ಕೇವಲ ಜಿಮ್‌ನಿಂದ ಇರುತ್ತಾ ದೇಹ ಫಿಟ್?

Published : May 31, 2019, 12:39 PM IST
ಕೇವಲ ಜಿಮ್‌ನಿಂದ ಇರುತ್ತಾ ದೇಹ ಫಿಟ್?

ಸಾರಾಂಶ

ಫಿಟ್‌ನೆಸ್ ಫ್ರೀಕ್ ನೀವಾಗಿದ್ದರೆ ಯಾರ‍್ಯಾರೋ ಹೇಳಿದ ತಪ್ಪು ಕಲ್ಪನೆಗಳನ್ನು ನಂಬಬೇಡಿ. ಬದಲಾಗಿ ಸರಿಯಾದ ರೀತಿಯಲ್ಲಿ ವರ್ಕ್‌ಔಟ್ ಮಾಡಿ ಟೋನ್ಡ್ ಬಾಡಿ ಪಡೆದುಕೊಳ್ಳಿ. 

ವರ್ಕ್ ಔಟ್ ಮಾಡಿ ಸದೃಢ ಮೈಕಟ್ಟು ಪಡೆಯಲು ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಅದಕ್ಕಾಗಿ ಯಾರು ಏನೇ ಸಲಹೆ ನೀಡಿದರೂ ಅದನ್ನೇ ನಿಜವೆಂದು ಫಾಲೋ ಮಾಡ್ತಾರೆ. ನೀವು ಹಾಗೆ ಮಾಡ್ತಿದ್ರೆ ಇಂದೇ ಬದಲಾಗಿ. ಇಲ್ಲಾಂದ್ರೆ ನಿಮ್ಮ ಸ್ಟ್ರಾಂಗ್ ಬಾಡಿ ಕನಸು ಕನಸಾಗಿಯೇ ಉಳಿಯುತ್ತೆ. 



- ಹೆಚ್ಚು ವರ್ಕ್ ಔಟ್ ಮಾಡಿದರೆ ಬೇಗ ದೇಹ ಸದೃಢವಾಗಿ ಬೆಳೆಯುತ್ತದೆ ಎಂದು ಕೊಂಡರೆ ತಪ್ಪು. ಒಂದೇ ಸಲ ಹೆಚ್ಚು ಹೆಚ್ಚು ವರ್ಕ್‌ಔಟ್ ಮಾಡಿದರೆ, ದೇಹ ಹೆಚ್ಚು ಘಾಸಿಗೊಳ್ಳುತ್ತದೆ. 

- ಕೆಲವೊಂದು ಆಹಾರಗಳನ್ನು ಸೇವಿಸದಿದ್ದರೆ, ಡಯಟ್ ಸ್ಕಿಪ್ ಮಾಡಿದರೆ ಬೇಗ ತೂಕ ಕಳೆದುಕೊಳ್ಳಬಹುದು ಎಂದು ಅಂದುಕೊಳ್ಳಬೇಡಿ. ಸಮ ಪ್ರಮಾಣದ ಡಯಟ್ ಮೂಲಕ ಮಾತ್ರ ತೂಕ ಇಳಿಕೆ ಸಾಧ್ಯ. 

40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

- ಅಥ್ಲೀಟ್‌ಗಳು ಯಾವುದೇ ಸಮಯದಲ್ಲಿ ವರ್ಕ್ಔಟ್ ಮಾಡಬಹುದು ಅನ್ನೋದು ತಪ್ಪು. ಸಂಜೆ ವರ್ಕ್ಔಟ್ ಮಾಡೋದು ಬೆಸ್ಟ್. ಈ ಸಮಯದಲ್ಲಿ ಬಾಡಿ ಟೆಂಪರೇಚರ್ ಹೆಚ್ಚಿರುತ್ತದೆ. ಬೆಸ್ಟ್ ರಿಸಲ್ಟ್ ಸಿಗುತ್ತದೆ.

-ವರ್ಕ್ ಔಟ್ ಮೂಲಕ ಹೆಚ್ಚು ಕ್ಯಾಲೋರಿ ಇಳಿಸಿಕೊಂಡರೆ ಹೆಚ್ಚು ಹಸಿವಾಗುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಅಧ್ಯಯನಗಳು ತಿಳಿಸಿದಂತೆ ಎಕ್ಸರ್ಸೈಜ್‌ಗೂ ಸೇವಿಸುವ ಆಹಾರಕ್ಕೂ ಇಲ್ಲ ಸಂಬಂಧ. 

ಕೇವಲ ಜಿಮ್ ಮಾಡಿದರೆ ಸಾಕು ದೇಹ ಫಿಟ್ ಮತ್ತು ಸ್ಟ್ರಾಂಗ್ ಆಗಲು ಎಂದು ಹೆಚ್ಚಿನ ಯುವ ಜನತೆ ನಂಬಿದ್ದಾರೆ. ಆದರೆ ಎಷ್ಟು ವರ್ಕ್ ಮಾಡುತ್ತೀರೋ ಅದಕ್ಕೆ ಸರಿಯಾಗಿ ಆಹಾರ ಸೇವಿಸಿದರೆ ಮಾತ್ರ ದೇಹ ನೀವು ಅಂದುಕೊಂಡಂತಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!