ಶತಾವರಿ ಎಂಬ ಔಷಧೀಯ ಸಸ್ಯ ಮಧುಮೇಹಕ್ಕೂ ಮದ್ದು

Published : Jan 05, 2019, 08:54 PM IST
ಶತಾವರಿ ಎಂಬ ಔಷಧೀಯ ಸಸ್ಯ ಮಧುಮೇಹಕ್ಕೂ ಮದ್ದು

ಸಾರಾಂಶ

ಅತಿ ಹೆಚ್ಚು ಔಷಧೀಯ ಗುಣಗಳಿರುವ ತುಳಸಿಯನ್ನು ದೇವರೆಂದು ಪೂಜಿಸುತ್ತೇವೆ. ಹಾಗೆಯೇ ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು ನೆಡುವುದು ಆಗತ್ಯ. ಅಂಥ ಸಸ್ಯಗಳು ಯಾವುವು?

ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲೀಷ್‌ನಲ್ಲಿ ಅಸ್ಪರಾಗಸ್ ಎನ್ನುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಎದೆಹಾಲು ಉತ್ಪತ್ತಿ, ಚರ್ಮ ರೋಗ, ಮಧುಮೇಹ ಮೊದಲಾದ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿ ಈ ಶತಾವರಿಗಿದೆ. ಇದರಿಂದೇನು ಉಪಯೋಗ?

ಡಯಾಬಿಟಿಸ್ ಕಂಟ್ರೋಲ್‌ಗೆ ಡಯಟ್ ಹೀಗಿರಲಿ...

- ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ. 
- ಇದರ ಬೇರನ್ನು ಅರೆದು ರಸ ತೆಗೆದು, ಹಾಲಿಗೆ ಬೆರೆಸಿ ದಿನವೂ ಒಂದೊಂದು ಲೋಟ ಕುಡಿಯಬೇಕು. 45 ದಿನಗಳ ಕಾಲ ಈ ಚಿಕಿತ್ಸೆ ಮಾಡಿದರೆ ಮಧುಮೇಹಕ್ಕೆ ಮದ್ದು. 
- ಶತಾವರಿ ಬೇರಿನ ರಸವನ್ನು ಹಾಲು ಸಕ್ಕರೆಯೊಂದಿಗೆ ಪೇಯ ತಯಾರಿಸಿ ಸೇವಿಸಿದರೆ, ಆರೋಗ್ಯ ವರ್ಧನೆಯಾಗುತ್ತದೆ.
- ಶತಾವರಿ ಬೇರನ್ನು ಅಥವಾ ಗಡ್ಡೆಯನ್ನು ಅರೆದು ಜೇನುತುಪ್ಪ ಬೆರೆಸಿ ಸೇವಿಸಿದರೆ, ವಸಡಿನಲ್ಲಿ ರಕ್ತಸ್ರಾವವಾಗೋ ಸಮಸ್ಯೆಗೆ ಮದ್ದು. 
- ಅಡುಗೆಯಲ್ಲಿ ಶತಾವರಿಯನ್ನು ಬಳಸುವುದರಿಂದ ಹೃದಯ ಸಮಸ್ಯೆ ಪರಿಹಾರವಾಗುತ್ತದೆ.
- ಶತಾವರಿ ಬೇರನ್ನು ಅರೆದು ಅದೇ ಪ್ರಮಾಣದ ಹಾಲು ಬೆರೆಸಿ ಕುಡಿದರೆ, ಮೂತ್ರಕೋಶದ ಕಲ್ಲೂ ಕರಗುತ್ತದೆ.
- ಡೆಲಿವರಿ ಆದ ನಂತರ ಎದೆಹಾಲು ಉತ್ಪತ್ತಿ ಆಗದೆ ಇದ್ದರೆ, ಶತಾವರಿ ಬೇರಿನ ಕಷಾಯ ಮಾಡಿ ಕುಡಿದರೊಳಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಲೈಟ್ ಆನ್ ಮಾಡಿ ನಿದ್ರೆ ಮಾಡೋ ಅಭ್ಯಾಸ ಇದೆಯೇ? ಹೃದಯ ಜೋಪಾನ
ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೆ? ಅಮ್ಮನ ಗರ್ಭ ಎರಡು ಬಾರಿ ಹೊಕ್ಕು ಬಂದ ಈ ಕಂದಮ್ಮ!