
ಹೆಚ್ಚು ವರ್ಷ ಬದುಕಬೇಕಾದ್ರೆ ಏನು ಮಾಡ್ಬೇಕು? ಈ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಯಾರೂ ತಾವು ಸಾಯಬೇಕೆಂದಿಚ್ಛಿಸುವುದಿಲ್ಲ... ಹೀಗಾಗಿ ತಮ್ಮ ಆಯಸ್ಸು ಹೆಚ್ಚಿಸಲು ಆಹಾರ, ಫಿಟ್ನೆಸ್ ಹೀಗೆ ಎಲ್ಲಾ ವಿಚಾರದ ಕುರಿತಾಗಿಯೂ ಹೆಚ್ಚು ಗಮನ ನೀಡುತ್ತಾರೆ. ಆದರೆ ಹೆಚ್ಚು ವರ್ಷ ಬದುಕಬೇಕಾದರೆ ಏನು ಮಾಡಬೇಕೆಂಬ ಹಿಂದಿನ ರಹಸ್ಯ ತಿಳಿದುಕೊಳ್ಳಲು ದೀರ್ಘ ಕಾಲ ಬದುಕಿದವರ ಸಲಹೆ ಪಡೆದರೆ ಹೆಚ್ಚು ಉಪಯೋಗ. ಯಾಕೆಂದರೆ ಇಂತಹವರು ತಮ್ಮ ಸ್ವಂತ ಅನುಭವವನ್ನೇ ಹಂಚಿಕೊಂಡಿರುತ್ತಾರೆ. ಹೀಗೇ ತಮ್ಮ ಅನುಭವ ಹಂಚಿಕೊಂಡಿರುವ 109 ವರ್ಷ ಹಿರಿಯ ವೃದ್ಧೆಯೊಬ್ಬರು ದೀರ್ಘ ಕಾಲ ಬದುಕಲು ಈವರೆಗೆ ಯಾರೂ ನೀಡದಿರುವ ಸಲಹೆಯನ್ನು ನೀಡಿದ್ದಾರೆ.
ಹೌದು 2015ರಲ್ಲಿ ಅಮೆರಿಕಾದಲ್ಲಿ 100ಕ್ಕೂ ಅಧಿಕ ವೃದ್ಧರ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಈ ವೇಳೆ ಪ್ರತಿಯೊಬ್ಬರ ಬಳಿ ದೀರ್ಘಾಯುಷಿಗಳಾಗಬೇಕಾದರೆ ನೀಡುವ ಸಲಹೆ ಏನು? ಇದರ ಹಿಂದಿನ ರಹಸ್ಯವೇನು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಕೆಲ ಹಿರಿಯರು ಈ ಪ್ರಶ್ನೆಗೆ , ಕುಟುಂಬದೊಂದಿಗೆ ಜೀವನ ಕಳೆಯುವುದು ಎಂದರೆ, ಮತ್ತೆ ಕೆಲವರು ಜೀವನವನ್ನು ಸಂಪೂರ್ಣವಾಗಿ ಅನುಭವಿಸುವುದು ಎಂದಿದ್ದಾರೆ. ಆದರೆ ಈ ವೇಳೆ 109ರ ಹರೆಯದ ಜೆಸ್ಸಿ ಗ್ಯಾಲನ್ ಎಂಬವರು ನೀಡಿದ ಟಿಪ್ಸ್ ಮಾತ್ರ ಎಲ್ಲಕ್ಕಿಂತಲೂ ಅಚ್ಚರಿದಾಯಕ ಭಿನ್ನವಾಗಿತ್ತು.
ಹೆಣ್ಮಕ್ಕಳೇ ಸ್ಟ್ರಾಂಗ್ ಗುರು! ದಿನಕ್ಕೆ 59 ರೀತಿ ಕೆಲಸ ಮಾಡ್ತಾರಂತೆ ಮಹಿಳೆಯರು!
1906ರಲ್ಲಿ ಸ್ಕಾಟ್ ಲ್ಯಾಂಡ್ ನ ಕಿಂಟೋರ್ ನಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜೆಸ್ಸಿ ಜನಿಸಿದ್ದರು. ತಂದೆ ತಾಯಿ ಹಾಗೂ 6 ಮಂದಿ ಒಡಹುಟ್ಟಿದವರೊಂದಿಗಿದ್ದ ವರ ಬದುಕು ತೀರಾ ಸರಳವಾಗಿತ್ತು. ಅವರಿದ್ದ ಮನೆ ಗ್ರಾಮೀಣ ಪ್ರದೇಶದಲ್ಲಿದ್ದುದರಿಂದ ಯಾವುದೇ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಾಮಾನ್ಯವಾಗಿ ಬದುಕುತ್ತಿದ್ದರು.
ಆರಂಭದಲ್ಲಿ ಶಾಲೆಗೆ ಹೋದರೂ ಬಳಿಕ ಕೆಲಸಕ್ಕೆ ಸೇರಿಕೊಂಡರು. ನಗರ ಪ್ರದೇಶದಲ್ಲಿದ್ದ ಶ್ರೀಮಂತ ಮನೆಯೊಂದರಲ್ಲಿ ಆಳಾಗಿ ಕೆಲಸ ಆರಂಭಿಸಿದ ಜೆಸ್ಸಿ, ಬಳಿಕ ಕಾರ್ಖಾನೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.
ಕೆಲಸಕ್ಕೆ ಹೋಗೋ ಅಮ್ಮನ ಮಕ್ಕಳು ಸ್ಟ್ರಾಂಗು ಗುರು!
ಇದಾದ ಬಳಿಕ ವೃದ್ಧಾಶ್ರಮಕ್ಕೆ ಸೇರಿಕೊಂಡ ಗ್ಯಾಲನ್ ತಮ್ಮ ಕೊನೆಯ ದಿನಗಳನ್ನು ಅಲ್ಲೇ ಕಳೆಯುತ್ತಾರೆ. ವೃದ್ಧಾಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ನೋಡಿಕೊಳ್ಳುತ್ತಿದ್ದ ಗಿಲಿಯನ್ ಬೆನೆಟ್ ಎಂಬವರು ಗ್ಯಾಲನ್ ಬಗ್ಗೆ ಮಾತನಾಡುತ್ತಾ "ಅವರೊಬ್ಬ ಅಹೃದಯಿ ಮಹಿಳೆಯಾಗಿದ್ದರು. ವೃದ್ಧಾಶ್ರಮದಲ್ಲೇ ಅವರಿಗೆ ತಮ್ಮ ಜೀವನದ ಆತ್ಮೀಯ ಗೆಳತಿ ಸಿಕ್ಕಿದ್ದರು. ಗ್ಯಾಲನ್ ಹಾಗೂ ಸಾರಾ ಜೇನ್ ಇಬ್ಬರೂ ಜೊತೆಗಿರುತ್ತಿದ್ದರು. ಸಂಗೀತ ಹಾಗೂ ವ್ಯಾಯಾಮವನ್ನು ಅತಿ ಹೆಚ್ಚು ಇಷ್ಟ ಪಡುತ್ತಿದ್ದ ಗ್ಯಾಲನ್ ಸ್ವತಂತ್ರವಾಗಿ, ತಮ್ಮಿಚ್ಛೆಯಂತೆ ಬದುಕುತ್ತಿದ್ದ ಮಹಿಳೆಯಾಗಿದ್ದರು' ಎಂದಿದ್ದಾರೆ.
ಜೆಸ್ಸಿ ಗ್ಯಾಲನ್ 2015ರ ಮಾರ್ಚ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಸಾವಿಗೂ ಮುನ್ನ ತಮ್ಮ ದೀರ್ಘಾಯುಷ್ಯದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
'ಪುರುಷರಿಂದ ದೂರವಿದ್ದುದೇ ನನ್ನ ದೀರ್ಘಾಯುಷ್ಯದ ಹಿಂದಿನ ಗುಟ್ಟು. ಅವರ ಮೌಲ್ಯವೆಷ್ಟಿದೆಯೋ ಅದಕ್ಕಿಂತಲೂ ಹೆಚ್ಚು ಅವರು ತೊಂದರೆಯುಂಟು ಮಾಡುತ್ತಾರೆ' ಎಂದಿದ್ದಾರೆ ಗ್ಯಾಲನ್. ಇದರೊಂದಿಗೆ ಮತ್ತೊಂದು ವಿಚಾರವನ್ನೂ ಬಹಿರಂಗಪಡಿಸಿದ ಗ್ಯಾಲನ್ 'ನನಗೆ ನನ್ನ ಆಹಾರ ಅತ್ಯಂತ ಪ್ರಿಯ, ಹಾಗೂ ನಾನು ನನ್ನ ಬದುಕನ್ನು ಸಂಪೂರ್ಣವಾಗಿ ಅನುಭವಿಸಿದ್ದೇನೆ' ಎಂದಿದ್ದರು.
ಇದೇ ಸಂದರ್ಭದಲ್ಲಿ ಆಸಕ್ತಿದಾಯಕ ವಿಚಾರವೊಂದನ್ನು ಹಂಚಿಕೊಂಡಿದ್ದ ಗ್ಯಾಲನ್ 'ಹೆಚ್ಚಿನ ಮಹಿಳೆಯರು ಉತ್ತಮ ಪುರುಷನಿಗಾಗಿ ಹಾತೊರೆಯುತ್ತಾರೆ. ಆದರೆ ಇದಕ್ಕಾಗಿ ಸಮಯ ವ್ಯರ್ಥ ಮಾಡದೇ ಪುರುಷನನ್ನು ಪಡೆಯಬೇಕೆಂಬ ಹಂಬಲವನ್ನು ಬಿಟ್ಟು ಬಿಡಬೇಕು. ನಿಮ್ಮ ರಾಜಕುಮಾರ ನಿಮ್ಮನ್ನು ಹುಡುಕಿ ಬರುವಂತಾಗಬೇಕು'
ಆದರೇನಂತೆ ನಡುವಯಸ್ಸು ಮುದುಡದಿರಲಿ ಮನಸ್ಸು!
ಗ್ಯಾಲನ್ ರವರ ಈ ಸಿದ್ಧಾಂತವನ್ನು ಎಷ್ಟು ಮಂದಿ ಒಪ್ಪಿಕೊಳ್ಳುತ್ತಾರೋ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದೊಂದು ಆಸಕ್ತಿದಾಯಕ ವಿಚಾರ ಎಂಬುವುದರಲ್ಲಿ ಅನುಮಾನವೇ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.