ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಎಸ್' ಆಗಿದ್ದಲ್ಲಿ, ನಿಮ್ಮ ಸಂಬಂಧಕ್ಕೆ ಆಯಸ್ಸು ಜಾಸ್ತಿ!

By Web Desk  |  First Published Aug 28, 2019, 12:49 PM IST

ಸಾಮಾನ್ಯವಾಗಿ ಪ್ರೀತಿಯಲ್ಲಿರುವವರ ಮನಸ್ಸಿನಲ್ಲಿ ಆಗಾಗ ತಾನು ಸರಿಯಾದ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆಯೇ ಎಂಬ ಪ್ರಶ್ನೆ ಮೂಡುವುದುಂಟು. ಆದರೆ, ಉತ್ತರ ಗೊಂದಲದಲ್ಲಿಯೇ ಉಳಿದಿರುತ್ತದೆ. ಈ ಗೊಂದಲ ನಿವಾರಿಸಲು ಈ ಲೇಖನ ನಿಮಗೆ ಸಹಾಯಕ.


ಪ್ರೀತಿಯಲ್ಲಿರುವ ಸುಖವೇ ಬೇರೆ. ಆದರೆ, ಪ್ರೀತಿ ಕುರುಡು. ಕೆಲವೊಮ್ಮೆ ನಾವು ಪ್ರೀತಿಯ ಕಣ್ಣಿನಲ್ಲಿ ನೋಡಿದಾಗ ತಪ್ಪಾದ ಸಂಬಂಧವೂ ಸರಿಯಾಗಿ ಕಾಣಿಸಿಬಿಡುತ್ತದೆ. ಹಾಗೆ ಮೋಸ ಹೋಗುವ ಅಪಾಯಗಳು ಬಹುತೇಕ  ಎಲ್ಲ ಪ್ರೀತಿಯಲ್ಲೂ ಇರುತ್ತವೆ. ಆದರೆ, ಇದು ಒಂದೆರಡು ದಿನದ್ದಲ್ಲ, ಜೀವಮಾನದ ಪ್ರಶ್ನೆ.

ಹಾಗಾಗಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ನಾನು ನನಗೆ ಸರಿಯಾದವನೊಡನೆಯೇ ಸಂಬಂಧದಲ್ಲಿದ್ದೇನೆ ಎಂದು ಖಾತ್ರಿ ಮಾಡಿಕೊಳ್ಳುವುದು ಹೇಗೆ? ಮ್ಯಾನ್‌ಮೌತ್ ಯೂನಿವರ್ಸಿಟಿಯ ಸೈಕಾಲಜಿ ಪ್ರೊಫೆಸರ್ ಗ್ಯಾರಿ ವಿ ಲೆವಾಂಡೋಸ್ಕಿ ಇದಕ್ಕಾಗಿ 15 ಪ್ರಶ್ನೆಗಳ ಪಟ್ಟಿ ರೆಡಿ ಮಾಡಿದ್ದು, ಆ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಎಸ್' ಆಗಿದ್ದಲ್ಲಿ ನೀವು ಜೀವಮಾನ ಕಾಲ ಉಳಿಯುವಂಥ ಸರಿಯಾದ ಸಂಬಂಧ ಹೊಂದಿದ್ದೀರಿ ಎಂದರ್ಥ. 

Latest Videos

ಹೆಚ್ಚು ಆಕರ್ಷಕವಾಗಿ ಕಾಣಲು ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳಿವು!

ಹಾಗಿದ್ದರೆ ತಡವೇಕೆ, ಲೆವಾಂಡೋಸ್ಕಿ ತಯಾರು ಮಾಡಿದ ಪ್ರಶ್ನೆಗಳ ಪಟ್ಟಿ ಇಲ್ಲಿದೆ, ಒಂದೊಂದಕ್ಕೇ ಉತ್ತರ ಕೊಟ್ಟುಕೊಂಡು ನೋಡಿ.

1. ನಿಮ್ಮ ಸಂಗಾತಿಯ ಜೊತೆಗಿದ್ದರೆ ನಿಮ್ಮ ವ್ಯಕ್ತಿತ್ವ ಬೆಳೆಯುತ್ತದೆ ಎನಿಸುತ್ತದೆಯೇ? ನಿಮ್ಮಿಂದ ಅವನೂ ಕೂಡಾ ಇನ್ನಷ್ಟು ಉತ್ತಮ ವ್ಯಕ್ತಿಯಾಗುತ್ತಿದ್ದಾನೆ ಎನಿಸುತ್ತದೆಯೇ?

2. ನೀವಿಬ್ಬರೂ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಕಂಫರ್ಟ್ ಆಗಿರುವಿರೇ? ಆತ/ಆಕೆ ನಿಮ್ಮನ್ನು ಯಾವಾಗಲಾದರೂ ಬಿಟ್ಟು ಬಿಡುವ ಭಯ ಎಂದೂ ಕಾಡದೆ ಆರಾಮಾಗಿ ಅವರ ಜೊತೆ ಇರಬಹುದೇ?

3. ನೀವಿಬ್ಬರೂ ಒಬ್ಬರನ್ನೊಬ್ಬರು ಬದಲಿಸಲು ಪ್ರಯತ್ನಿಸದೆ ಹೇಗಿದ್ದೀರೋ ಹಾಗೆಯೇ ಒಪ್ಪಿಕೊಳ್ಳಬಲ್ಲಿರೇ?

ನಿಮ್ಮ ಸಂಗಾತಿ ಸಂತೋಷವಾಗಿಲ್ಲ ಎಂದು ಅಲಾರಾಂ ಹೊಡ್ಕೋತಿದೆ, ಕೇಳ್ತಿಲ್ವಾ?

4. ಇಬ್ಬರ ನಡುವೆ ಯಾವುದೇ ವಿಷಯದಲ್ಲಿ ವಿರೋಧವಿದ್ದಾಗ ಯಾರೊಬ್ಬರ ಗೌರವಕ್ಕೆ ಧಕ್ಕೆಯಾದಂತೆ ಸಂವಹನ ನಡೆಸಬಲ್ಲಿರೇ? ಇನ್ನೊಬ್ಬರ ಮೇಲೆ ಎಲ್ಲ ದೂಷಣೆಗಳನ್ನು ಹಾಕಿ ನಿಮ್ಮದೇ ಸರಿ ಎಂದು ವಾದಿಸದೆ ಇರಬಲ್ಲಿರೇ?

5. ನಿಮ್ಮ ಸಂಬಂಧದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಇಬ್ಬರೂ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು ಯೋಚಿಸುವಿರೇ?

6. ನಿಮ್ಮ ಪಾರ್ಟ್ನರ್ ನಿಮಗೆ ಬೆಸ್ಟ್ ಫ್ರೆಂಡ್ ಹಾಗೂ ನೀವವರ ಬೆಸ್ಟ್ ಫ್ರೆಂಡ್ ಎನಿಸುತ್ತದೆಯೇ?

7. ನೀವು ಹಾಗೂ ನಿಮ್ಮ ಸಂಗಾತಿ ಯೋಚಿಸುವಾಗ ಹೆಚ್ಚಾಗಿ 'ನಾನು', 'ನೀನು' ಎನ್ನುವ ಬದಲು 'ನಾವು', 'ನಮ್ಮದು' ಎಂದೇ ಯೋಚಿಸುತ್ತೀರಿಯೇ? ಇಬ್ಬರೂ ಭವಿಷ್ಯದ ಕನಸು ಕಾಣುವಾಗಲೂ 'ನಾವು' ಎಂಬುದೇ ಇರುತ್ತದೆಯೇ?

8. ಸೋಷ್ಯಲ್ ಮೀಡಿಯಾ ಪಾಸ್‌ವರ್ಡ್ ಹಾಗೂ ಬ್ಯಾಂಕ್ ಖಾತೆಯ ಪಾಸ್‌ವರ್ಡ್ ನೀಡುವಷ್ಟು ಇಬ್ಬರಿಗೂ ಇಬ್ಬರ ಮೇಲೂ ನಂಬಿಕೆ ಇದೆಯೇ? 

9. ಅತಿಯಾದ ಒಳ್ಳೆಯತನ ಕಾಣುವ ಬದಲೂ ನೀವಿಬ್ಬರೂ ನಿಮ್ಮಲ್ಲಿ ಸಹಜವಾಗಿಯೇ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದೀರಾ?

ದಾಂಪತ್ಯದ ರುಚಿಗೆಡಿಸುವ 7 ಸುಳ್ಳುಗಳು!

10. ನಿಮ್ಮ ಹತ್ತಿರದ ಗೆಳೆಯರು ಹಾಗೂ ಸಂಗಾತಿ ಇಬ್ಬರಿಗೂ ನಿಮ್ಮ ಸಂಬಂಧ ಕೊನೆವರೆಗೆ ಉಳಿಯುವಂಥದ್ದು ಎನಿಸುತ್ತದೆಯೇ?

11. ನಿಮ್ಮ ಸಂಬಂಧವು ಮೋಸ, ಹೊಟ್ಟೆಕಿಚ್ಚು ಹಾಗೂ ನಿಯಂತ್ರಿತ ವರ್ತನೆಯಂಥ ದುರ್ಗುಣಗಳಿಂದ ದೂರವಿದೆಯೇ?

12. ರಾಜಕೀಯ, ಧರ್ಮ, ವಿವಾಹದ ಪ್ರಾಮುಖ್ಯತೆ, ಮಕ್ಕಳನ್ನು ಹೊಂದುವ ಆಸೆ, ಹೇಗೆ ಪೇರೆಂಟಿಂಗ್ ಮಾಡಬೇಕು ಎಂಬ ವಿಷಯದಲ್ಲಿ ನಿಮ್ಮಿಬ್ಬರದೂ ಒಂದೇ ಅಭಿಪ್ರಾಯ ಹಾಗೂ ನಿಲುವು ಇದೆಯೇ?

13. ನಿಮ್ಮಿಬ್ಬರದೂ ಭಾವನಾತ್ಮಕವಾಗಿ ದೃಢವಾದ, ಸಮಾಜ ಒಪ್ಪುವಂತ ನಡತೆ ಹಾಗೂ ಗುಣಗಳಿವೆಯೇ?

14.  ನೀವಿಬ್ಬರೂ ಒಬ್ಬರಿಗಾಗಿ ಮತ್ತೊಬ್ಬರು ಸ್ವಂತದ ಇಷ್ಟ, ಅಗತ್ಯ, ಗುರಿಗಳನ್ನು ತ್ಯಾಗ ಮಾಡಬಲ್ಲಿರಾ?

ನಿಮ್ಮ ಎಕ್ಸ್ ಬಳಿ ಹಿಂದಿರುಗಲು ಮನಸ್ಸಾಗುತ್ತಿದೆಯೇ? ನೀವು ಒಂಟಿಯಲ್ಲ...

15. ನೀವಿಬ್ಬರೂ ಲೈಂಗಿಕವಾಗಿ ಒಂದೇ ಮಟ್ಟಿನ ಆಸಕ್ತಿ ಹೊಂದಿದ್ದೀರಾ?

ಇವುಗಳಲ್ಲಿ ಕೆಲವಕ್ಕಾದರೂ ನಿಮ್ಮ ಉತ್ತರ 'ನೋ' ಎಂದಾಗಿದ್ದಲ್ಲಿ, ನಿಮ್ಮ ಸಂಬಂಧ ಕಾಲನ ಪರೀಕ್ಷೆಯಲ್ಲಿ ಸೋಲುವ ಸಾಧ್ಯತೆಗಳೇ ಹೆಚ್ಚು. ಇನ್ನೊಬ್ಬರಲ್ಲಿ ಒಳ್ಳೆತನ ಕಂಡಿರೆಂದ ಮಾತ್ರಕ್ಕೆ, ನೀವಿಬ್ಬರೂ ಒಳ್ಳೆಯವರೇ ಎಂದ ಮಾತ್ರಕ್ಕೆ ನಿಮ್ಮದು ಉತ್ತಮ ಸಂಬಂಧ ಎಂದು ನಿರ್ಧರಿಸಿಬಿಡಲಾಗುವುದಿಲ್ಲ. ಇವುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ನಿಮ್ಮ ಉತ್ತರ ನೋ ಆಗಿದ್ದಲ್ಲಿ, ಇದು ಬ್ರೇಕಪ್‌ಗೆ ಸಕಾಲ. ಎಲ್ಲವೂ ಎಸ್ ಎಂದಾಗಿದ್ದಲ್ಲಿ, ಯಾವುದೇ ಭಯವಿಲ್ಲದೆ ನಿಮ್ಮ ಲೈಫ್ ಪಾರ್ಟ್ನರ್ ಜೊತೆ ಪ್ರೀತಿಯಲ್ಲಿ ಮುಳುಗೇಳಿ. 
 

click me!