ಕೇವಲ 15 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಅಂಗಡಿ ರೀತಿ ಮೊಸರು..ಮಾಡೋದಂತೂ ಭಾಳ ಸುಲಭ

Published : Aug 06, 2025, 12:56 PM IST
curd

ಸಾರಾಂಶ

ಸಾಮಾನ್ಯವಾಗಿ ಮೊಸರು ಗಟ್ಟಿಯಾಗಲು 6 ರಿಂದ 8 ಗಂಟೆಗಳು ಬೇಕಾಗುತ್ತದೆ. ವಿಶೇಷವಾಗಿ ಹವಾಮಾನವು ತಂಪಾಗಿದ್ದರೆ ಅಥವಾ ಆರ್ದ್ರವಾಗಿದ್ದರೆ ಮೊಸರು ತೆಳ್ಳಗೆ ಮತ್ತು ಹುಳಿಯಾಗಬಹುದು. 

Homemade Curd Recipe: ಈಗ ನೀವು ಅಂಗಡಿಯಿಂದ ಮೊಸರು ಖರೀದಿಸಬೇಕಾಗಿಲ್ಲ ಅಥವಾ ಮೊಸರು ಮಾಡಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಈ ದೇಸಿ ಟ್ರಿಕ್‌ನೊಂದಿಗೆ ನೀವು ಪ್ರತಿದಿನ ಕೇವಲ 15 ನಿಮಿಷದಲ್ಲಿ ಶುದ್ಧ, ಗಟ್ಟಿ ಮತ್ತು ರುಚಿಕರವಾದ ಮೊಸರನ್ನು ತಯಾರಿಸಬಹುದು.

ಬೇಸಿಗೆಯಲ್ಲಿ ಮಾತ್ರವಲ್ಲ, ಎಲ್ಲ ಕಾಲದಲ್ಲಿಯೂ ಮೊಸರು ಬೇಕೆಬೇಕು. ಆದರೆ ಮಳೆಗಾಲದಲ್ಲಿ ಗಂಟೆಗಟ್ಟಲೆ ಕಾದರೂ ಮೊಸರು ಸರಿಯಾಗಿ ಗಟ್ಟಿಯಾಗುವುದಿಲ್ಲ. ಅಷ್ಟೇ ಅಲ್ಲ, ಅಂಗಡಿಯಲ್ಲಿ ಸಿಗುವಷ್ಟು ದಪ್ಪಗೆ ಅಂದರೆ ಗಟ್ಟಿಯಾಗಿರುವುದಿಲ್ಲ ಅಥವಾ ಕೆನೆ ರುಚಿಯನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಮೊಸರು ಗಟ್ಟಿಯಾಗಲು 6 ರಿಂದ 8 ಗಂಟೆಗಳು ಬೇಕಾಗುತ್ತದೆ. ವಿಶೇಷವಾಗಿ ಹವಾಮಾನವು ತಂಪಾಗಿದ್ದರೆ ಅಥವಾ ಆರ್ದ್ರವಾಗಿದ್ದರೆ ಮೊಸರು ತೆಳ್ಳಗೆ ಮತ್ತು ಹುಳಿಯಾಗಬಹುದು.

ಅಂಗಡಿ ರೀತಿ ಮಾಡೋದು ಹೇಗೆ?
ಸದ್ಯ ನಿಮಗೀಗ ಮೊಸರು ಗಟ್ಟಿಯಾಗಲು ಏನ್ ಮಾಡಬೇಕು ಎಂಬ ಚಿಂತೆ ಕಾಡುತ್ತಿದ್ದರೆ ಒಂದು ದೇಸಿ ಟ್ರಿಕ್ ವೈರಲ್ ಆಗುತ್ತಿದೆ. ಇದರ ಮೂಲಕ ಥೇಟ್ ಡೈರಿಯಲ್ಲಿ ಸಿಗುವಂತಹ ಗಟ್ಟಿ ಮತ್ತು ಕೆನೆಭರಿತ ಮೊಸರನ್ನು ಕೇವಲ 15 ನಿಮಿಷ ತಯಾರಿಸಬಹುದು. ವಿಶೇಷವೆಂದರೆ ಈ ಟ್ರಿಕ್‌ಗೆ ಯಾವುದೇ ಯಂತ್ರ ಅಥವಾ ದುಬಾರಿ ಉಪಕರಣಗಳ ಅಗತ್ಯವಿಲ್ಲ. ಇದನ್ನು ಮನೆಯಲ್ಲಿ ಸಿಗುವ ಪದಾರ್ಥಗಳಿಂದಲೇ ಮಾಡಬಹುದು.

ವಿಶೇಷ ಟ್ರಿಕ್ಸ್ ಬಳಸ್ತಾರೆ!
ಅಂದಹಾಗೆ ಮೊಸರನ್ನು ಗಟ್ಟಿಯಾಗಿಸಲು ಸರಿಯಾದ ತಾಪಮಾನ ಅಗತ್ಯ. ಹೆಚ್ಚು ಶಾಖ ಅಥವಾ ತೇವಾಂಶವಿದ್ದರೆ ಮೊಸರು ಹುಳಿಯಾಗಬಹುದು ಮತ್ತು ಹಾಲು ತುಂಬಾ ಬಿಸಿಯಾಗಿದ್ದರೆ ಅಥವಾ ತಣ್ಣಗಾಗಿದ್ದರೆ ಮೊಸರು ಒಡೆಯುತ್ತದೆ ಅಥವಾ ಗಟ್ಟಿಯಾಗುವುದೇ ಇಲ್ಲ. ಅಂಗಡಿಯಲ್ಲಿ ಲಭ್ಯವಿರುವ ಮೊಸರು ತುಂಬಾ ಗಟ್ಟಿಯಾಗಿರುತ್ತದೆ. ಏಕೆಂದರೆ ಅಲ್ಲಿ ವಿಶೇಷ ಟ್ರಿಕ್ಸ್ ಬಳಸಲಾಗುತ್ತದೆ.

ಮೊಸರಿಗೆ ಬೇಕಾಗುವ ಸಾಮಗ್ರಿಗಳು
ಪೂರ್ಣ ಕೆನೆ ಹಾಲು - 500 ಮಿಲಿ, ಘನೀಕರಿಸಿದ ತಾಜಾ ಮೊಸರು (frozen)-1 ಸಣ್ಣ ಸ್ಪೂನ್, ಒಂದು ಸ್ಟೀಲ್ ಪಾತ್ರೆ ಅಥವಾ ಬಟ್ಟಲು, ಬಿಸಿನೀರು ಹಿಡಿಯಬಹುದಾದ ಪಾತ್ರೆ, ಒಂದು ಮುಚ್ಚಳ ಅಥವಾ ಪ್ಲೇಟ್.

ಮಾಡುವ ವಿಧಾನ
ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ನಂತರ ಅದು ಉಗುರುಬೆಚ್ಚಗಾಗುವವರೆಗೆ ತಣ್ಣಗಾಗಿಸಿ. ಹಾಲು ತುಂಬಾ ಬಿಸಿಯಾಗಿರಬಾರದು ಅಥವಾ ತುಂಬಾ ತಣ್ಣಗಾಗಬಾರದು ಎಂಬುದನ್ನು ನೆನಪಿನಲ್ಲಿಡಿ. ಬೆರಳುಗಳಿಂದ ಮುಟ್ಟಿದಾಗ ಅದು ಸ್ವಲ್ಪ ಬೆಚ್ಚಗಿರಬೇಕು. ಈಗ ಹಾಲನ್ನು ಚಿಕ್ಕ ಸ್ಟೀಲ್ ಪಾತ್ರೆಯಲ್ಲಿ ಸುರಿಯಿರಿ. ನಂತರ ಅದಕ್ಕೆ ತಾಜಾ ಮೊಸರು ಸೇರಿಸಿ. ಮೊಸರು ಚೆನ್ನಾಗಿ ಕರಗಬೇಕು. ಬೇಕಾದರೆ ಒಂದು ಚಮಚದೊಂದಿಗೆ ನಿಧಾನವಾಗಿ ಬೆರೆಸಿ.

ಈಗ ಈ ಚಿಕ್ಕ ಸ್ಟೀಲ್ ಪಾತ್ರೆಯನ್ನು ಈಗಾಗಲೇ ಬಿಸಿನೀರನ್ನು ಸುರಿದಿರುವ ದೊಡ್ಡ ಪಾತ್ರೆಯಲ್ಲಿ ಇರಿಸಿ. ಚಿಕ್ಕ ಪಾತ್ರೆಯು ಅದರಲ್ಲಿ 1/4 ಅಥವಾ ಅರ್ಧದಷ್ಟು ಮುಳುಗುವಷ್ಟು ನೀರು ಇರಬೇಕು. ಆದರೆ ನೀರು ಮೊಸರು ಇರುವ ಪಾತ್ರೆಯೊಳಗೆ ಹೋಗಬಾರದು. ಈಗ ಈ ಸಂಪೂರ್ಣ ಸೆಟಪ್ ಅನ್ನು ಮುಚ್ಚಳದಿಂದ ಮುಚ್ಚಿ. ನೀವು ಬಯಸಿದರೆ ಶಾಖ ಉಳಿಯುವಂತೆ ಅದರ ಮೇಲೆ ಟವೆಲ್ ಅಥವಾ ಹತ್ತಿ ಬಟ್ಟೆಯನ್ನು ಸುತ್ತಿ.

ನೀವೀಗ ತೆಗೆದು ನೋಡಿದರೆ ಮೊಸರು ಕೇವಲ 15-20 ನಿಮಿಷಗಳಲ್ಲಿ ಗಟ್ಟಿಯಾಗುತ್ತದೆ. ಅಷ್ಟೇ ಏಕೆ ಮೊಸರು ಕೆನೆಭರಿತವಾಗಿ, ಮಾರುಕಟ್ಟೆ ಅಥವಾ ಅಂಗಡಿಯಲ್ಲಿರುವಂತೆ ಯಾವುದೇ ಹುಳಿ ಇಲ್ಲದೆ ಇರುವುದನ್ನು ಸಹ ನೋಡಬಹುದು. ಈ ಟೆಕ್ನಿಕ್ ಖಂಡಿತ ಕೆಲಸ ಮಾಡುತ್ತದೆ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಮೊಸರು ಗಟ್ಟಿಯಾಗಲು ಸರಿಯಾದ ತಾಪಮಾನ(35-42°C) ನಿರ್ವಹಿಸಲಾಗುತ್ತದೆ. ಈ ಕಾರಣದಿಂದಾಗಿ ಮೊಸರು ಗಟ್ಟಿಯಾಗಲು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಗಂಟೆಗಟ್ಟಲೆ ಅಲ್ಲ.

ಅಂದಹಾಗೆ ಮೊಸರು ತಯಾರಿಸಲು ಯಾವಾಗಲೂ ತಾಜಾ ಮತ್ತು ಕಡಿಮೆ ಹುಳಿ ಮೊಸರನ್ನು ಬಳಸಿ. ಪೂರ್ತಿ ಕೆನೆ ಹಾಲಿನಿಂದ ಮಾಡಿದ ಮೊಸರು ಗಟ್ಟಿಯಾಗಿರುತ್ತದೆ ಮತ್ತು ಕೆನೆಭರಿತವಾಗಿರುತ್ತದೆ. ಕರೆಂಟ್ ಇಲ್ಲ ಅಂದ್ರೆ ಅಥವಾ ಚಳಿಗಾಲ, ಮಳೆಗಾಲವಾಗಿದ್ದರೆ ಈ ವಿಧಾನವನ್ನು ಅನುಸರಿಸಿ. ನೀವು ಪ್ರತಿ ಬಾರಿಯೂ ಒಳ್ಳೆಯ ರಿಸಲ್ಟ್ ಪಡೆಯಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು
ಪ್ಯಾನ್ ಅದೆಷ್ಟೇ ಕೊಳಕಾಗಿದ್ರು, ಎಣ್ಣೆಯಾಗಿದ್ರು, ಕಲೆಗಳಿದ್ರು ಚಿಟಿಕೆ ಹೊಡೆಯೋದ್ರಲ್ಲಿ ಕ್ಲೀನ್ ಮಾಡ್ಬೋದು