ಬರೋಬ್ಬರಿ 50 ಕೋಟಿಯ ತಮ್ಮ ಬಂಗಲೆ ಗಿಫ್ಟ್ ಮಾಡಿದ ಅಮಿತಾಬ್‌ ಬಚ್ಚನ್‌; ಕೊಟ್ಟಿದ್ದು ಅಭಿಷೇಕ್‌, ಐಶ್ವರ್ಯಾಗೆ ಅಲ್ಲ!

By Vinutha Perla  |  First Published Nov 25, 2023, 9:21 AM IST

ಅಮಿತಾಬ್‌ ಬಚ್ಚನ್ ಬಳಿಯಿರುವ ಬೆಲೆಬಾಳುವ ಆಸ್ತಿಗಳಲ್ಲಿ ಹಲವು ಸೈಟ್‌ಗಳು, ಬಂಗಲೆಗಳು, ಐಷಾರಾಮಿ ಕಾರುಗಳು ಒಳಗೊಂಡಿವೆ. ಅದರಲ್ಲೂ ಇವರ 50 ಕೋಟಿ ರೂಪಾಯಿ ಬಂಗಲೆ 'ಪ್ರತೀಕ್ಷಾ' ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಗಮನ ಸೆಳೆದಿದೆ. ಇತ್ತೀಚಿಗೆ ನಟ ಈ ಬೆಲೆ ಬಾಳುವ ಬಂಗಲೆಯನ್ನು ತಮ್ಮ ಆತ್ಯಾಪ್ತರೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ.  ಯಾರವರು?


ಬಾಲಿವುಡ್‌ನ ಖ್ಯಾತ ನಟ ಅಮಿತಾಬ್‌ ಬಚ್ಚನ್‌. ಐದು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ,  200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬಚ್ಚನ್ ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅಮಿತಾಬ್ ಬಚ್ಚನ್ ಸಿನಿಮಾವೊಂದಕ್ಕೆ ಹಲವು ಲಕ್ಷಗಳನ್ನು ಪಡೆಯುತ್ತಾರೆ. ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ ಕೋಟಿಗಳಲ್ಲಿ ಶುಲ್ಕ ವಿಧಿಸುತ್ತಾರೆ. ಹಾಗೆಯೇ ಇವರ ಒಟ್ಟು ಆಸ್ತಿ ಮೌಲ್ಯ ಸಹ ಎಂಥವರನ್ನೂ ನಿಬ್ಬೆರಗಾಗಿಸುವಂತಿದೆ.

ವರದಿಗಳ ಪ್ರಕಾರ, ಈ ಹಿರಿಯ ನಟ ಸುಮಾರು 60 ಕೋಟಿ ವಾರ್ಷಿಕ ಆದಾಯದೊಂದಿಗೆ 3,190 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಮಿತಾಬ್‌ ಬಚ್ಚನ್ ಬಳಿಯಿರುವ ಬೆಲೆಬಾಳುವ ಆಸ್ತಿಗಳಲ್ಲಿ ಹಲವು ಸೈಟ್‌ಗಳು, ಬಂಗಲೆಗಳು, ಐಷಾರಾಮಿ ಕಾರುಗಳು ಒಳಗೊಂಡಿವೆ. ಅದರಲ್ಲೂ ಇವರ 50 ಕೋಟಿ ರೂಪಾಯಿ ಬಂಗಲೆ 'ಪ್ರತೀಕ್ಷಾ' ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಗಮನ ಸೆಳೆದಿದೆ. ಇತ್ತೀಚಿಗೆ ನಟ ಈ ಬೆಲೆ ಬಾಳುವ ಬಂಗಲೆಯನ್ನು ತಮ್ಮ ಆತ್ಯಾಪ್ತರೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಇದು ಅಮಿತಾಬ್‌ ಬಚ್ಚನ್‌ ಮಗ ಅಭಿಷೇಕ್ ಬಚ್ಚನ್‌ ಅಥವಾ ಸೊಸೆ ಐಶ್ವರ್ಯಾ ರೈಗೆ ಆಗ್ಲೀ ಅಲ್ಲ. ಮತ್ಯಾರಿಗೆ?

Tap to resize

Latest Videos

ಅಮಿತಾಭ್‌ ಬಚ್ಚನ್‌ಗೂ ಹೆಂಡ್ತಿ ಭಯವಂತೆ, ಮಡದಿ ಮಲಗಿದ ಮೇಲೆ ಈ ಕೆಲ್ಸ ಮಾಡೋದಂತೆ!

ಕಾಸ್ಟ್ಲೀ ಬಂಗಲೆಯನ್ನು ಗಿಫ್ಟ್‌ ಆಗಿ ಕೊಟ್ಟಿದ್ದು ಅಭಿಷೇಕ್ ಬಚ್ಚನ್‌-ಐಶ್ವರ್ಯಾಗೆ ಅಲ್ಲ
ಅಮಿತಾಬ್ ಬಚ್ಚನ್ ತಮ್ಮ ಬೆಲೆಬಾಳುವ 50 ಕೋಟಿ ರೂಪಾಯಿಗಳ ಬಂಗಲೆ 'ಪ್ರತೀಕ್ಷಾ'ವನ್ನು ತಮ್ಮ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬೃಹತ್‌ ಬಂಗಲೆ (Bunglow) ಜುಹುದಲ್ಲಿ 890.47 ಚದರ ಮೀಟರ್ ಮತ್ತು 674 ಚದರ ಮೀಟರ್ ಗಾತ್ರದ ಎರಡು ಪ್ಲಾಟ್‌ಗಳಲ್ಲಿದೆ. ಇದನ್ನು ಮೊಮ್ಮಗಳು ಶ್ವೇತಾಗೆ ಉಡುಗೊರೆ (Gift)ಯಾಗಿ ನೀಡಿದ್ದಾರೆ ಎಂದು ತೋರಿಸಿದೆ.

ವರದಿಯ ಪ್ರಕಾರ, ದಾಖಲೆಗಳ ಬದಲಾವಣೆಯನ್ನು ನವೆಂಬರ್ 8ರಂದು ಕಾರ್ಯಗತಗೊಳಿಸಲಾಯಿತು. ಗಿಫ್ಟ್ ಡೀಡ್‌ಗಾಗಿ. ಅಮಿತಾಬ್ ಬಚ್ಚನ್ ವ್ಯವಹಾರಕ್ಕಾಗಿ 50.65 ಲಕ್ಷ ರೂಪಾಯಿಗಳಶುಲ್ಕವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಎರಡೂ ಪ್ಲಾಟ್‌ಗಳು ವಿಠಲ್ ನಗರ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ನ ಭಾಗವಾಗಿದೆ ಎಂದು ಡಾಕ್ಯುಮೆಂಟ್ ತೋರಿಸಿದೆ. ಡಾಕ್ಯುಮೆಂಟ್ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರನ್ನು ದಾನಿಗಳೆಂದು ತೋರಿಸಿದೆ.  ಶ್ವೇತಾ ನಂದಾ ಅವರು ದಾನಿಗಳಾಗಿದ್ದಾರೆ. 

ಬಚ್ಚನ್ ಕುಟುಂಬದ ಮತ್ತೊಂದು ಕುಡಿ ಬಾಲಿವುಡ್‌ಗೆ: ತಾತ, ಮಾವಂಗೆ ಸಡ್ಡು ಹೊಡೀತಾನಾ ಅಗಸ್ತ್ಯ?

ಗೇಮ್ ಶೋ, ಕೌನ್ ಬನೇಗಾ ಕರೋಡ್‌ಪತಿಯ ಒಂದು ಸಂಚಿಕೆಯಲ್ಲಿ, ಅಮಿತಾಬ್ ಬಚ್ಚನ್ ತಮ್ಮ ತಂದೆ ಡಾ ಹರಿವಂಶರನ್ ರೈ ಬಚ್ಚನ್ ಅವರ ಬಂಗಲೆಗೆ ಪ್ರತೀಕ್ಷಾ ಎಂದು ಹೆಸರಿಟ್ಟಿದ್ದಾಗಿ ಬಹಿರಂಗಪಡಿಸಿದ್ದರು. ಅವರ ತಂದೆಯ ಕವಿತೆಯಲ್ಲಿ 'ಸ್ವಾಗತ್ ಸಬ್ಕೆ ಲಿಯೇ ಯಹಾಂ ಪರ್ ನಹಿ ಕಿಸಿಕೆ ಲಿಯೇ ಪ್ರತೀಕ್ಷಾ' ಎಂದು ಉಲ್ಲೇಖಿಸಲಾಗಿತ್ತು.

ಪ್ರತೀಕ್ಷಾ ಜುಹುದಲ್ಲಿ ಅಮಿತಾಬ್ ಬಚ್ಚನ್ ಅವರ ಮೊದಲ ಬಂಗಲೆಯಾಗಿತ್ತು ಮತ್ತು ಅವರು ಇಲ್ಲಿ ತಮ್ಮ ಪೋಷಕರೊಮದಿಗೆ ವಾಸಿಸುತ್ತಿದ್ದರು. ಅಮಿತಾಬ್ ಬಚ್ಚನ್ ಅವರ ತಾಯಿ ತೇಜಿ ಮತ್ತು ತಂದೆ, ಕವಿ ಹರಿವಂಶ್ ರಾಯ್ ಬಚ್ಚನ್.

click me!