ನಿಂಬೂ ಪಾನಿ ಸೇವನೆಯಿಂದ ಏನೆಲ್ಲಾ ಲಾಭ?

By Web Desk  |  First Published May 13, 2019, 2:59 PM IST

ಬೆಚ್ಚನೆಯ ನೀರಿಗೆ ನಿಂಬೆ ರಸ ಸೇರಿಸಿ ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಹಲವು. ಹೆಚ್ಚಿನ ಕೆಲಸ ಬೇಡದ ಈ ನಿಂಬೂ ನೀರಿನ ಸೇವನೆಯನ್ನು ನೀವು ದೈನಂದಿನ ಜೀವನಪದ್ಧತಿಯ ಭಾಗವಾಗಿ ಅಳವಡಿಸಿಕೊಳ್ಳಬೇಕು.


ಲಿಂಬೆಹಣ್ಣಿನ ಪರಿಮಳ ಇಷ್ಟ ಪಡದವರಾರು ಹೇಳಿ? ಸಂಕಟವಾದರೆ ಅದನ್ನು ಕೇವಲ ತನ್ನ ಪರಿಮಳದಿಂದ ಹೋಗಲಾಡಿಸುವ ಶಕ್ತಿ ನಿಂಬೆಹಣ್ಣಿಗಿದೆ. ಈ ಹಣ್ಣಿನ ರಸವನ್ನು ಬೆಚ್ಚನೆಯ ನೀರಿನಲ್ಲಿ ಹಾಕಿಕೊಂಡು ಸೇವಿಸುವುದು ಅಭ್ಯಾಸ ಮಾಡಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ. 

Tap to resize

Latest Videos

undefined

- ತೂಕ ಇಳಿಸಬೇಕೆನ್ನುವವರು ನಿಂಬೂ ಪಾನೀ ನಿಯನಿತವಾಗಿ ಸೇವಿಸಿದರೆ ಬೊಜ್ಜು ಕರಗುತ್ತದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಇದರಲ್ಲಿರುವ ಪಾಲಿಫಿನಾಲ್  ಆ್ಯಂಟಿಆಕ್ಸಿಡೆಂಟ್‌ಗಳು ಅವುಗಳು ತೂಕ ಹೆಚ್ಚುವುದನ್ನು ತಡೆಯುವುದು ದೃಢಪಟ್ಟಿದೆ. ಮನುಷ್ಯರಲ್ಲೂ ಇದು ಹೀಗೆಯೇ ಕೆಲಸ ಮಾಡಲಿದೆ ಎಂದು ಕೆಲ ಅಧ್ಯಯನಗಳು ಹೇಳುತ್ತವೆ. 

- ಬಾಯಿ ವಾಸನೆ ಸಮಸ್ಯೆ ನೀಗಿಸುವಲ್ಲಿ ಲೆಮನ್ ವಾಟರ್ ಹೆಚ್ಚು ಪರಿಣಾಮಕಾರಿ. ಇದು ಕೆಟ್ಟ ವಾಸನೆಯ ಉಸಿರಾಟಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬೆಳಗ್ಗೆ ಎದ್ದೊಡನೆ ಹಾಗೂ ಊಟವಾದೊಡನೆ ಸೇವಿಸಿದಲ್ಲಿ ಬಾಯಿ ವಾಸನೆ ತಡೆಗಟ್ಟಬಹುದು. 

ಮುಖದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಸಂಬಿ ಹಣ್ಣು

- ದೇಹದಲ್ಲಿ ಪಿಎಚ್ ಮಟ್ಟ ಕಾಪಾಡುವುದರ ಜೊತೆಗೆ ರಕ್ತ ಶುದ್ಧ ಮಾಡುತ್ತದೆ. 

- ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆ್ಯಸಿಡ್ ಕಿಡ್ನಿಯಲ್ಲಿ ಕಲ್ಲಾಗದಂತೆ ತಡೆಯುತ್ತದೆ. ಇನ್ನು ಅದನ್ನು ನೀರಿನೊಂದಿಗೆ ಸೇವಿಸುವುದರಿಂದ ಕಲ್ಲಾಗಿದ್ದರೆ ಅದನ್ನು ಹೊರದಬ್ಬುವ ಕೆಲಸವನ್ನು ನಿಂಬೂ ಪಾನಿ ಸುಲಭವಾಗಿ ಮಾಡುತ್ತದೆ.

- ವಿಟಮಿನ್ ಎ ಮತ್ತು ಸಿ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯ ಕಾಪಾಡುವುದರೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶೀತದಿಂದ ದೂರವಿಡುತ್ತದೆ. ಅಷ್ಟೇ ಅಲ್ಲ, ಹೃದಯ ಸಂಬಂಧಿ ರೋಗಗಳು, ಸ್ಟ್ರೋಕ್ ಹಾಗೂ ಲೋ ಬಿಪಿ ಅಪಾಯಗಳನ್ನೂ ತಗ್ಗಿಸಬಹುದು. 

- ಫುಡ್ ಆ್ಯಂಡ್ ನ್ಯೂಟ್ರಿಶನ್ ಬೋರ್ಡ್‌ ಪ್ರಕಾರ ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯಬೇಕು. ಖಾಲಿ ನೀರು ಕುಡಿಯುವುದಕ್ಕಿಂತ ಅದಕ್ಕೆ ಲೆಮನ್ ಫ್ಲೇವರ್ ಸೇರಿದರೆ, ಸುಲಭವಾಗಿ ಒಳಗಿಳಿಯುತ್ತದೆ. ಈ ಮೂಲಕ ಹೆಚ್ಚಿನ ನೀರಿನಂಶ ದೇಹಕ್ಕೆ ಸಿಗುತ್ತದೆ. 

ಕಿತ್ತಳೆ, ನಿಂಬೆ ಹಣ್ಣಿನ ಸಿಪ್ಪೇಲೂ ಅಡಗಿದೆ ಆರೋಗ್ಯ...

- ಊಟಕ್ಕೂ ಮುನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. 

- ಲಿವರ್‌ನಲ್ಲಿ ಸೇರಿದ ವಿಷಕಾರಿ ವಸ್ತುಗಳನ್ನು ಹೊರದಬ್ಬಲು ಸಹಾಯಕ.

- ನಿಮ್ಮ ಚರ್ಮವನ್ನು ಆರೋಗ್ಯದಿಂದಿಡುತ್ತದೆ. ಲಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮ ಸುಕ್ಕಾಗುವುದನ್ನು, ಸೂರ್ಯನ ಕಿರಣಗಳ ಹೊಡೆತಕ್ಕೆ ಹಾನಿಗೀಡಾಗುವುದನ್ನು ಹಾಗೂ ಒಣಗುವುದನ್ನು ತಪ್ಪಿಸುತ್ತದೆ. 

click me!