ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!

By Web Desk  |  First Published May 14, 2019, 10:46 AM IST

ಚಾಕಲೇಟ್ ತಿನ್ನಲು ಮಾತ್ರವಲ್ಲಿ, ಸೌಂದರ್ಯ ವರ್ಧಕವಾಗಿಯೂ ಬಳಸಬಹುದು.  ಉಪಯೋಗಿಸೋದು ಅಂದುಕೊಂಡರೆ ಅದು ತಪ್ಪು. ಇದನ್ನ ಸ್ಕಿನ್‌ಗೆ ಬಳಸಿದರೆ ಒಂದಲ್ಲ ಎರಡಲ್ಲ ಹಲವು ಪ್ರಯೋಜನಗಳಿವೆ. ಅವು ಯಾವುವು? 


ಕೆಟ್ಟ ಮೂಡನ್ನು ಬೆಸ್ಟ್ ಮೂಡ್ ಆಗಿ ಮಾಡಲು, ಒಡೆದ ಹೃದಯ ಸರಿಪಡಿಸಲು ಬೆಸ್ಟ್ ಗಿಫ್ಟ್  ಚಾಕಲೇಟ್. ಅಷ್ಟೇ ಅಲ್ಲಾ ಇದರಿಂದ ತ್ವಚೆಯನ್ನೂ ಸುಂದರಗೊಳಿಸಬಹುದು. ಅದು ಹೇಗೆ?

ಚಾಕಲೇಟ್ ಮಾಸ್ಕ್:  ಲಿಕ್ವಿಡ್ ಚಾಕಲೇಟ್ ತೆಗೆದುಕೊಂಡು ಅದರ ಜೊತೆ ಆಲಿವ್ ಆಯಿಲ್ ಮತ್ತು ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಉಗುರು ಬಿಸಿ ನೀರಿನಲ್ಲಿ ವಾಷ್ ಮಾಡಿ. 

Tap to resize

Latest Videos

undefined

ಚಾಕಲೇಟ್ ಸ್ಕ್ರಬ್: ಕೊಕೊ ಪೌಡರ್ ಮತ್ತು ಸಮುದ್ರ ಉಪ್ಪು ಜೊತೆಯಾಗಿ ಬೆರೆಸಿ ಬಿಸಿ ಮಾಡಿ. ನಂತರ ಅದನ್ನು ಇಳಿಸಿ ಅದಕ್ಕೆ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ ಮತ್ತು ಕೈ ಮೇಲೆ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗಿ ಮುಖಕ್ಕೆ ಹೊಳಪು ಬರುತ್ತದೆ. 

ಮನಸ್ಸಿಗೂ, ಶರೀರಕ್ಕೆ ಹಿತ ಡಾರ್ಕ್ ಚಾಕೋಲೇಟ್...

ಚಾಕಲೇಟ್ ಪೆಡಿಕ್ಯೂರ್: ಉತ್ತಮ ಸ್ಕಿನ್ ಪಡೆಯಲು ಚಾಕಲೇಟ್ ಸಹಕಾರಿ. ಚಾಕಲೇಟ್ ಬಳಸಿ ಪೆಡಿಕ್ಯೂರ್ ಮಾಡಿದರೆ ಮಾಯಿಶ್ಚರೈಸ್ ಆಗಿರುವ ನುಣುಪಾದ ಪಾದ ನಿಮ್ಮದಾಗುತ್ತದೆ. 

ಚಾಕಲೇಟ್ ವ್ಯಾಕ್ಸ್ : ಚಾಕಲೇಟ್ ವ್ಯಾಕ್ಸ್ ಮಾಡಲು ಖೋಖೋವಾ, ಎಸೆನ್ಷಿಯಲ್ ಆಯಿಲ್, ಗ್ಲಿಸರಿನ್ ಮತ್ತು ವಿಟಮಿನ್ ಬೇಕು. ಇದರಿಂದ ವ್ಯಾಕ್ಸ್ ಮಾಡುವುದು ಹೆಚ್ಚು ನೋವು ಕೊಡುವುದಿಲ್ಲ. ಅಲ್ಲದೆ ಸ್ಕಿನ್ ಸಾಫ್ಟ್ ಆಗುತ್ತದೆ. 

ಚಾಕಲೇಟ್ ಲಿಪ್ ಬಾಮ್: ಚಾಕಲೇಟ್ ಲಿಪ್ ಬಾಮ್ ಬಳಸಿದರೆ ತುಟಿ ಸಾಫ್ಟ್ ಆಗಿ ಮಾಯಿಶ್ಚರೈಸರ್ ಹೆಚ್ಚುತ್ತದೆ.

ತ್ವಚೆಯ ಸೌಂದರ್ಯಕ್ಕೆ ಸಿಹಿಯಿಂದ ದೂರವಿದ್ದರೊಳಿತು....!

ಚಾಕಲೇಟ್ ಬಾಡಿ ವಾಷ್ : ಚಾಕಲೇಟ್ ಬಾಡಿ ವಾಷ್ ದೇಹವನ್ನು ಹೈಡ್ರೇಟ್ ಮತ್ತು ಮಾಯಿಶ್ಚರೈಸರ್ ಆಗಿರಲು ಸಹಾಯ ಮಾಡುತ್ತದೆ. ಇದರ ಪರಿಮಳ ಸಹ ಮೂಡ್ ಫ್ರೆಶ್ ಆಗಿಡುತ್ತದೆ. 

click me!