
ಮುಂಜಾನೆ ಎದ್ದು ಚಹಾ ಕುಡಿಯೋದ್ರಲ್ಲಿ ಏನೋ ಒಂಥರಾ ಮಜಾ ಇರುತ್ತೆ.. ಜೊತೆಗೆ ಮನಸ್ಸು ಕೂಡ ಫ್ರೆಶ್ ಆಗುತ್ತದೆ. ಆದರೆ ಹೆಚ್ಚಿನ ಜನ ಜಾಸ್ತಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಅದು ಗ್ರೀನ್ ಟೀ ಇರಬಹುದು, ಇತರ ಚಹಾಗಳು ಇರಬಹುದು. ಸಂಶೋಧನೆಯಲ್ಲಿ ಚಹಾ ಕುಡಿಯೋದ್ರಿಂದ ಒಳ್ಳೆಯದ್ದು ಇದೆ ಎಂದು ತಿಳಿಸಿದೆ. ಹಾಗಿದ್ರೆ ಚಹಾ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ...
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
- ಚಹಾ ಕುಡಿದರೆ ಮೂಡ್ ಫ್ರೆಶ್ ಆಗುತ್ತದೆ. ಇದು ಕೆಲವೊಮ್ಮೆ ಜನರ ನಂಬಿಕೆಯಿಂದ ಕೂಡ ನಿಜ ಆಗಿದೆ.
- ಹೆಚ್ಚಿನ ದೇಹ ತೂಕ ಹೊಂದಿರುವವರು ತೂಕ ಕಡಿಮೆ ಮಾಡಿಕೊಳ್ಳಲು ಚಹಾ ಎಲೆ ಸಹಕಾರಿ. ಗ್ರೀನ್ ಟೀ ಸೇವನೆ ಮಾಡಿದರೆ ದೇಹ ತೂಕ ಬ್ಯಾಲೆನ್ಸ್ ಆಗಿರುತ್ತದೆ.
- ಹೃದಯದ ಆರೋಗ್ಯವನ್ನು ಕಾಪಾಡಲು ಚಹಾ ಅತ್ಯುತ್ತಮ ದ್ರವ್ಯ. ಹಾಗಂತ ಹೆಚ್ಚು ಕುಡಿಯಬಾರದು. ನಿಯಮಿತವಾಗಿ ಸೇವನೆ ಮಾಡಿದರೆ ಉತ್ತಮ.
- ಮೂತ್ರಕೋಶ ಗ್ರಂಥಿ ಕ್ಯಾನ್ಸರ್ ನಿಯಂತ್ರಿಸಲು ಟೀ ಸಹಕಾರಿ. ಚಹಾದಲ್ಲಿ ಹಲವು ವಿಧಗಳಿವೆ. ಔಷಧೀಯ ಗುಣಗಳುಳ್ಳ ಚಹಾದಿಂದ ಹಲವು ಸಮಸ್ಯೆ ನಿವಾರಣೆಯಾಗುತ್ತದೆ.
- ಚಹಾದಲ್ಲಿರುವ ಪೋಲಿಫೆನೋಲ್ಸ್ ಮತ್ತು ಕೆಫೈನ್ ಅಂಶಗಳು ಶಕ್ತಿ ಖರ್ಚಾಗುವುದಕ್ಕೆ ಮತ್ತು ಕೊಬ್ಬು ಕರಗಿಸುವುದಕ್ಕೆ ದಾರಿಯಾಗಿರುತ್ತದೆ.
- ಗ್ರೀನ್ ಟೀ ಸೇವಿಸುವುದರಿಂದ ಕೆಲವು ಕ್ಯಾನ್ಸರ್ ಕಾರಕ ಅಂಶಗಳು ನಿವಾರಕವಾಗುತ್ತದೆ.
- ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಚಹಾಕ್ಕೆ ಇದೆ.
- ಅಷ್ಟೇ ಅಲ್ಲಾ ಲವಲವಿಕೆಯುಕ್ತ ದಿನ ನಿಮ್ಮದಾಗಲು ಚಹಾ ಸಹಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.