ಬೆಡ್ ಕಾಫಿ ಆರೋಗ್ಯಕ್ಕೆ ಕುತ್ತು...ಬೇಕಾ ಈ ಆಪತ್ತು?

Published : Dec 28, 2018, 03:48 PM IST
ಬೆಡ್ ಕಾಫಿ ಆರೋಗ್ಯಕ್ಕೆ ಕುತ್ತು...ಬೇಕಾ ಈ ಆಪತ್ತು?

ಸಾರಾಂಶ

ಕಾಫೀ.....ಪತಿರಾಯ ಬೆಳಗಾದ ಕೂಡಲೇ ಕೂಗೋದು ಕಾಮನ್. ಶ್ರೀ ಸಾಮಾನ್ಯನ ಜೀವನದಲ್ಲಿ ಪತಿಗೆ ಮಾತ್ರ ಇರುತ್ತೆ ಈ ಅವಕಾಶ. ಆದರೆ, ಕ್ಷಣ ಮಾತ್ರ ಮಜಾ ಕೊಡೋ ಈ ಅಭ್ಯಾಸ ನಿಜಕ್ಕೂ ಒಳ್ಳೆಯದಾ?  

ಹಲವರಿಗೆ ದಿನದ ಆರಂಭವಾಗುವುದು ಹಾಸಿಗೆ ಮೇಲೆ ಕಾಫಿ - ಟೀ ಜೊತೆ ನ್ಯೂಸ್ ಪೇಪರ್ ಇದ್ದರೆ ಮಾತ್ರ. ಹಲವರ ಮನೆಯಲ್ಲಿ ಈ ಪದ್ಧತಿ ಇದೆ. ಬ್ರಷ್ ಮಾಡದೇ ಹಾಗೂ ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದು ಗೊತ್ತಿದ್ದರೂ ಹಾಸಿಗೆಯಲ್ಲಿಯೇ ಕಾಫಿ, ಟೀ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. 

ಈ ಅಭ್ಯಾಸದಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಹಲವು ಸಂಶೋಧನೆಗಳೂ ಸಾಬೀತು ಪಡಿಸಿವೆ.

  • ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸಿದರೆ ದೈನಂದಿನ ಚಟುವಟಿಕೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ದಿನವಿಡೀ ಆಯಾಸ ಹಾಗೂ ಹೊಟ್ಟೆ ಸಮಸ್ಯೆ ಕಾಡುತ್ತದೆ. 
  • 8 ಗಂಟೆ ವಿಶ್ರಾಂತಿ ನಂತರ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ನೀರಿನ ಬದಲು ಟೀ ಸೇವಿಸಿದರೆ ಅದು ದೇಹವನ್ನು ಮತ್ತಷ್ಟು ಡೀಹೈಡ್ರೇಟ್ ಮಾಡುತ್ತದೆ. ಇದು ಮಾಂಸ ಖಂಡದ ನೋವಿಗೂ ಕಾರಣವಾಗಬಲ್ಲದು. 
  • ಟೀನಲ್ಲಿ ಸಕ್ಕರೆ ಮತ್ತು ಆಸಿಡಿಕ್ ಅಂಶ ಹೆಚ್ಚಿರುತ್ತದೆ. ಅದರಿಂದ ಬೆಳಗ್ಗೆ ಸೇವಿಸಿದರೆ ಹಲ್ಲುಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ. 
  • ಕಾಫಿಯಲ್ಲಿ ಕೆಫೀನ್ ಅಂಶ ಹೆಚ್ಚಿರುವುದರಿಂದ ತಲೆ ನೋವು, ತಲೆ ಸುತ್ತಿಗೂ ಕಾರಣವಾಗಬಲ್ಲದು. 

ಆರೋಗ್ಯ ತಜ್ಞರ ಪ್ರಕಾರ ಟೀ, ಹಾಲು ಅಥವಾ ಕಾಫಿ ಬದಲು ಜೀನು ನೀರು, ಮಜ್ಜಿಗೆ , ಜೀರಿಗೆ ನೀರು ಅಥವಾ ನಿಂಬೆ ಹಣ್ಣಿನ ನೀರು ಕುಡಿಯಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ