
ಪ್ರಾಣಿ ಪಕ್ಷಿಗಳು ಕೆಲವೊಮ್ಮೆ ಜನರ ಮಧ್ಯೆ ಸಿಕ್ಕಿ ಮುದ್ದು ಮುದ್ದಾಗಿ ವರ್ತಿಸುತ್ತವೆ. ಅವುಗಳ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಕಬ್ಬು ಕದ್ದು ತಿನ್ನೋಕೆ ಬಂದ ಆನೆಮರಿಯೊಂದು ಏನು ಮಾಡಿದೆ ನೋಡಿ.
ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬಯ ಸವಿದಾಗ ಪುಟ್ಟ ಆನೆ ಮರಿ ಸಿಕ್ಕಿಬಿದ್ದಿದೆ. ಇನ್ನೇನು ಮಾಡೋದು ಅಂತ ಅತ್ತಿದ್ದ ನೋಡಿ, ತನ್ನ ದೇಹವನ್ನು ಸರಿಯಾಗಿ ಅಡಗಿಸಿಕೊಳ್ಳಲಾಗದಿದ್ದರೂ, ಆದಷ್ಟು ಅಡಗಿಕೊಳ್ಳೋ ಪ್ರಯತ್ನ ಮಾಡಿದೆ ಮುದ್ದು ಆನೆ ಮರಿ.
ಶ್ರೀಕುಟ್ಟಿ ಫುಲ್ ಹ್ಯಾಪಿ: ಪುಟ್ಟ ಆನೆ ಮರಿಯ ಬರ್ತ್‌ಡೇ ಹೀಗಿತ್ತು ನೋಡಿ
ಮುದ್ದಾದ ಕಬ್ಬು ಕಳ್ಳ ಥಾಯ್‌ಲೆಂಡ್‌ನ ಚಿನಾಗ್ ಮೈನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ. ಖುಷಿಯಿಂದ ಕಬ್ಬು ತಿನ್ನುತ್ತಿದ್ದ ಆನೆ ತನ್ನತ್ತ ಜನ ಬರೋದನ್ನು ನೋಡಿ ಓಡಿ ಹೋಗಿಲ್ಲ, ಜನರ ಮೇಲೆ ದಾಳಿ ಮಾಡೋಕು ಬರಲಿಲ್ಲ, ಬದಲಾಗಿ ಮುದ್ದುಮುದ್ದಾಗಿ ಸಣ್ಣ ಕಂಬದ ಹಿಂದೆ ಅಡಗಿಕೊಂಡಿದೆ.
ಕಾಡಿಗೆ ಹೊರಡಲು ಸಿದ್ಧವಾಗಿದ್ದ ಅಭಿಮನ್ಯು ನೋಡಲು ಅರಮನೆ ಆವರಣಕ್ಕೆ ಬಂದ ಆದ್ಯವೀರ್
ಆನೆ ಅಡಗಿಕೊಂಡಿರುವ ಫೋಟೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು, ಆನೆಯನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಹಿಂದೊಮ್ಮೆ ಗಾಡಿಯಲ್ಲಿದ್ದೇ ಪಕ್ಕದ ಗಾಡಿಯಿಂದ ಕಬ್ಬು ತಿನ್ನುವ ಆನೆಯ ವಿಡಿಯೋ ವೈರಲ್ ಆಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.