ಬೊಜ್ಜು ಹೊಟ್ಟೆಗೆ ಕಾರಣ ಈ ವಿಟಮಿನ್ ಕೊರತೆ...

Published : Dec 30, 2018, 03:54 PM IST
ಬೊಜ್ಜು ಹೊಟ್ಟೆಗೆ ಕಾರಣ ಈ ವಿಟಮಿನ್ ಕೊರತೆ...

ಸಾರಾಂಶ

ಮಹಿಳೆಯರು ಹೆಚ್ಚಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಸುಖಾ ಸುಮ್ಮನೆ ಸುಸ್ತು, ನಿದ್ರೆ ಬರೋಲ್ಲ ಎಂದು ತಲೆ ಕೆಡಿಸಿಕೊಳ್ಳುವ ಮಂದಿ ಬಹುತೇಕ ಈ ವಿಟಮಿನ್ ಕೊರತೆಯಿಂದಲೇ ಬಳಲುತ್ತಿರುತ್ತಾರೆ. ಅಲ್ಲದೇ....

Vitamin D is talk of the town. ದೇಹದ ಕೊಬ್ಬು ಕರಗಿಸುವುದು ಕಷ್ಟವಲ್ಲ. ಆದರೆ ಎಷ್ಟೇ ಯತ್ನಿಸಿದರೂ ಕರಗದಿದ್ದರೆ, ವಿಟಮಿನ್ ಡಿ ಕೊರತೆಯೂ ಕಾರಣವಾಗಿರಬಹುದು. 

ಕೂದಲು ಉದುರುವುದು, ಸ್ತನ ಸಿಡಿತ,  ಹೊಟ್ಟೆ ಊದುವುದು ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ಬೊಜ್ಜು ಹೆಚ್ಚಿದರೆ ವಿಟಮಿನ್ ಡಿ ಕೊರತೆ ಕಾರಣ. ಶೇ.40 ಮಂದಿ ಈ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತೆ ಸಂಶೋಧನೆ.

ವಿಟಮಿನ್ ಡಿ ಕೊರತೆಯನ್ನು ಔಷಧಿ, ಮಾತ್ರೆ ತೆಗೆದುಕೊಂಡು ಸರಿ ಮಾಡಿಕೊಳ್ಳಲು ಆಗುವುದಿಲ್ಲ. ಅಲ್ಲದೇ ಯಾವುದೇ ಆಹಾರ ಪದಾರ್ಥಗಳಲ್ಲಿಯೂ ಇದು ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ. ಬದಲಾಗಿ ಬರೀ ಕೇವಲ ಎಳೆ ಬಿಸಿಲಲ್ಲಿ ನಿಂತರೆ ಸಾಕು, ಈ ಕೊರತೆ ನೀಗಿಸಬಹುದು. ಬೆಳಗ್ಗೆ 8 ಗಂಟೆಯೊಳಗಿನ ಸೂರ್ಯನ ಕಿರಣಗಳು ಮೈ ಮೇಲೆ ಬಿದ್ದರೆ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

  • ಸೂರ್ಯ ನೆತ್ತಿಗೇರಿದರೂ ಹಾಸಿಗೆಯಲ್ಲಿಯೇ ಮಲಗಿರುವವರಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. 
  • 25-45 ವರ್ಷದ ಮಹಿಳೆಯರಲ್ಲಿ. ಅದರಲ್ಲೂ ಸೂರ್ಯ ಹುಟ್ಟೋ ಮುನ್ನ ಆಫೀಸ್‌ಗೆ ಹೋಗಿ, ಸೂರ್ಯ ಮುಳುಗಿದ ಮೇಲೆ ಆಫೀಸ್‌ ಬಿಡುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. 
  • ವಾರಕ್ಕೊಮ್ಮೆಯಾದರೂ ಸ್ತನ ಅದರಲ್ಲಿಯೂ ತೊಟ್ಟಿಗೆ ಎಣ್ಣೆ ಮಸಾಜ್ ಮಾಡಿಕೊಂಡು, ಸೂರ್ಯನ ಕಿರಣಗಳಿಗೆ ಮೈಯೊಡ್ಡಬೇಕು. 
  • ಆದಷ್ಟು ಮೊಟ್ಟೆ, ಅಣಬೆ ಇಲ್ಲವೇ ಮೀನು ತಿನ್ನಬೇಕು. ತಿಂಗಳುಗಟ್ಟಲೆ ಸಮಸ್ಯೆ ನಿವಾರಣೆಯಾಗಲು ಸಮಯ ತೆಗೆದುಕೊಳ್ಳುತ್ತದೆ. ಆದರೆ, ತೊಂದರೆ ನಿವಾರಿಸಿಕೊಂಡರೆ ಒಳಿತು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?