ದುಬಾರಿಯಾದ ಕಾಂಜೀವರಂ ಸೀರೆ ಹೆಚ್ಚು ಕಾಲ ಇರುವಂತೆ ನೋಡಿಕೊಳ್ಳುವುದು ಕಷ್ಟ. ಆ ಕಷ್ಟವನ್ನು ಕಡಿಮೆಮಾಡಲು ಇಲ್ಲಿವೆ ಒಂದಿಷ್ಟು ಟಿಪ್ಸ್.
ಕಾಂಜೀವರಂ ಸೀರೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ದುಬಾರಿಯಾದರೂ ಹೆಣ್ಣು ಮಕ್ಕಳು ಹೆಚ್ಚು ಇಷ್ಟ ಪಡುವ, ಹಬ್ಬ ಹರಿದಿನಗಳಲ್ಲಿ ಮುಖ್ಯ ಪಾತ್ರವಹಿಸುವ ಸೀರೆ ಎಂದರೆ ಅದು ಕಾಂಜೀವರಂ. ಸುಂದರವಾಗಿರುವ ಈ ಸೀರೆ ಉಡಲು ಸುಲಭ. ಆದರೆ ಹಾಳಾಗದಂತೆ ಕಾಪಾಡುವುದು ಮಾತ್ರ ಕಷ್ಟ ಕಷ್ಟ. ಆ ಕೆಲಸವನ್ನು ಸುಲಭವಾಗಿಸಲು ಒಂದಿಷ್ಟು ಉಪಾಯಗಳು ಇಲ್ಲಿವೆ.
ಡ್ರೈ ಕ್ಲೀನ್ ಮಾಡಿಸಿ: ಕಾಂಜಿವರಮ್ ಸೀರೆಯನ್ನು ಪದೇ ಪದೇ ಡ್ರೈ ಕ್ಲೀನ್ ಮಾಡಿಸಬೇಡಿ, ಎರಡು ಮೂರು ಬಾರಿ ಧರಿಸಿದ ನಂತರ ಡ್ರೈ ಕ್ಲೀನ್ ಮಾಡಿಸಿ. ಸ್ಪ್ರೇಯಿಂದ ದೂರವಿರಿ: ಕಾಂಜೀವರಂ ಸೀರೆಯ ಮೇಲೆ ಯಾವುದೆ ರೀತಿಯ ಬಾಡಿ ಸ್ಪ್ರೇ, ಪರ್‌ಫ್ಯೂಮ್ ಅಥವಾ ಡಿಯೋಡ್ರಂಟ್ ಬಳಸಬೇಡಿ. ಸೀರೆ ಡ್ಯಾಮೇಜ್ ಆಗುತ್ತದೆ.
ಶ್ಯಾಂಪೂವಿನಿಂದ ತೊಳೆಯಿರಿ: ಕಾಂಜೀವರಮ್ ಸೀರೆ ತುಂಬಾ ದುಬಾರಿಯಾಗಿರುತ್ತದೆ. ಆದುದರಿಂದ ಡ್ರೈ ಕ್ಲೀನ್ ಮಾಡುವುದು ಬೆಸ್ಟ್ ಆಯ್ಕೆ. ಇಲ್ಲವಾದರೆ ಸೀರೆಯನ್ನು ಸಾಬೂನಿನ ಬದಲು ಶ್ಯಾಂಪೂ ಹಾಕಿ ವಾಶ್ ಮಾಡಿ. ಜಾಸ್ತಿ ವಾಷ್ ಮಾಡಲು ಹೋಗಬೇಡಿ.
ದುಬಾರಿ ಸೀರೆಗಳನ್ನು ನಾಜೂಕಾಗಿ ತೆಗೆದಿಡುವುದು ಹೇಗೆ?
ಹತ್ತಿ ಬಟ್ಟೆಯಲ್ಲಿ ಸುತ್ತಿಡಿ: ನಿಮ್ಮ ಸೀರೆಯನ್ನು ಹೊಸದರಂತೆ ಕಾಪಾಡಲು ಹತ್ತಿ ಬಟ್ಟೆಯಲ್ಲಿ ಸುತ್ತಿಡಿ. ನಂತರ ಅದನ್ನು ಹ್ಯಾಂಗರ್‌ನಲ್ಲಿ ತೂಗಿಸಿಡಿ. ಎಲ್ಲಾ ಸೀರೆಯನ್ನು ಬೇರೆ ಬೇರೆಯಾಗಿ ಜೋಡಿಸಿ.
ಬಿಸಿಲಿಗೆ ಹಾಕಿ: ನೀವು ಅದನ್ನು ಉಪಯೋಗ ಮಾಡದಿದ್ದರೂ ನಿಯಮಿತವಾಗಿ ಅದನ್ನು ಬಿಸಿಲಿಗೆ ಹಾಕಿ ಒಣಗಿಸಬೇಕು. ಇದರಿಂದ ಸೀರೆ ಬಣ್ಣ ಹಾಗೆಯೇ ಉಳಿಯುತ್ತದೆ.ಮತ್ತೆ ಮತ್ತೆ ಮಡಚಿ: ಒಂದೇ ಭಂಗಿಯಲ್ಲಿ ಸೀರೆಯನ್ನು ಮಡಚಿ ಇಡಬೇಡಿ. ಬದಲಾಗಿ ಅದನ್ನು ಆಗಾಗ ಬಿಡಿಸಿ, ಬೇರೆ ರೀತಿಯಾಗಿ ಫೋಲ್ಡ್ ಮಾಡಿ ಮಡಚಿ. ಇದರಿಂದಲೂ ಸೀರೆ ತುಂಬಾ ಸಮಯದವರೆಗೆ ಬಾಳಿಕೆ ಬರುತ್ತದೆ.