Teddy Day : ಮುದ್ದು ಮುದ್ದಾದ ಟೆಡ್ಡಿ ಗಿಫ್ಟ್ ಮಾಡುವ ಮೊದಲು ಅರ್ಥ ತಿಳಿದುಕೊಳ್ಳಿ

Suvarna News   | Asianet News
Published : Feb 09, 2022, 05:20 PM IST
Teddy Day : ಮುದ್ದು ಮುದ್ದಾದ ಟೆಡ್ಡಿ ಗಿಫ್ಟ್ ಮಾಡುವ ಮೊದಲು ಅರ್ಥ ತಿಳಿದುಕೊಳ್ಳಿ

ಸಾರಾಂಶ

ಸಂಗಾತಿಗೆ ಉಡುಗೊರೆ ನೀಡಬಹುದಾದ ವಸ್ತುಗಳಲ್ಲಿ ಅತ್ಯಂತ ಫೇವರೆಟ್ ವಸ್ತುವೆಂದ್ರೆ ಟೆಡ್ಡಿ ಬೇರ್‌ಗಳು. ಮೃದುವಾದ ಆಟಿಕೆಗಳು ಯಾರನ್ನಾದ್ರೂ ಮೋಡಿ ಮಾಡಬಲ್ಲದು. ಟೆಡ್ಡಿಯನ್ನು ಪ್ರೀತಿಸದ ವ್ಯಕ್ತಿಗಳಿಲ್ಲ. ಟೆಡ್ಡಿ ಬೇರ್ ಉಡುಗೊರೆ ನೀಡುವ ಅಥವಾ ಪಡೆಯುವ ಮುನ್ನ ಅದರ ಬಣ್ಣ ಹಾಗೂ ಅರ್ಥವನ್ನು ತಿಳಿಯಿರಿ.  

ವ್ಯಾಲಂಟೈನ್ (Valentine) ವೀಕ್ ಪ್ರೇಮಿ (Lover)ಗಳಿಗೆ ತುಂಬಾ ವಿಶೇಷವಾಗಿದೆ. ಈ ಸಮಯದಲ್ಲಿ ಪ್ರೀತಿಯ ಜೋಡಿಗಳು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೀತಿಯ ವಾರದಲ್ಲಿ ಒಂದು ದಿನವನ್ನು ಟೆಡ್ಡಿ ಡೇ (Teddy Day) ಆಗಿಯೂ ಆಚರಿಸಲಾಗುತ್ತದೆ. ಫೆಬ್ರವರಿ 10ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನರು ವಿವಿಧ ಬಣ್ಣ (Color) ಗಳ ಟೆಡ್ಡಿ ಬೇರ್‌ಗಳನ್ನು ಪ್ರೀತಿಸುವ ವ್ಯಕ್ತಿಗೆ ನೀಡ್ತಾರೆ. ಮುಗ್ಧ ಮತ್ತು ಶುದ್ಧ ಪ್ರೀತಿಯನ್ನು ನೆನಪಿಸಲು ಟೆಡ್ಡಿ ಬೇರ್ ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಬೆಲೆ ಬಾಳುವ, ಮೃದುವಾದ ಮತ್ತು ಮುದ್ದಾದ ಟೆಡ್ಡಿ ಬೇರ್ ಗಳು ಖಂಡಿತವಾಗಿಯೂ ಸಂಗಾತಿಯ ಮುಖದಲ್ಲಿ ಸಂತೋಷ ತರಿಸುತ್ತದೆ. ನಿಮ್ಮ ಸಂಗಾತಿಯನ್ನೂ ಖುಷಿಪಡಿಸಬೇಕೆಂದ್ರೆ ನೀವು ಟೆಡ್ಡಿಯನ್ನು ಉಡುಗೊರೆ ನೀಡಬಹುದು.  ವಿವಿಧ ಬಣ್ಣದ ಟೆಡ್ಡಿ ಬೇರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೆ ವ್ಯಕ್ತಿಯೊಬ್ಬರು ಟೆಡ್ಡಿ ಬೇರ್ ಉಡುಗೊರೆ ನೀಡಿದರೆಂದ್ರೆ ಅವರು ನೀಡಿದ ಟೆಡ್ಡಿ ಬಣ್ಣದಿಂದ ನೀವು ಅವರ ಭಾವನೆಯನ್ನು ಪತ್ತೆ ಮಾಡಬಹುದು. ಇಂದು ಯಾವ ಬಣ್ಣದ ಟೆಡ್ಡಿ ಬೇರ್ ಯಾವ ಅರ್ಥ ನೀಡುತ್ತದೆ ಎಂಬುದನ್ನು ಹೇಳ್ತೆವೆ.

ಕೆಂಪು ಬಣ್ಣದ ಟೆಡ್ಡಿಬೇರ್ : ಕೆಂಪು ಬಣ್ಣವು ಪ್ರೀತಿ, ಭಾವೋದ್ರೇಕ ಮತ್ತು ವಾತ್ಸಲ್ಯದ ಸೂಚಕವಾಗಿದೆ. ನಿಮ್ಮ ಪ್ರೀತಿ ವ್ಯಕ್ತಪಡಿಸಬೇಕೆಂದ್ರೆ ನೀವು ಸಂಗಾತಿಗೆ ಕೆಂಪು ಟೆಡ್ಡಿ ಬೇರ್ ಉಡುಗೊರೆಯಾಗಿ ನೀಡಬಹುದು. ಟೆಡ್ಡಿ ಮಧ್ಯದಲ್ಲಿ ಹಾರ್ಟ್ ಶೇಪ್ ಇದ್ದರೆ ಅದು ನಿಮ್ಮ ಪ್ರೀತಿಯನ್ನು ಮತ್ತಷ್ಟು ವಿಶೇಷಗೊಳಿಸುತ್ತದೆ. ಸದಾ ನಿಮ್ಮ ಜೊತೆ ಇರಲು ಅವರು ಬಯಸುತ್ತಿದ್ದಾರೆಂದು ಅರ್ಥೈಸಿಕೊಳ್ಳಿ. ಕೆಂಪು ಟೆಡ್ಡಿ, ಸಂತೋಷ ಮತ್ತು ಸೂಕ್ಷ್ಮತೆಯನ್ನು ಸೂಚಿಸುತ್ತದೆ. ಆದರೆ ಗಾಢ ಕೆಂಪು ಟೆಡ್ಡಿ ಬೇರ್ ಧೈರ್ಯ, ಇಚ್ಛಾಶಕ್ತಿ ಮತ್ತು ನಿರ್ಣಯವನ್ನು ಸೂಚಿಸುತ್ತದೆ.  ನಿಮಗೆ ಯಾರಾದರೂ ಕೆಂಪು ಟೆಡ್ಡಿ ಬೇರ್ ಹಾಗೂ ಒಂದು ಹಾರ್ಟ್ ಶೇಪ್ ಚಾಕೊಲೆಟ್ ನೀಡಿದ್ರೆ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರೆಂದು ಅರ್ಥೈಸಿಕೊಳ್ಳಿ. 
ನಿಮಗೆ ಎರಡು ಕೆಂಪು ಟೆಡ್ಡಿಯನ್ನು ಸಂಗಾತಿ ನೀಡಿದ್ರೆ ನಿಮ್ಮ ಜೊತೆ ಲಾಂಗ್ ಡ್ರೈವ್ ಗೆ ಹೋಗಲು ಅವರು ಬಯಸಿದ್ದಾರೆಂದು ಅರ್ಥ ಮಾಡಿಕೊಳ್ಳಿ.

GIFT IDEAS: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

ನೀಲಿ ಟೆಡ್ಡಿ ಬೇರ್: ನಿಮ್ಮ ಪ್ರೀತಿಪಾತ್ರರಿಗೆ ನೀಲಿ ಟೆಡ್ಡಿ ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಪ್ರೀತಿಯು ಸಮುದ್ರದಷ್ಟು ಆಳವಾಗಿದೆ ಎಂದು ತೋರಿಸಿಕೊಂಡಂತೆ. ಈ ಬಣ್ಣವು ಬುದ್ಧಿವಂತಿಕೆ, ಸತ್ಯ, ನಿಷ್ಠೆ ಮತ್ತು ನಂಬಿಕೆಯನ್ನು ಸೂಚಿಸುತ್ತದೆ. ನಿಮ್ಮ ಸಂಗಾತಿಯು ನಿಮಗೆ ನೀಲಿ ಟೆಡ್ಡಿ  ಉಡುಗೊರೆಯಾಗಿ ನೀಡಿದರೆ, ಅವರು ನಿಮ್ಮನ್ನು ಹುಚ್ಚನಂತೆ ಪ್ರೀತಿಸುತ್ತಿದ್ದಾರೆ ಎಂದು ಭಾವಿಸಬಹುದು. 

ಹಸಿರು ಟೆಡ್ಡಿ: ಈ ಬಣ್ಣವು ಶಾಂತಿ, ಅದೃಷ್ಟ ಮತ್ತು ಸಾಮರಸ್ಯವನ್ನು ಪ್ರತಿನಿಧಿಸುತ್ತದೆ. ನಾನು ಎಂದೆಂದಿಗೂ ನಿಮ್ಮವನು ಮತ್ತು ನೀವು ನನ್ನನ್ನು ಪ್ರೀತಿಸಲು ನಾನು ಕಾಯುತ್ತೇನೆ ಎಂಬ ಅರ್ಥವನ್ನು ಇದು ನೀಡುತ್ತದೆ. 

ಹಳದಿ ಟೆಡ್ಡಿ : ನಿಮ್ಮ ಸ್ನೇಹಿತರಲ್ಲಿ ಯಾರಾದರೂ ನಿಮಗೆ ಹಳದಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿದರೆ ಅವರು ನಿಮ್ಮಲ್ಲಿ ಒಳ್ಳೆಯ ಸ್ನೇಹಿತವನ್ನು ನೋಡುತ್ತಿದ್ದಾರೆ ಎಂಬ ಸೂಚನೆ. ಸ್ನೇಹವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುತ್ತಿದ್ದಾರೆಂದರ್ಥ.

ಬಿಳಿ ಟೆಡ್ಡಿ :  ಈಗಾಗಲೇ ಸಂಬಂಧದಲ್ಲಿರುವ ದಂಪತಿ ಈ ಉಡುಗೊರೆ ನೀಡುವುದು ಹೆಚ್ಚು. ಬಿಳಿ ಬಣ್ಣವು ಶುದ್ಧತೆ, ಮುಗ್ಧತೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಇದು ಸಕಾರಾತ್ಮಕ ಮತ್ತು ಯಶಸ್ವಿ ಮನೋಭಾವವನ್ನು ಸಹ ಪ್ರತಿನಿಧಿಸುತ್ತದೆ.

Relationship Tips: ನಿಮ್ಮನ್ನು ಯಾರೂ ಮಿಸ್ ಮಾಡ್ಕೊಳ್ತಿಲ್ವಾ..ಈ ಟ್ರಿಕ್ ಯೂಸ್ ಮಾಡಿ

ಗುಲಾಬಿ ಟೆಡ್ಡಿ : ಈ ಬಣ್ಣವು ಪ್ರೀತಿ,ಸಹಾನುಭೂತಿಯನ್ನು ಸೂಚಿಸುತ್ತದೆ. ಇದು ಎಂದಿಗೂ ಅಂತ್ಯವಿಲ್ಲದ ಪ್ರೀತಿಯ ಸಂಕೇತವಾಗಿದೆ. ವ್ಯಕ್ತಿಯು ಅಂತಿಮವಾಗಿ ನಿಮ್ಮ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾನೆ ಎಂಬುದನ್ನು ಹೇಳುವ ಪರೋಕ್ಷ ಮಾರ್ಗವಾಗಿದೆ. ಎರಡು ಗುಲಾಬಿ ಬಣ್ಣದ ಟೆಡ್ಡಿಯನ್ನು ನಿಮ್ಮ ಸಂಗಾತಿ ನಿಮಗೆ ನೀಡಿದ್ರೆ ಅವರು ನಿಮ್ಮ ಜೊತೆ ಸಿನಿಮಾ ನೋಡಲು ಬಯಸುತ್ತಾರೆಂದರ್ಥ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌