
ಪತ್ರಿಕೆಯ ಎರಡನೇ ಸಂಚಿಕೆಯಿಂದ ದುಡ್ಡು ಹರಿಯಲು ಆರಂಭವಾಯಿತು. ಪತ್ರಿಕೆಯ ಪ್ರತಿಯೊಂದಕ್ಕೆ ಇಡಬೇಕಾದ ಠೇವಣಿ ಎರಡು ರೂಪಾಯಿ ನಲವತ್ತು ಪೈಸೆ. ಅಂದರೆ ಏಜೆಂಟರು ಆರು ವಾರಗಳ ಮುಂಗಡ ಕೊಡಬೇಕಿತ್ತು. ಎರಡನೇ ಸಂಚಿಕೆ ಆರು ಸಾವಿರಕ್ಕೇರಿತ್ತು. ರಾಜ್ಯಾದ್ಯಂತ ಏಜೆಂಟರು ಕಳಿಸಿದ ಬ್ಯಾಂಕ್ ಡಿಡಿಗಳು ಬಂದು ಬೀಳಲು ಆರಂ'ವಾಯಿತು. ಮೂರನೇ ಸಂಚಿಕೆಯಿಂದ ಪ್ರತಿ ವಾರವೂ ಒಂದೆರೆಡು ಸಾವಿರದ ಪ್ರಸಾರ ಏರತೊಡಗಿತ್ತು. ಬಂದು ಬೀಳುತ್ತಿದ್ದ ಬ್ಯಾಂಕ್ ಡಿಡಿಗಳನ್ನು ನೋಡಿ ಲಂಕೇಶರು ಕುಣಿದು ಕುಪ್ಪಳಿಸುವುದೊಂದೇ ಇದ್ದದ್ದು ಬಾಕಿ. ಎರಡನೇ, ಮೂರನೇ ವಾರದಿಂದ ನಾವು ಸೇವ್ ಆದೆವು ಕಣೋ ಎನ್ನುತ್ತಿದ್ದ ಲಂಕೇಶರು ನಾಲ್ಕು, ಐದನೇ ಸಂಚಿಕೆಯಿಂದ ಬಿಡಯ್ಯ ನಾವು ಗೆದ್ದು ಬಿಟ್ಟೆವು ಎನ್ನತೊಡಗಿದರು.
ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!
ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!
ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!
ಪತ್ರಕರ್ತ ಲಂಕೇಶ್ ಹಿಂದಿದ್ದ ಪಿ ಅರ್ಥವೇನು?
ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್
ನೋಡನೋಡುತ್ತಿದ್ದಂತೆ ಲಂಕೇಶರಲ್ಲಿ ಬದಲಾವಣೆಗಳು ಕಂಡಬಂದವು. ಎರಡು ಪ್ಯಾಕ್ ಗೋಲ್ಡ್ ಪ್ಯಾಕ್‌ನಿಂದ ದಿನದ ಸಿಗರೇಟು ಪ್ಯಾಕುಗಳು ನಾಲ್ಕಕ್ಕೇರಿತು. ಹಿಂದೆ ಅವರು ಸೇದುತ್ತಿದ್ದ ವಿಲ್ಸ್ ಫಿಲ್ಟರ್ ಬಿಟ್ಟು ಐದಾರು ವರ್ಷಗಳಾಗಿತ್ತು. ಓಲ್ಡ್ ಮಾಂಕ್ ರಂ, ಮ್ಯಾಕ್‌ಡೊವೆಲ್ ವಿಸ್ಕಿಯ ಜಾಗದಲ್ಲಿ ಬೆಲೆ ಬಾಳುವ ವಿಸ್ಕಿ ಬಂದಿತು. ಸಂಜೆಯ ಕೂಟದ ಸಂಖ್ಯೆ ಆರೆಂಟು ಜನಕ್ಕೇರಿತು. ಲಂಕೇಶರ ಮನೆಯೇ ಸಂಜೆಯ ಬಾರ್ ಆಯಿತು. ಈ ದಿನಗಳಲ್ಲೇ ಲಂಕೇಶರು ತಮ್ಮ ಮನೆಯ ಕೆಳಗಿನ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಬಾಡಿಗೆ ಮನೆಯಲ್ಲೇ ಎರಡನೇ ಮಹಡಿಯನ್ನೂ ಕಟ್ಟಿಸಿದ್ದರು. ಪತ್ರಿಕೆಯ ಏಳನೆಯ ತಿಂಗಳಲ್ಲೇ ಅಂಬಾಸಡರ್ ಕಾರು ಬಂತು. ಆ ಕಾಲದ ತುಟ್ಟಿಯ ಕಾರೇ ಅದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.