ಅನ್ಯಗ್ರಹ ಜೀವಿಯಂತೆ ಕಾಣಿಸಲು ತೋರು ಬೆರಳ ಕತ್ತರಿಸಿಕೊಂಡ ಭೂಪ!

Published : Mar 22, 2023, 05:00 PM IST
ಅನ್ಯಗ್ರಹ ಜೀವಿಯಂತೆ ಕಾಣಿಸಲು ತೋರು ಬೆರಳ ಕತ್ತರಿಸಿಕೊಂಡ ಭೂಪ!

ಸಾರಾಂಶ

ದೇಹದ ಅವಯವಗಳು ಸುರಕ್ಷಿತವಾಗಿ ಇರಬೇಕೆನ್ನುವುದು ನಮ್ಮೆಲ್ಲರ ಆಶಯ. ಆದರೆ, ಬ್ರೆಜಿಲ್ ಸಾವೊಪೌಲೋದಲ್ಲಿ ವಾಸಿಸುವ ಮಾರ್ಸೆಲೊ ಎನ್ನುವ ವ್ಯಕ್ತಿಗೆ ಮಾತ್ರ ಹಾಗಲ್ಲ. ದೇಹದಲ್ಲಿ ಏನಾದರೊಂದು ಬದಲಾವಣೆ ಮಾಡುತ್ತಲೇ ಇದ್ದರೆ ಸಮಾಧಾನ. ಏಲಿಯನ್ ದೆವ್ವದಂತೆ ಕಾಣಲು ಇದೀಗ ಈತ ತೋರು ಬೆರಳನ್ನು ಕತ್ತರಿಸಿಕೊಂಡುಬಿಟ್ಟಿದ್ದಾನೆ.  

ಆಕಸ್ಮಿಕವಾಗಿ ಅಥವಾ ಅಪಘಾತದಂತಹ ಅವಘಡದಿಂದ ದೇಹದ ಪುಟ್ಟದೊಂದು ಭಾಗ ಕತ್ತರಿಸಿದರೂ ದೀರ್ಘಕಾಲ ಅದನ್ನು ನೆನಪಿಸಿಕೊಂಡು ಕೊರಗುವವರಿದ್ದಾರೆ. ದೇಹದ ಎಲ್ಲ ಭಾಗಗಳೂ ಸುರಕ್ಷಿತವಾಗಿ ಇದ್ದರೆ ಸಾಕು ಎನ್ನುವುದು ಎಲ್ಲರ ಬಯಕೆ. ಮನೆಯಲ್ಲಿ ಮಕ್ಕಳಿಗೂ ಹಿರಿಯರು ಅದನ್ನೇ ಹೇಳುತ್ತಾರೆ, “ಏನೇ ಆಟವಾಡಿ, ಹುಷಾರಾಗಿರಿ, ದೇವರು ಕೊಟ್ಟ ಶರೀರ ಹಾಗೂ ಅವಯವಗಳನ್ನು ಸರಿಯಾಗಿಟ್ಟುಕೊಳ್ಳಿ’ ಎಂದು ಕಿವಿಮಾತು ಹೇಳುತ್ತಾರೆ. ಇನ್ನು ವಯಸ್ಸಾದಂತೆ ಬೇರೆಯದೇ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಮನುಷ್ಯನಿದ್ದಾನೆ. ಇವನು ವಿಶ್ವದ ಅತ್ಯಧಿಕ ಪ್ರಮಾಣದಲ್ಲಿ “ಮಾಡಿಫೈಡ್ ಮ್ಯಾನ್’ ಎನಿಸಿಕೊಂಡಿದ್ದಾರೆ. ಇವನಷ್ಟು ದೇಹವನ್ನು ಮಾರ್ಪಡಿಸಿಕೊಂಡವರು ಬೇರೆ ಯಾರೂ ಇಲ್ಲ. ದೇಹದ ಮೇಲಿರುವ ಬಹುತೇಕ ಎಲ್ಲ ಅಂಗಾಂಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಮಾರ್ಪಡಿಸಿಕೊಂಡಿದ್ದಾನೆ. ಇವನನ್ನು ನೋಡಿದರೆ ಏನನ್ನುತ್ತೀರೋ ಗೊತ್ತಿಲ್ಲ, ಆದರೆ ವಿಚಿತ್ರ ಅನಿಸುವುದಂತೂ ಖರೆ. ಇತ್ತೀಚಿಗೆ ಇವನ ಹೊಸ ಸಾಹಸ ಎಂದರೆ, ಕೈ ತೋರುಬೆರಳನ್ನು ಕತ್ತರಿಸಿಕೊಂಡಿರುವುದು. ಅದಕ್ಕೆ ಕಾರಣ ಕೇಳಿದರೆ ತಲೆತಿರುಗಿ ಬರಬಹುದು! ಏಲಿಯನ್ ಗಳ ದೆವ್ವದ ಹಾಗೆ ಕಾಣಲು ಈತ ತನ್ನ ತೋರು ಬೆರಳನ್ನು ಕತ್ತರಿಸಿಕೊಂಡು ಬೆರಳುಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಿಕೊಂಡಿದ್ದಾನೆ!

ಇಂತಹ ಅದ್ಭುತ ವ್ಯಕ್ತಿ ಮಾರ್ಸೆಲೊ ಡಿ ಬಾಯ್ ಡಿಸೋಜ (Marcelo D Souza). ಬ್ರೆಜಿಲ್ ನ (Brazil) ಸಾವೊಪೌಲೋದಲ್ಲಿ ವಾಸಿಸುತ್ತಾನೆ. ಕಲಾವಿದನಾಗಿದ್ದು (Artist), ದೇಹದ ಮೇಲೆ ಬರೋಬ್ಬರಿ 1500 ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾನೆ. ಹಾಗೂ ಭಾರೀ ಚಿತ್ರವಿಚಿತ್ರ ರೀತಿಯಲ್ಲಿ ದೇಹದ ವಿವಿಧ ಭಾಗಗಳಿಗೆ ಬೇರೆ ಸ್ವರೂಪ ನೀಡಿದ್ದಾನೆ. ಈತನ ದೇಹದ ಶೇಕಡ 98ರಷ್ಟು ಭಾಗಗಳು ಮಾರ್ಪಾಡಿಗೆ ಒಳಪಟ್ಟಿವೆ ಎಂದರೆ ಇವರ ಅತಿರೇಕದ ಅರಿವಾಗಬಹುದು. ಇಷ್ಟೆಲ್ಲ ಬದಲಾವಣೆ ಮಾಡಿಕೊಳ್ಳಲು ಈತ ಸಾವಿರಾರು ಯೂರೋ ಹಣವನ್ನು ವೆಚ್ಚ ಮಾಡಿದ್ದಾನೆ. 

Health Tips : ಮತ್ತೆ ಭಾರತವನ್ನು ಕಾಡಲಿದ್ಯಾ ಕಾಲರಾ? ಜೋಪಾನ

ಕೋರೆ ಹಲ್ಲುಗಳು, ಸೀಳಿದ ನಾಲಗೆ
ಈತ ತನ್ನ ಕೋರೆ ಹಲ್ಲುಗಳನ್ನು ಲೋಹದ (Metal) ಹಲ್ಲುಗಳನ್ನಾಗಿ ಮಾಡಿಸಿಕೊಂಡಿದ್ದಾನೆ. ಹಲವು ಕಡೆ ಚರ್ಮದ (Skin) ಕಸಿ ಮಾಡಿಸಿಕೊಂಡಿದ್ದಾನೆ. ಇವರ ವಿಚಿತ್ರತನಕ್ಕೆ ಇನ್ನೊಂದು ಸೂಪರ್ ಉದಾಹರಣೆ ಎಂದರೆ, ತನ್ನ ನಾಲಗೆಯನ್ನು ಎರಡಾಗಿ ಸೀಳಿಕೊಂಡಿರುವುದು! ಕೆಲ ಸಮಯದ ಹಿಂದೆ, ಈತ ತನ್ನ ತೋಳನ್ನು ವಿಭಜಿಸಿಕೊಂಡಿದ್ದ. ಇದು ವಿಶ್ವದ ಮೊದಲ ಪ್ರಕರಣ ಎಂದು ದಾಖಲಾಗಿತ್ತು. ಇದೀಗ, ತೋರು ಬೆರಳನ್ನು (Index Finger) ಏಲಿಯನ್ ಗಳ ದೆವ್ವದ (Alien Devil) ಹಾಗೆ ಕಾಣಿಸುವುದಕ್ಕೋಸ್ಕರ ತೆಗೆದುಹಾಕಿದ್ದಾನೆ. ಇಡೀ ವಿಶ್ವದಲ್ಲೇ ಈ ರೀತಿಯಲ್ಲಿ ಯಾರೂ ಸಹ ತೋರು ಬೆರಳನ್ನು ಕತ್ತರಿಸಿಕೊಂಡು ಮಾರ್ಪಡಿಸಿಕೊಂಡಿಲ್ಲ ಎನ್ನುವುದು ಈತನ ಹೇಳಿಕೆ. ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಈತ, “ನಾನು ದೇಹದ ಬದಲಾವಣೆ (Body Modification) ಕುರಿತು ಸಂಶೋಧನೆ ಮಾಡುತ್ತಿದ್ದೇನೆ. ವಿಶ್ವದಲ್ಲೇ ನನ್ನಷ್ಟು ಮಾರ್ಪಾಡಿಗೆ ಒಳಗಾದವರು ಯಾರೂ ಇಲ್ಲ’ ಎಂದು ಹೇಳಿಕೊಂಡಿದ್ದಾನೆ. 

ನೀವು ಹಾಕಿಸಿಕೊಳ್ಳುವ ಟ್ಯಾಟೂನಲ್ಲೇ ಅಡಗಿರುತ್ತಾ ನಿಮ್ಮ ಜನ್ಮರಾಶಿಯ ರಹಸ್ಯ?

ಬರೆಯಲೂ ಬರುತ್ತಿದೆ
ಸರ್ಜರಿ ಮೂಲಕ ತೋರು ಬೆರಳನ್ನು ಕತ್ತರಿಸಿಕೊಂಡ ಬಳಿಕ ಎರಡು ವಾರಗಳ ಕಾಲ ಭಾರೀ ನಿಗಾ ವಹಿಸಲಾಗಿತ್ತು. ಈಗ ಕೈಯಲ್ಲಿನ ಗಾಯ ವಾಸಿಯಾಗಿದೆ. ತಾನೀಗ ತೋರು ಬೆರಳಿಲ್ಲ ಹಸ್ತದಲ್ಲೇ ಎಲ್ಲ ಕೆಲಸ ಮಾಡಲು ಕಲಿತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಬರೆಯಲು (Write) ಹಾಗೂ ವಯೋಲಿನ್ ಪ್ಲೇ ಮಾಡಲು ಸಹ ಸಾಧ್ಯವಾಗುತ್ತಿದೆ ಎಂದಿದ್ದಾನೆ. ಸಹಜವಾಗಿ ಹಿಂದಿನಂತೆ ಹಸ್ತವನ್ನು ಚಲಿಸಲು ಬರುತ್ತಿದೆ ಎಂದು ಹೇಳಿದ್ದಾನೆ. 
ದೇಹದ ಬಗ್ಗೆ ಅಪಾರ ಕಾಳಜಿ ವಹಿಸುವ ಜನರು ಈ ಮಾರ್ಸೆಲೊ ಡಿ ಬಾಯ್ ಡಿಸೋಜನ ವಿಚಿತ್ರ ಧೋರಣೆಗೆ ಬೆಚ್ಚಿ ಬೀಳಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್