ಮದುವೆಗಳು (Marriage) ಖಂಡಿತವಾಗಿಯೂ ದುಬಾರಿಯಾಗಿದೆ ಮತ್ತು ಕೆಲವು ಹಣವನ್ನು ಉಳಿಸಲು ಹಲವಾರು ಮಾರ್ಗಗಳಿವೆ. ಒಬ್ಬ ವಧು ತಮ್ಮ ಅತಿಥಿಗಳಿಗೆ ನೀರನ್ನು (Water) ಮಾತ್ರ ನೀಡುವ ಮೂಲಕ ತಮ್ಮ ಮದುವೆಯ ಬಜೆಟ್ ಅನ್ನು ಕಡಿತಗೊಳಿಸಲು ನಿರ್ಧರಿಸಿದಳು. ವಧು ಮತ್ತು ಅವಳ ಸಂಗಾತಿ (Partner), ತಮ್ಮ ಮದುವೆಗೆ ತಾವಾಗಿಯೇ ಪಾವತಿಸುತ್ತಿದ್ದಾರೆ. ಹೀಗಾಗಿಯೇ ಅವರು ತಮ್ಮ ಮೆನುವಿನಿಂದ ಅಲ್ಕೋಹಾಲ್ ಮತ್ತು ಇತರ ಪಾನೀಯಗಳನ್ನು ಕಡಿತಗೊಳಿಸಲು ನಿರ್ಧರಿಸಿದರು. ಬದಲಿಗೆ ಫಿಲ್ಟರ್ ನೀರನ್ನು ಸರ್ವ್ ಮಾಡಲು ಬಯಸಿದರು ಎಂದು ತಿಳಿದುಬಂದಿದೆ.
'ನಮ್ಮ ಮದುವೆಯಲ್ಲಿ ಯಾವುದೇ ರೀತಿಯ ಮದ್ಯ (Alcohol) ಇರುವುದಿಲ್ಲ. ಯಾಕೆಂದರೆ ನಾನು ಹಾಗೂ ನನ್ನ ಸಂಗಾತಿ ಮದ್ಯ ಕುಡಿಯುವುದಿಲ್ಲ. ಹೀಗಾಗಿ ಮದುವೆಯಲ್ಲಿಯೂ ನಾವು ಅದನ್ನು ಅತಿಥಿಗಳಿಗೆ ಕೊಡಲು ಬಯಸುವುದಿಲ್ಲ' ಎಂದು ವಧು ಹೇಳಿದರು. ಇದಲ್ಲದೆ, ಮಹಿಳೆ ಮತ್ತು ತನ್ನ ವರನವರು (Groom) ತಮ್ಮ ಅತಿಥಿಗಳಿಗೆ ನೀರನ್ನು ಮಾತ್ರ ನೀಡಲು ಏಕೆ ಯೋಜಿಸಿದ್ದಾರೆಂದು ವಿವರಿಸಿದರು. 'ನಾವು ಮದ್ಯ ಅಥವಾ ಫಿಜ್ಜಿ ಪಾನೀಯಗಳಿಗೆ ಪಾವತಿಸಲು ಬಯಸುವುದಿಲ್ಲ, ಇದು ಕೇವಲ ಚ್ಚುವರಿ ವೆಚ್ಚವಾಗಿದೆ. ನಾವು ಫಿಲ್ಟರ್ ಮಾಡಿದ ನೀರನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು' ಎಂದು ಅವರು ಬರೆದಿದ್ದಾರೆ.
ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ, ಆರು ವರ್ಷದ ನಂತ್ರ ಗೊತ್ತಾಯ್ತು ಬೆಚ್ಚಿಬೀಳಿಸೋ ಸತ್ಯ!
ವಧು-ವರರ ನಿರ್ಧಾರವು ಅನೇಕ ಅತಿಥಿಗಳನ್ನು ಅಸಮಾಧಾನಗೊಳಿಸಿದೆ. ವಧುವಿನ ನಿರ್ಧಾರಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮದುವೆ ಮನೆಯಲ್ಲಿ ಓಪನ್ ಬಾರ್ ಇಟ್ಟುಕೊಳ್ಳಬಹುದಿತ್ತು. ಇದು ಅತಿಥಿಗಳು ಹಣ ನೀಡಿ ಡ್ರಿಂಕ್ಸ್ ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಮದುವೆ ಮನೆಗೆ ಬಂದು ಎಲ್ಲರೂ ನೀರು ಕುಡಿಯಬೇಕು ಎಂದು ನಿರೀಕ್ಷಿಸುವುದು ತಪ್ಪು ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ.
ಕೆಲವರು ವಧುವನ್ನು ಚೀಪ್ ಎಂದು ಕರೆದರು. ಮತ್ತೆ ಕೆಲವರು ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡರು. ಮತ್ತೊಬ್ಬರು 'ನಾನು ಸಿಂಪಲ್ ವಿವಾಹವನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಮದುವೆಯಲ್ಲಿ ನೀರು ಮಾತ್ರ ಸರ್ವ್ ಮಾಡುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ.