ಪಾತ್ರೆಯಲ್ಲಿನ ಮೊಟ್ಟೆ ವಾಸನೆ ತೆಗೆಯಲು ತೊಳೆಯಲು ಈ ಪದಾರ್ಥ ಬಳಸಿ

Published : Aug 12, 2025, 04:13 PM ISTUpdated : Aug 12, 2025, 04:20 PM IST
Egg

ಸಾರಾಂಶ

ಮೊಟ್ಟೆ ತಿಂದ ಬಳಿಕ ಪಾತ್ರೆಗಳಿಂದ ಬರುವ ವಾಸನೆ ತೊಲಗಿಸಲು ಸರಳ ಮನೆಮದ್ದುಗಳನ್ನು ಬಳಸಬಹುದು. ಈ ಸಲಹೆಗಳನ್ನು ಪಾಲಿಸುವುದರಿಂದ ಪಾತ್ರೆಗಳಿಂದ ಮೊಟ್ಟೆಯ ವಾಸನೆಯನ್ನು ಸುಲಭವಾಗಿ ತೆಗೆದುಹಾಕಬಹುದು.

Kitchen Hacks: ಇಂದು ಮೊಟ್ಟೆ (Egg) ಬಹಳಷ್ಟು ಮನೆಗಳಲ್ಲಿ ದಿನನಿತ್ಯದ ಆಹಾರದ ಒಂದು ಭಾಗವಾಗಿದೆ. ಬೇಗನೆ ಅಡುಗೆ (Cooking) ಮಾಡಬಹುದಾದ ಸುಲಭವಾದ ಪಾಕವಿಧಾನಗಳಿಗೆ ಮೊಟ್ಟೆಯೇ ಮೊದಲ ಆಯ್ಕೆಯಾಗಿರುತ್ತದೆ. ಕಡಿಮೆ ಸಮಯದಲ್ಲಿ ಮೊಟ್ಟೆ ಬಳಸಿ ವಿವಿಧ ಆಹಾರ ಖಾದ್ಯಗಳನ್ನು (Egg Recipes) ತಯಾರಿಸಬಹುದು. ಆಮ್ಲೆಟ್, ಎಗ್ ಕರ್ರಿ, ಎಗ್ ಮಸಲಾ, ಎಗ್‌ ರೋಲ್ ಹೀಗೆ ಬಗೆ ಬಗೆಯ ಆಹಾರ ತಯಾರಿಸಿಕೊಳ್ಳಬಹುದಾಗಿದೆರ. ಮೊಟ್ಟೆ ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲ, ಅವುಗಳಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ  (Egg Health Benefits) ತುಂಬಾ ಒಳ್ಳೆಯದು. ಹೀಗಾಗಿ, ಬಹಳಷ್ಟು ಜನರು ಪ್ರತಿದಿನ ತಮ್ಮ ಆಹಾರದಲ್ಲಿ ಮೊಟ್ಟೆಯನ್ನು (Egg in Food) ಸೇರಿಸಿಕೊಳ್ಳುತ್ತಾರೆ.

ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್ ಅಥವಾ ಹುರಿದು ತಿನ್ನುತ್ತಾರೆ. ಈ ರೀತಿಯಾಗಿ ತಿನ್ನುವುದು ಚೆನ್ನಾಗಿದ್ದರೂ, ಮೊಟ್ಟೆ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆದ (Washing dishes) ನಂತರವೂ ಅವುಗಳಿಂದ ಬರುವ ವಾಸನೆ ಕೆಲವೊಮ್ಮೆ ಅಸಹ್ಯವಾಗಿರುತ್ತದೆ. ಹಾಗಾದರೆ ಮೊಟ್ಟೆ ಪಾತ್ರೆಗಳಿಂದ ಬರುವ ವಾಸನೆಯನ್ನು (Egg Smell) ಹೇಗೆ ತೆಗೆಯುವುದು ಎಂದು ಯೋಚಿಸುತ್ತಿದ್ದೀರಾ? ಈ ಲೇಖನದಲ್ಲಿ ಕೊಟ್ಟಿರುವ ಸಲಹೆಗಳನ್ನು ಪ್ರಯತ್ನಿಸಿ ನೋಡಿ. ಪಾತ್ರೆಗಳಿಂದ ಮೊಟ್ಟೆ ವಾಸನೆ ಮಾಯವಾಗುತ್ತದೆ.

ಮೊಟ್ಟೆ ಪಾತ್ರೆಗಳ ವಾಸನೆ ತೆಗೆಯಲು ಸಲಹೆಗಳು (Tips for removing odor from egg containers)

1.ನಿಂಬೆ ರಸ (Lemon Juice)

ಮೊಟ್ಟೆ ಮಾಡಿದ ಪಾತ್ರೆಗಳಿಂದ ಬರುವ ವಾಸನೆಯನ್ನು ತೆಗೆಯಲು ನಿಂಬೆ ರಸ ಬಳಸಬಹುದು. ಒಂದು ಬಟ್ಟೆಗೆ ನಿಂಬೆ ರಸ ಹಿಂಡಿ, ವಾಸನೆ ಬರುವ ಪಾತ್ರೆಗಳನ್ನು ಚೆನ್ನಾಗಿ ಉಜ್ಜಿ. ಸ್ವಲ್ಪ ಹೊತ್ತು ಬಿಟ್ಟು, ನಂತರ ಸಾಮಾನ್ಯವಾಗಿ ಮಾಡುವಂತೆ ಸೋಪು ಹಾಕಿ ತೊಳೆಯಿರಿ. ಪಾತ್ರೆಗಳಿಂದ ಮೊಟ್ಟೆ ವಾಸನೆ ಹೋಗಿ ನಿಂಬೆ ಪರಿಮಳ ಬರುತ್ತದೆ.

2.ಕಡ್ಲೆ ಹಿಟ್ಟು (Chickpea flour)

ಮೊಟ್ಟೆ ಮಾಡಿದ ಪಾತ್ರೆಗಳಿಗೆ ಕಡ್ಲೆ ಹಿಟ್ಟು ಸಿಂಪಡಿಸಿ, ಸ್ವಲ್ಪ ಹೊತ್ತು ಉಜ್ಜಿ ನೆನೆಯಲು ಬಿಡಿ. ನಂತರ ಸೋಪು ಹಾಕಿ ತೊಳೆದರೆ ಮೊಟ್ಟೆ ವಾಸನೆ ಬರುವುದಿಲ್ಲ. ನಿಂಬೆ ಇಲ್ಲದಿದ್ರೆ ಕಡ್ಲೆ ಹಿಟ್ಟು ಬಳಸಬಹುದು. ಇದು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

3. ಅಡಿಗೆ ಸೋಡಾ (Baking Soda)

ಮೊಟ್ಟೆ ಪಾತ್ರೆಗಳ ವಾಸನೆ ತೆಗೆಯಲು ಅಡಿಗೆ ಸೋಡಾ ತುಂಬಾ ಪರಿಣಾಮಕಾರಿ. ನೀರಿಗೆ ಅಡಿಗೆ ಸೋಡಾ ಹಾಕಿ, ಆ ನೀರಿನಲ್ಲಿ ಮೊಟ್ಟೆ ಪಾತ್ರೆಗಳನ್ನು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಸಾಮಾನ್ಯವಾಗಿ ಮಾಡುವಂತೆ ಸೋಪು ಹಾಕಿ ತೊಳೆಯಿರಿ. ಪಾತ್ರೆಗಳಿಂದ ವಾಸನೆ ಹೋಗುತ್ತದೆ.

4. ವಿನೆಗರ್ (Vinegar)

ಪಾತ್ರೆಗಳಿಂದ ಮೊಟ್ಟೆ ವಾಸನೆ ತೆಗೆಯಲು ಮೊದಲು ಪಾತ್ರೆಗಳನ್ನು ಸೋಪು ಹಾಕಿ ತೊಳೆಯಿರಿ. ನಂತರ ಒಂದು ಚಮಚ ವಿನೆಗರ್ ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ನೀರಿನಲ್ಲಿ ತೊಳೆದರೆ ಮೊಟ್ಟೆ ವಾಸನೆ ಬರುವುದಿಲ್ಲ, ಪರಿಮಳ ಬರುತ್ತದೆ.

5. ಕಾಫಿ ಪುಡಿ (Coffee Powder)

ಕಾಫಿ ಪುಡಿಯ ಪರಿಮಳ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮೊಟ್ಟೆ ಪಾತ್ರೆಗಳ ವಾಸನೆ ತೆಗೆಯಲು ಬಳಸಬಹುದು. ಕಾಫಿ ಪುಡಿ ಹಾಕಿದ ನೀರಿನಲ್ಲಿ ಮೊಟ್ಟೆ ಪಾತ್ರೆಗಳನ್ನು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಸಾಮಾನ್ಯವಾಗಿ ಮಾಡುವಂತೆ ಸೋಪು ಹಾಕಿ ತೊಳೆಯಿರಿ.

ಇದನ್ನೂ ಓದಿ: Egg Selling Business Idea: 3 in 1 ಬ್ಯುಸಿನೆಸ್ ಐಡಿಯಾ; ಸ್ವಲ್ಪ ತಲೆ ಉಪಯೋಗಿಸಿದ್ರೆ ಮೂರೇ ತಿಂಗಳಲ್ಲಿ ಲಕ್ಷ ಲಕ್ಷ ಸಂಪಾದಿಸೋ ಸೂಪರ್ ವ್ಯವಹಾರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು
ಪ್ಯಾನ್ ಅದೆಷ್ಟೇ ಕೊಳಕಾಗಿದ್ರು, ಎಣ್ಣೆಯಾಗಿದ್ರು, ಕಲೆಗಳಿದ್ರು ಚಿಟಿಕೆ ಹೊಡೆಯೋದ್ರಲ್ಲಿ ಕ್ಲೀನ್ ಮಾಡ್ಬೋದು