ತುಂಬಾ ಶಾರ್ಟ್ ಇದ್ದೀರಾ? ಹೀಲ್ಸ್ ಇಲ್ಲದೇನೂ ಹೈಟ್ ಆಗಿ ಕಾಣಿಸ್ಕೊಳ್ಳಿ...

By Web Desk  |  First Published May 31, 2019, 3:17 PM IST

ತುಂಬಾ ಶಾರ್ಟ್ ಇದ್ದೀರಾ? ಹೈಟ್ ಆಗಿ ಕಾಣಿಸಲು ಟ್ರೈ ಮಾಡಿ ಬೇರೆ ಬೇರೆ ಹೀಲ್ಸ್ ಧರಿಸುತ್ತಿದ್ದರೆ, ಇವನ್ನೂ ಟ್ರೈ ಮಾಡಿ. ಹೀಲ್ಸ್ ಇಲ್ಲದೆ ಹೈಟ್ ಕಾಣಿಸುವ ಮ್ಯಾಜಿಕ್ ಟ್ರಿಕ್ಸ್ ಇವು... 


ಬ್ಯೂಟಿ ಅಥವಾ ಫ್ಯಾಷನ್ ಹೆಸರು ಬಂದಾಗ ಎಲ್ಲರೂ ಇಷ್ಟಪಡೋದು ಹೈಟ್ ಇರಬೇಕೆಂದು. ಭಾರತೀಯ ಮಹಿಳೆಯರ ಸರಾಸರಿ ಹೈಟ್ ಐದಡಿ.  ಹೈಟ್ ಆಗಿ ಕಾಣಲು ಹುಡುಗೀರು ಹೀಲ್ಸ್ ಧರಿಸುತ್ತಾರೆ. ಹಾಗಂತ ಯಾವಾಗಲೂ ಹೀಲ್ಸ್ ಧರಿಸಿದರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದ್ರೆ ಏನು ಮಾಡೋದು? ಈ ಫ್ಯಾಷನ್ ಟ್ರಿಕ್ಸ್ ಪಾಲಿಸಿ... . 

ಮೋನೋಕ್ರೊಮ್ ಔಟ್ ಫಿಟ್: ಮೇಲಿಂದ ಕೆಳಗಿನವರೆಗೆ ಎಲ್ಲ ಒಂದೇ ಬಣ್ಣದ ಡ್ರೆಸ್ ಧರಿಸಿದರೆ ನಿಮ್ಮ ಹೈಟ್ ಸ್ವಲ್ಪ ಜಾಸ್ತಿನೇ ಕಾಣಿಸುತ್ತದೆ. ಆದರೆ ಯಾವತ್ತೂ ಟಾಪ್ ಮತ್ತು ಬಾಟಮ್ ಬೇರೆ ಬೇರೆ ಬಣ್ಣದ್ದು ಧರಿಸಬೇಡಿ. ಇದರಿಂದ ಇನ್ನಷ್ಟು ಶಾರ್ಟ್ ಆಗಿ ಕಾಣಿಸುವಿರಿ. 

ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಸ್ಟೈಲಿಶ್ ಕಾಣಿಸೋದು ಹೇಗೆ?

ಡಾರ್ಕ್ ಕಲರ್: ನೀವು ಯಾವುದೇ ಡ್ರೆಸ್ ಧರಿಸಿ ಅವುಗಳ ಬಣ್ಣ ಕಪ್ಪು, ನೀಲಿ, ಹಸಿರು, ಕೆಂಪು, ಕಂಡು, ನೇರಳೆ , ಡಾರ್ಕ್ ಗ್ರೇ ಬಣ್ಣದ್ದಾಗಿದ್ದರೆ ಸ್ಲಿಮ್ ಆಗಿ ಕಾಣುವಿರಿ. ಜತೆಗೆ ಎತ್ತರವೂ ಕಾಣಿಸುತ್ತೀರಿ. 

ವರ್ಟಿಕಲ್ ಲೈನ್: ಎಲ್ಲಾ ಸೀಸನ್‌‌ಗೂ ಮ್ಯಾಚ್ ಆಗುವ ಡ್ರೆಸ್ ಎಂದರೆ ಅದು ಸ್ಟ್ರಿಪ್ ಡ್ರೆಸ್. ಇಂತಹ ಡ್ರೆಸ್‌ಗಳಲ್ಲಿ ಎತ್ತರವಾಗಿ ಕಾಣಿಸಬೇಕೆಂದರೆ ಅಡ್ಡ ಲೈನ್ ಇರುವ ಡ್ರೆಸ್ ಯಾವತ್ತೂ ಧರಿಸಬೇಡಿ. ಬದಲಾಗಿ ವರ್ಟಿಕಲ್ ಲೈನ್ , ಸ್ಟ್ರಿಪ್ ಇರುವ ಡ್ರೆಸ್ ಧರಿಸಿದರೆ ಹೈಟ್ ಕಾಣಿಸುತ್ತೀರಿ.

ಹೈ ವೈಸ್ಟ್ ಬಾಟಮ್ : ಪ್ಯಾಂಟ್, ಸ್ಕರ್ಟ್, ಸ್ಕಿನ್ನೀ ಜೀನ್ಸ್ ಅಥವಾ ಶಾರ್ಟ್ ಏನೇ ಧರಿಸಿ, ಆದರೆ ನಿಮ್ಮ ಹೈಟ್ ಹೆಚ್ಚಿರುವಂತೆ ಇಲ್ಯೂಶನ್ ಕ್ರಿಯೇಟ್ ಮಾಡಲು ಹೈ ವೈಸ್ಟ್ ಬಾಟಮ್ ಧರಿಸಿ. ಇದರಿಂದ ಕಾಲು ಉದ್ದವಾಗಿ ಕಾಣಿಸಿ, ಉದ್ದ ಕಾಣಬಹುದು. 

Tap to resize

Latest Videos

ಬೇಸಿಗೆಗೆ ಮ್ಯಾಕ್ಸಿ ಡ್ರೆಸ್‌ ಸೊಗಸು!

ವಿ ನೆಕ್ ಲೈನ್: ವಿ ನೆಕ್ ಶಾರ್ಟ್ ಹುಡುಗಿಯರಿಗೆ ಬೆಸ್ಟ್. ವಿ ಶರ್ಟ್, ವಿ ನೆಕ್ ಟಾಪ್ಸ್, ಡ್ರೆಸ್ ಎಲ್ಲವೂ ನೆಕ್ ಉದ್ದವಾಗಿರುವ ಫೀಲ್ ಕೊಡುತ್ತದೆ. ಅದರಲ್ಲೂ ಸ್ಲೀವ್ ಲೆಸ್ ಅಥವಾ ಶಾರ್ಟ್ ಸ್ಲೀವ್ ಧರಿಸಿದರೆ ಉತ್ತಮ. 

ಸ್ಲಿಟ್ ಇರುವ ಸ್ಕರ್ಟ್, ಗೌನ್ : ಸ್ಲಿಟ್ ಇರುವ ಸ್ಕರ್ಟ್, ಡ್ರೆಸ್ ಕಾಲು ಉದ್ದವಾಗಿರುವಂತೆ ಮಾಡುತ್ತದೆ. ಸ್ಲಿಟ್ ಹಿಂದೆ, ಮುಂದೆ, ಸೈಡ್ ಎಲ್ಲಾದರೂ ಇರಲಿ. ಒಟ್ಟಲ್ಲಿ ಕಾಲು ಕಂಡರೆ ಸಾಕು. 

ಮ್ಯಾಕ್ಸಿ ಲೆಂಗ್ತ್ ಡ್ರೆಸ್, ಸ್ಕರ್ಟ್: ಮ್ಯಾಕ್ಸಿ ಡ್ರೆಸ್ ನಿಮ್ಮನ್ನು ಕೇವಲ ಹೈಟ್ ಆಗಿರುವಂತೆ ಮಾತ್ರವಲ್ಲ ಸ್ಲಿಮ್ ಆಗಿರುವಂತೆಯೂ ಕಾಣಿಸುತ್ತದೆ. ಫ್ಲೋರ್ ಲೆಂಗ್ತ್ ಮ್ಯಾಕ್ಸಿ, ಮೋನೋಕ್ರೊಮ್ ಗೌನ್ ಸೂಪರ್ ಆಗಿ ಕಾಣಿಸುತ್ತೆ. 

click me!