
ಆಕರ್ಷಕವಾಗಿ ಕಾಣಬೇಕೆಂದರೆ ಯಾವ ಹೇರ್‌ಸ್ಟೈಲ್ ಮಾಡಿಕೊಳ್ಳಬೇಕು, ಯಾವ ರೀತಿಯ ಬಟ್ಟೆ ತೊಡಬೇಕು ಎಂದೆಲ್ಲ ಯೋಚಿಸುತ್ತಿದ್ದೀರಾ? ಆದರೆ, ಆಕರ್ಷಕತೆಗೂ ದೈಹಿಕ ರೂಪಕ್ಕೂ ಅಷ್ಟೇನೂ ಸಂಬಂಧವಿಲ್ಲ. ವೈಜ್ಞಾನಿಕವಾಗಿ ನೋಡಿದರೆ ನಿಮ್ಮನ್ನು ನೀವು ಹೇಗೆ ಸಂಭಾಳಿಸಿಕೊಳ್ಳುತ್ತೀರಿ, ಯಾರೊಂದಿಗೆ ಓಡಾಡುತ್ತೀರಿ, ಜನರೊಂದಿಗೆ ಹೇಗೆ ಬೆರೆಯುತ್ತೀರಿ ಮುಂತಾದ ವಿಷಯಗಳು ಹೆಚ್ಚು ಕೆಲಸ ಮಾಡುತ್ತವೆ.
ಮೇಕಪ್ ಹಾಗೂ ಫ್ಯಾನ್ಸಿ ಬಟ್ಟೆಗಳಿಗಿಂತ ನಿಮ್ಮ ಸ್ಮೈಲ್, ಗುಂಪಿನ ನಡುವೆ ಇರುವ ರೀತಿ, ನಿಮ್ಮ ಹಾಸ್ಯಪ್ರಜ್ಞೆಗಳೇ ಹೆಚ್ಚು ಆಕರ್ಷಣೀಯ. ಹೀಗೆ ಆಕರ್ಷಕವಾಗಿ ಕಾಣಿಸಲು ವೈಜ್ಞಾನಿಕವಾಗಿ ಇರುವ ಮಾರ್ಗಗಳೇನು ನೋಡೋಣ...
ದೇಹ ಅಂದವಿದ್ದ ಮಾತ್ರಕ್ಕೆ ಸೌಂದರ್ಯ ಹೆಚ್ಚೋಲ್ಲ, ಮತ್ತೆ?
1. ತಮಾಷೆಯಾಗಿರಿ
ಸಾಮಾನ್ಯವಾಗಿ ಯಾರಿಗೇ ಆಗಲಿ ಹಾಸ್ಯಪ್ರಜ್ಞೆ ಇರುವವರು ಇಷ್ಟವಾಗೇ ಆಗುತ್ತಾರೆ. ಅದರಲ್ಲೂ ತಮ್ಮ ಬಗ್ಗೆಯೇ ತಾವು ಜೋಕ್ ಮಾಡಿಕೊಳ್ಳುವವರು, ಆಯಾ ಸಂದರ್ಭಕ್ಕೆ ಅಲ್ಲಿಯೇ ಹಾಸ್ಯ ಸೃಷ್ಟಿ ಮಾಡುವವರು ಗುಂಪಿನಲ್ಲೂ ಎದ್ದು ಕಾಣುತ್ತಾರೆ. ಯಾರು ತಮ್ಮನ್ನು ನಗಿಸುತ್ತಾರೋ ಅವರು ಇಷ್ಟವಾಗದಿರಲು ಹೇಗೆ ಸಾಧ್ಯ? ಅಲ್ಲದೆ ಫನ್ನಿಯಾಗಿರುವವರು ಹೆಚ್ಚು ಸಮಾಜಮುಖಿಯಾಗಿಯೂ, ಬುದ್ಧಿವಂತರಾಗಿಯೂ ಇರುತ್ತಾರೆ. ಅಧ್ಯಯನವೊಂದರಲ್ಲಿ ಬಾರ್‌ನಲ್ಲಿ ಕುಳಿತ ಮಹಿಳೆಗೆ ಜೋಕ್ ಹೇಳುವಂತೆ ಕೆಲ ಗಂಡಸರಿಗೆ ಹೇಳಲಾಗಿತ್ತು. ಹೀಗೆ ಜೋಕ್ ಹೇಳಿದವರಲ್ಲಿ ಬಹುತೇಕರಿಗೆ ಯುವತಿಯರು ತಮ್ಮ ನಂಬರ್ ಕೊಡಲು ಮುಂದೆ ಬಂದರು. ಆದರೆ, ಸುಮ್ಮನೆ ಗಂಭೀರವಾಗಿ ಮಾತನಾಡಿಸಿದವರಿಗೆ ನಂಬರ್ ಕೊಡಲು ಹಿಂಜರಿದರು.
2. ಗೆಳೆಯರೊಂದಿಗಿರಿ
ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ನಡೆಸಿದ ಸರ್ವೆಯಲ್ಲಿ ಗುಂಪಿನೊಂದಿಗಿರುವ ಜನರು ಹೆಚ್ಚು ಆಕರ್ಷಕವೆನಿಸುತ್ತಾರೆ ಎಂಬುದು ಸಾಬೀತಾಗಿದೆ. ಇದು ನೀವು ಗೆಳೆತನಕ್ಕೆ ಕೊಡುವ ಪ್ರಾಮುಖ್ಯತೆಯ ಜೊತೆಗೆ ಸಂಬಂಧ ನಿಭಾಯಿಸಬಲ್ಲಿರಿ ಎಂದು ಸೂಚಿಸುತ್ತದೆ.
ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!
3. ಉದ್ದುದ್ದ ಮಾತಾಡಿ
ನ್ಯೂಯಾರ್ಕ್ ಯೂನಿವರ್ಸಿಟಿ ನಡೆಸಿದ ಸರ್ವೆಯಲ್ಲಿ ಜನರನ್ನು ಎರಡು ಗುಂಪುಗಳಾಗಿ ಮಾಡಿ, ಅದರಲ್ಲಿ ಇಬ್ಬಿಬ್ಬರನ್ನು ಒಂದು ತಂಡ ಮಾಡಲಾಯಿತು. ಪ್ರತಿ ಇಬ್ಬರಿಗೂ ಕೇಳಿಕೊಳ್ಳಲು ಒಂದಿಷ್ಟು ಪ್ರಶ್ನೆ ಕೊಡಲಾಯಿತು. ಒಂದು ಗುಂಪಿಗೆ ನೀಡಿದ ಪ್ರಶ್ನೆಗಳು ಕೇವಲ ಸಣ್ಣ ಸಣ್ಣ ಉತ್ತರ ಬಯಸುತ್ತಿದ್ದರೆ, ಮತ್ತೊಂದು ಗುಂಪಿಗೆ ನೀಡಿದ ಪ್ರಶ್ನೆಗಳು ಹೆಚ್ಚು ತನಿಖೆ ಮಾಡುತ್ತಿದ್ದವು. ಹೀಗೆ ಹೆಚ್ಚು ಉತ್ತರ ಬೇಡುವಂಥ ಪ್ರಶ್ನೆ ಕೇಳಿದವರು ಉತ್ತರ ನೀಡಿದವರೊಂದಿಗೆ ಹೆಚ್ಚು ಕನೆಕ್ಟ್ ಆಗಿದ್ದರು. ನಮ್ಮ ಬಗ್ಗೆ ನಾವು ಮಾತನಾಡುವುದು ಒಳ್ಳೆಯ ಊಟ ಮಾಡಿದಷ್ಟೇ ಖುಷಿ ನೀಡುತ್ತದೆ ಎಂದು ಹಾರ್ವರ್ಡ್ ಸಂಶೋಧನೆ ತಿಳಿಸಿದೆ. ಹಾಗಾಗಿ, ಯಾರಾದರೂ ತಮ್ಮ ಬಗ್ಗೆ ಆಳವಾಗಿ ವಿಚಾರಿಸುತ್ತಿದ್ದಾರೆಂದರೆ ಅವರು ಮತ್ತೊಬ್ಬರಿಗೆ ಇಷ್ಟವಾಗುತ್ತಾರೆ.
4. ನಾಯಕರಾಗಿ
ನೀವು ಬಾಸ್‌ನಂತೆ ವರ್ತಿಸಬೇಕಾಗಿಲ್ಲ. ಆದರೆ, ಜನರು ಅಧಿಕಾರಕ್ಕೆ ಆಕರ್ಷಿತರಾಗುತ್ತಾರೆ. 2014ರ ಅಧ್ಯಯನವೊಂದರಂತೆ ಗುಂಪಿನಲ್ಲಿರುವ ಬಹುತೇಕರಿಗೆ ಗುಂಪಿನ ಹೊರಗಿರುವ ಯಾವುದೇ ಜನರಿಗಿಂತ ಗ್ರೂಪ್ ಲೀಡರ್ ಹೆಚ್ಚು ಆಟ್ರ್ಯಾಕ್ಟಿವ್ ಆಗಿ ಕಾಣಿಸುತ್ತಾನೆ. ಹಾಗೆಯೇ, ಕಂಪನಿಯೊಂದರಲ್ಲಿರುವ ಉದ್ಯೋಗಿಗಳಿಗೆ ಹೊರಗಿನ ವ್ಯಕ್ತಿಗಳಿಗಿಂತ ತಮ್ಮ ಸಿಇಒ ಹೆಚ್ಚು ಆಕರ್ಷಕವೆನಿಸುತ್ತಾರೆ.
5. ಹೆಚ್ಚು ನಗಿ
ನೋಡಲು ಅಷ್ಟು ಸುಂದರವಿಲ್ಲದಿದ್ದರೂ ಹೆಚ್ಚು ನಗುವ ಮುಖ ಅತಿ ಸುಂದರ ಮುಖಗಳಿಗಿಂತ ಹೆಚ್ಚು ಆಕರ್ಷಕವೆನಿಸುತ್ತದೆ. ಬಹಳ ನಗುವ ಹುಡುಗಿಗಿಂತ ಸುಂದರಿ ಮತ್ತೊಬ್ಬಳು ಇನ್ನಿಲ್ಲ ಎಂಬ ಮಾತೊಂದಿದೆ. ನಗುನಗುತ್ತಾ ಇರುವವರ ಕಂಪನಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ.
6. ಒಳ್ಳೆಯವರಾಗಿರಿ
ಜನರೊಂದಿಗೆ ಒಳ್ಳೆಯ ಮನಸ್ಸಿನಿಂದ ವ್ಯವಹರಿಸಿ. 2014ರ ಚೈನೀಸ್ ಅಧ್ಯಯನವೊಂದರ ಪ್ರಕಾರ, ಯಾರ ಬಗ್ಗೆಯಾದರೂ ಜನರು ಅವರೆಷ್ಟು ಒಳ್ಳೆಯವರು ಗೊತ್ತಾ ಎಂದು ಕೇಳಿದ್ದರೆ, ಅವರು ತಮಗೆ ಪರಿಚಯವಿಲ್ಲದಿದ್ದರೂ ಆಕರ್ಷಕವೆನಿಸತೊಡಗುತ್ತಾರೆ. ಅದೇ ಮತ್ತೊಬ್ಬರ ಬಗ್ಗೆ ನೆಗೆಟಿವ್ ಮಾತುಗಳನ್ನು ಕೇಳಿದ್ದಾಗ, ಅವರೆಷ್ಟೇ ಚೆನ್ನಾಗಿದ್ದರೂ ಆನಾಕರ್ಷಕ ಎನಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.