ತನ್ನ ಮೇಲೆಯೇ ಕೊರೋನಾ ಔಷಧ ಪ್ರಯೋಗ ಮಾಡಿಕೊಂಡ ಆರೋಗ್ಯ ಸಚಿವ..!

By Suvarna NewsFirst Published Nov 20, 2020, 2:26 PM IST
Highlights

ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ಕೊವಾಕ್ಸೀನ್ ಪ್ರಯೋಗಕ್ಕೆ ತಮ್ಮನ್ನೇ ಒಡ್ಡಿದ್ದಾರೆ ಈ ಆರೋಗ್ಯ ಸಚಿವ..!

ಹರಿಯಾಣ ಆರೋಗ್ಯ ಸಚಿವರು ಹಾಗೂ ಬಿಜೆಪಿ ಮುಖಂಡ ಅನಿಲ್ ವಿಜ್ ಕೊವಾಕ್ಸೀನ್ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಈ ಮೂಲಕ ಸ್ವಯಂ ಆಗಿ ಕೊರೋನಾ ಔಷಧ ಪ್ರಯೋಗ ತಮ್ಮ ದೇಹದ ಮೇಲೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಟ್ರೈಯಲ್ ಡೋಸ್ ಟೆಸ್ಟ್ ಮಾಡಿದ್ದು, ಸಚಿವರೇ ಪ್ರಯೋಗಕ್ಕೆ ಒಳಗಾಗಿದ್ದಾರೆ. ಅಂಬಲಾ ಕೆಂಟ್‌ನಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಇವರು ಔಷಧ ಪ್ರಯೋಗಕ್ಕೆ ಒಳಗಾಗಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ವಕ್ಕರಿಸಿದ ಕೊರೋನಾ ಸೋಂಕು; ಮೂವರು ಈಗ ಐಸೋಲೇಷನ್..!

ಟ್ವೀಟ್ ಮಾಡಿದ ಅನಿಲ್ ವಿಜ್ ಅವರು, ಪಿಜಿಐ ರೋಹ್ಟಕ್ ಮತ್ತು ಆರೋಗ್ಯ ಇಲಾಖೆಯ ವೈದ್ಯರ ತಂಡದ ತಜ್ಞರ ಮೇಲ್ವಿಚಾರಣೆಯಲ್ಲಿ ಅಂಬಾಲಾ ಕ್ಯಾಂಟ್‌ ಸಿವಿಲ್ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಕೊರೊನಾವೈರಸ್ ಲಸಿಕೆ # ಕೊವಾಕ್ಸಿನ್ ಎ ಭಾರತ್ ಬಯೋಟೆಕ್ ಉತ್ಪನ್ನದ ಪ್ರಯೋಗ ನನ್ನ ಮೇಲೆ ಮಾಡಲಾಗುತ್ತದೆ. ನಾನು ಸ್ವಯಂಪ್ರೇರಿತನಾಗಿ ಇದಕ್ಕೆ ತಯಾರಾಗಿದ್ದೇನೆ ಎಂದಿದ್ದಾರೆ.

'ಮೊದಲ ಹಂತದಲ್ಲಿ 94000 ಕೊರೋನಾ ಯೋಧರಿಗೆ ಲಸಿಕೆ'

ನವೆಂಬರ್ 18 ರಂದು, ಅಂಬಾಲಾ ಕ್ಯಾಂಟ್ ಶಾಸಕರು ಕೊವಾಕ್ಸಿನ್ ನ ಮೂರನೇ ಹಂತದ ಪ್ರಯೋಗ ನವೆಂಬರ್ 20 ರಂದು ಹರಿಯಾಣದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದರು. ಅವರು ಲಸಿಕೆ ಪಡೆದ ಮೊದಲ ಸ್ವಯಂಸೇವಕರಾಗಲು ಸಿದ್ಧರಿರುವುದಾಗಿ ಹೇಳಿದ್ದರು. ಔಷಧ ಪ್ರಯೋಗಕ್ಕೆ ಒಳಗಾಗುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು.

click me!