ಮುದ್ದು ಮುದ್ದಾದ ಮುಖಕ್ಕೆ ಬೇಕು ಓಟ್ಸ್ !

By Web Desk  |  First Published Jun 1, 2019, 10:59 AM IST

ನೀವು ಫಿಟ್‌ನೆಸ್ ಬಗ್ಗೆ ತುಂಬಾ ತಲೆಕೆಡಿಸುವವರಾಗಿದ್ದರೆ, ಖಂಡಿತವಾಗಿಯೂ ನಿಮ್ಮ ಡಯಟ್‌ನಲ್ಲಿ ಓಟ್ಸ್ ಇರಲೇಬೇಕು. ಆದರೆ ನಿಮಗೆ ಗೊತ್ತಾ ಈ ಓಟ್ಸ್ ಫಿಟ್ ಆಗಿರಲು ಸಹಾಯ ಮಾಡೋದರ ಜೊತೆ ಜೊತೆಗೆ ಮುದ್ದು ಮುದ್ದಾದ ತ್ವಚೆ ನಿಮ್ಮದಾಗಿಸುತ್ತದೆ. 


ಉತ್ತಮ ಆರೋಗ್ಯಕ್ಕೆ ಅಥವಾ ತೂಕ ಕಳೆದುಕೊಳ್ಳಲು ಒಂದು ಬೌಲ್ ಪೂರ್ತಿ ಓಟ್ಸ್ ತಿಂದರೆ ಸಾಕು. ಇದು ಡೆಡ್ ಸ್ಕಿನ್, ಬ್ಲಾಕ್ ಹೆಡ್  ನಿವಾರಿಸುತ್ತದೆ. ಆದರೆ ಇದನ್ನು ಹೇಗೆ ಬಳಸಬೇಕು  ಅನ್ನೋದು ತಿಳಿದಿದ್ದರೆ ಸಾಕು.. 

Tap to resize

Latest Videos

- ಓಟ್ಸ್‌ಗೆ ನೀರು ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಫೇಸ್ ಮಾಸ್ಕ್‌ನಂತೆ ಹಚ್ಚಿ. ಇದರಿಂದ  ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. 

- ಓಟ್ಸ್‌ನಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಮಾಯಿಶ್ಚರೈಸ್ ನೀಡುತ್ತದೆ.  ಎರಡೂ ಚಮಚ ಓಟ್ಸ್ ಪುಡಿಗೆ ಒಂದು ಚಮಚ ಜೇನುತುಪ್ಪ, ಎರಡು ಚಮಚ ಹಾಲು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಸ್ಕಿನ್ ಸಾಫ್ಟ್ ಆಗುತ್ತದೆ. 

- ಓಟ್ಸ್‌ಗೆ  ಸ್ವಲ್ಪ ಟೊಮ್ಯಾಟೋ ಹಣ್ಣಿನ ತಿರುಳನ್ನು ಬೆರಸಿ.  ಮೆತ್ತಗಾದ ಬಳಿಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಲ್ಲಿರುವ ಟೊಮ್ಯಾಟೋ ಮುಖದ ಬಣ್ಣವನ್ನು ತಿಳಿಯಾಗಿಸುತ್ತದೆ. 

ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

- ಡ್ರೈ ಸ್ಕಿನ್ ಸಮಸ್ಯೆ ಇದ್ದವರು ಸ್ನಾನ ಮಾಡುವ ನೀರಿಗೆ ಓಟ್ಸ್ ಮತ್ತು ಬೇಕಿಂಗ್ ಸೋಡಾ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ನಿಯಮಿತವಾಗಿ ಮಾಡಿದರೆ ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತೆ. 

- ಎರಡು ಚಮಚ ಓಟ್ಸ್‌ಗೆ ಅರ್ಧ ಹೋಳು ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆಯಿರಿ. ಇದು ಆಯ್ಲಿ ಸ್ಕಿನ್ ಸಮಸ್ಯೆಗೆ ಮದ್ದು.  

- ಓಟ್ಸ್ ಜೊತೆಗೆ ಯೋಗರ್ಟ್ ಮಿಕ್ಸ್ ಮಾಡಿ ಅದಕ್ಕೆ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆದರೆ ಬ್ಲಾಕ್ ಹೆಡ್ಸ್ ನಿವಾರಣೆಯಾಗಿ ಮುಖ ಸಾಫ್ಟ್ ಆಗುತ್ತೆ. 

ಬಾಯಿಗೂ ರುಚಿ, ದೇಹಕ್ಕೂ ಹಿತವಾದ ಓಟ್ಸ್ ದೋಸೆ

- ತುರಿಕೆ ಸಮಸ್ಯೆ ಇದ್ದರೆ ಹಾಲಿನ ಜೊತೆ ಓಟ್ಸ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣಗೆ ನೀರಿನಲ್ಲಿ ತೊಳೆಯಿರಿ. ಇದರಿಂದ ತುರಿಕೆ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ. 

click me!