
ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆರತಿ ಮಾಡುವ ಸಮಯದಲ್ಲಿ ಕರ್ಪೂರವನ್ನು ಬಳಸುತ್ತಾರೆ. ಇದು ಪರಂಪರೆಯಾಗಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ ಕರ್ಪೂರಕ್ಕೆ ವಿಶೇಷ ಮಹತ್ವವಿದೆ. ಆದರೆ ಇದು ಕೇವಲ ಪೂಜೆ ಮಾತ್ರವಲ್ಲ ಸೌಂದರ್ಯ ಸಮಸ್ಯೆ ನಿವಾರಿಸುತ್ತದೆ.
ಚರ್ಮದ ಸಮಸ್ಯೆ ನಿವಾರಣೆ: ತ್ವಚೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡಲು ಕರ್ಪೂರ ಉತ್ತಮ. ತೆಂಗಿನ ಎಣ್ಣೆ ಜೊತೆ ಕರ್ಪೂರದ ಪುಡಿ ಮಿಕ್ಸ್ ಮಾಡಿ ತುರಿಕೆ, ಕಜ್ಜಿ ಮೇಲೆ ಹಚ್ಚಿದರೆ ಅವು ನಿವಾರಣೆಯಾಗುತ್ತವೆ.
ಮನೆಯ ಶೇ.50ರಷ್ಟು ಧೂಳು ನಮ್ಮ ಮೃತ ಚರ್ಮದ್ದು...!?
ಪಿಂಪಲ್ ನಿವಾರಣೆ: ತೆಂಗಿನ ಎಣ್ಣೆ ಜೊತೆ ಬೆರೆಸಿದ ಕರ್ಪೂರವನ್ನು ಮೊಡವೆ ಮೇಲೆ ಹಚ್ಚಿದರೆ ಅದು ಬೇಗ ನಿವಾರಣೆಯಾಗುತ್ತದೆ. ಜೊತೆಗೆ ಮುಖ ಸುಂದರವಾಗಿ ಕಾಣುತ್ತದೆ. ಕೂದಲಿನ ಆರೋಗ್ಯಕ್ಕೆ: ಸಾಸಿವೆ ಎಣ್ಣೆ ಜೊತೆ ಬೆರೆಸಿದ ಕರ್ಪೂರದ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಹೇನು, ಕಜ್ಜಿ ಸಮಸ್ಯೆ ನಿವಾರಣೆಯಾಗಿ ಕೂದಲು ಆರೋಗ್ಯಯುತವಾಗುತ್ತದೆ.
ಸದೃಢ ಕೂದಲು: ಹೌದು ಕರ್ಪೂರದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಸ್ನಾನ ಮಾಡಿದರೆ ಕೂದಲು ಉದರುವ ಸಮಸ್ಯೆ ನಿವಾರಣೆಯಾಗಿ ಕೂದಲು ಬುಡದಿಂದಲೇ ಸ್ಟ್ರಾಂಗ್ ಆಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ಮೊದಲು ನೆನಪಿಡಬೇಕಾದ 5 ಅಂಶಗಳು!
ಕಲೆ ನಿವಾರಣೆ: ದೇಹದಲ್ಲಿ ಸುತ್ತ ಗಾಯ ಅಥವಾ ಗಾಯವಾದ ಗುರುತಿದ್ದರೆ ಕರ್ಪೂರವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಎಫೆಕ್ಟ್ ಆದ ಜಾಗಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಕಲೆ ನಿವಾರಣೆಯಾಗಿ ತ್ವಚೆ ಸುಂದರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.