ಬಣ್ಣದ Butterfly ಮನೆಗೆ ಬರ್ಬೇಕೆಂದ್ರೆ ಬಾಲ್ಕನಿಯಲ್ಲಿರ್ಲಿ ಈ ಗಿಡ

Published : Sep 03, 2025, 12:39 PM IST
Butterfly

ಸಾರಾಂಶ

Butterfly friendly plants : ಮಕ್ಕಳ ಫೆವರೆಟ್ ಬಟರ್ಫ್ಲೈ. ಬಣ್ಣದ ಚಿಟ್ಟೆ ನೋಡ್ತಿದ್ದಂತೆ ಮಕ್ಕಳ ಅಳು ನಿಲ್ಲುತ್ತೆ. ನಿಮ್ಮ ಮನೆಗೂ ಈ ಬಟರ್ಫ್ಲೈ ಬಂದು ನಿಮ್ಮ ಮನಸ್ಸಿಗೆ ಕಚಗುಳಿ ಇಡ್ಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ? 

ಹೂವಿ (Flower)ನ ಮಧ್ಯೆ ಹಾರಾಡುವ ಬಣ್ಣದ ಚಿಟ್ಟೆ (butterfly) ನೋಡೋದೇ ಚೆಂದ. ಹೂವಿನಿಂದ ಹೂವಿಗೆ ಹಾರ್ತಾ, ಮಕರಂದ ಹೀರ್ತಿರುವ ಚಿಟ್ಟೆಗಳು ಮನಸ್ಸಿಗೆ ಮುದ ನೀಡುತ್ವೆ. ಬಣ್ಣದ ಚಿಟ್ಟೆ, ಬಾರೆಲೆ ಚಿಟ್ಟೆ ಅಂದ್ರೆ ನೀವು ಹೇಳಿದ ಜಾಗಕ್ಕೆ ಚಿಟ್ಟೆ ಬರೋದಿಲ್ಲ. ಚಿಟ್ಟೆಗಳನ್ನು ನೋಡಲು ಅನೇಕರು ಚಿಟ್ಟೆ ಪಾರ್ಕ್ ಅಥವಾ ಪಾರ್ಕ್ ಗಳಿಗೆ ಹೋಗ್ತಾರೆ. ನಿಮ್ಮ ಮನೆಗೂ ಚಿಟ್ಟೆ ಬರ್ಬೇಕು, ಅದ್ರ ಅಂದವನ್ನು ನೋಡಿ ನೀವು ಖುಷಿಪಡ್ಬೇಕು ಅಂದ್ರೆ ನಿಮ್ಮ ಮನೆ ಬಾಲ್ಕನಿಯಲ್ಲಿ ಕೆಲ ಗಿಡಗಳನ್ನು ಬೆಳೆಸಿ. ನೀವು ಸ್ವಾಗತ ಮಾಡ್ದೆ ನಿಮ್ಮ ಮನೆಗೆ ಚಿಟ್ಟೆಗಳು ಬರುತ್ವೆ.

ಮನೆಗೆ ಚಿಟ್ಟೆ ಬರ್ಬೇಕೆಂದ್ರೆ ಈ ಗಿಡಗಳನ್ನು ಬೆಳೆಸಿ :

ತುಳಸಿ ಹೂ : ತುಳಸಿ ಹೂಗಳು ಚಿಟ್ಟೆಗಳನ್ನು ಆಕರ್ಷಿಸುತ್ತವೆ. ಚಿಟ್ಟೆಗಳಿಗೆ ನೇರಳೆ ಅಥವಾ ಬಿಳಿ ತುಳಸಿ ಹೂಗಳು ಮಕರಂದದ ಆಶ್ರಯ ತಾಣ. ಸೌಮ್ಯ ಪರಿಮಳ ಹುಡುಕಿ ಅವು ನಿಮ್ಮ ಮನೆಯಂಗಳಕ್ಕೆ ಬರುತ್ವೆ.

ತುಳಸಿ ಬೆಳೆಯೋದು ಹೇಗೆ? : ತುಳಸಿ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ಬೆಳೆಯುತ್ತದೆ. ಸಾಕಷ್ಟು ಸೂರ್ಯನ ಬೆಳಕು ಅದಕ್ಕೆ ಅಗತ್ಯ. ಇದಕ್ಕೆ ಮಿತವಾಗಿ ನೀರನ್ನು ಹಾಕ್ಬೇಕು. ವಸಂತಕಾಲ ಅಥವಾ ಬೇಸಿಗೆಯ ಆರಂಭದಲ್ಲಿ ಇದನ್ನು ಬೆಳೆಯುವುದು ಸೂಕ್ತ. ಭಾರತೀಯ ಹವಾಮಾನ ತುಳಸಿ ಬೆಳೆಗೆ ಯೋಗ್ಯವಾಗಿದೆ. ತುಳಸಿ ಗಿಡ ಚೆನ್ನಾಗಿ ಬೆಳೆಯಬೇಕೆಂದ್ರೆ ಹೂವು ಒಣಗಿದ ಮೇಲೆ ತುದಿಯನ್ನು ಕತ್ತರಿಸುತ್ತಿರಿ.

ಕರಿಬೇವು, ಕೊತ್ತಂಬರಿ ಸೊಪ್ಪಿಗ್ಯಾಕೆ ಮಾರ್ಕೆಟ್ ಗೆ ಹೋಗ್ತೀರಿ? ಹೀಗ್ ಬೆಳಿಬಹುದು

ದಾಸವಾಳ : ನಿಮ್ಮ ಮನೆ ಬಾಲ್ಕನಿಯಲ್ಲಿ ದಾಸವಾಳದ ಹೂ ಅರಳಿ ನಿಂತಿದ್ರೆ ನೀವು ಚಿಟ್ಟೆಯ ನಿರೀಕ್ಷೆ ಮಾಡ್ಬಹುದು. ಅಗಲವಾದ ದಾಸವಾಳದ ಎಸಳು, ಚಿಟ್ಟೆಗಳು ಕುಳಿತುಕೊಳ್ಳಲು ನೆರವಾಗುತ್ವೆ. ಅದ್ರ ಒಳಗಿರುವ ಮಕರಂದ ಚಿಟ್ಟೆಗಳು ಮತ್ತೆ ಮತ್ತೆ ಬರುವಂತೆ ಮಾಡುತ್ತದೆ.

ದಾಸವಾಳ ಬೆಳೆಯೋದು ಹೇಗೆ? : ದಾಸವಾಳದ ಗಿಡವನ್ನು ನೀವು ದೊಡ್ಡ ಮಡಕೆಗಳಲ್ಲಿ ಅಥವಾ ಸಾಕಷ್ಟು ಸೂರ್ಯನ ಬೆಳಕಿರುವ ಜಾಗದಲ್ಲಿ ಬೆಳೆಸಬೇಕು. ಅದಕ್ಕೆ ನಿಯಮಿತವಾಗಿ ನೀರುಹಾಕುವುದು ಅಗತ್ಯ. ಅದಕ್ಕೆ ನೀರು ಕಡಿಮೆ ಆಗದಂತೆ ನೋಡಿಕೊಳ್ಳಿ. ಬೇಸಿಗೆಯ ಆರಂಭದಲ್ಲಿ ದಾಸವಾಳದ ಗಿಡ ನೆಡುವುದು ಉತ್ತಮ. ಬೆಚ್ಚಗಿನ ಪ್ರದೇಶಗಳಲ್ಲಿ ವರ್ಷವಿಡೀ ಇದು ಹೂ ಬಿಡುತ್ತದೆ.

ಚೆಂಡು ಹೂವು : ಹಳದಿ ಹಾಗೂ ಕಿತ್ತಳೆ ಬಣ್ಣದ ಈ ಹೂಗಳು ನಮ್ಮನ್ನು ಮಾತ್ರವಲ್ಲ ಚಿಟ್ಟೆಗಳನ್ನು ಆಕರ್ಷಿಸುತ್ತದೆ. ಚೆಂಡು ಹೂವಿನ ತೋಟದಲ್ಲಿ ಹೆಚ್ಚು ಚಿಟ್ಟೆಗಳನ್ನು ನೀವು ಕಾಣಬಹುದು.

ಚೆಂಡು ಹೂ ಬೆಳೆ : ಇದನ್ನು ನೀವು ಪಾಟ್ ನಲ್ಲಿ ಇಲ್ಲವೆ ನೆಲದ ಮೇಲೆ ಆರಾಮವಾಗಿ ಬೆಳೆಸಬಹುದು. ಇದಕ್ಕೆ ಮಣ್ಣಿನ ಜೊತೆ ಮರಳು ಅಗತ್ಯ. ಹಾಗೆಯೇ ಆರು ಗಂಟೆ ಸೂರ್ಯನ ಕಿರಣದ ಅಗತ್ಯವಿರುತ್ತದೆ. ನಿಯಮಿತವಾಗಿ, ಕಡಿಮೆ ಪ್ರಮಾಣದಲ್ಲಿ ನೀರು ಹಾಕ್ಬೇಕು. ನೀವು ಬೇಸಿಗೆ ಆರಂಭ ಅಥವಾ ಚಳಿಗಾಲದ ಆರಂಭದಲ್ಲಿ ಇದ್ರ ಬೀಜವನ್ನು ಬಿತ್ತಬೇಕು.

Kitchen Garden: ಕೆಮಿಕಲ್ ಮುಕ್ತ ತಾಜಾ ತರಕಾರಿ ನೀವೇ ಬೆಳೆದ್ಕೊಳ್ಳಿ, ಕಿಚನ್ ಗಾರ್ಡನ್ ಶುರುಮಾಡೋಕೆ ಇಲ್ಲಿದೆ ಟಿಪ್ಸ್

ಇಕ್ಸೋರಾ (ರಂಗನ್) : ಇದನ್ನು ಕಾಡು ದಾಸವಾಳ ಅಂತ ಕರೆಯಲಾಗುತ್ತದೆ. ಇದು ಕೆಂಪು ಅಥವಾ ಕೇಸರಿ ಬಣ್ಣದ ಹೂವಿನ ಗೊಂಚಲು. ಒಂದೇ ಕಡೆ ಸಾಕಷ್ಟು ಮಕರಂದ ಸಿಗುವ ಕಾರಣ ಚಿಟ್ಟೆಗಳು ಇದನ್ನು ಇಷ್ಟಪಡುತ್ವೆ.

ಇಕ್ಸೋರಾ ಗಿಡ ಬೆಳೆಸೋದು ಹೇಗೆ? : ಇಕ್ಸೋರಾ ಉಷ್ಣತೆ ಮತ್ತು ತೇವಾಂಶವನ್ನು ಇಷ್ಟಪಡುತ್ತದೆ. ಭಾರತದಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ತೇವಾಂಶವುಳ್ಳ, ಸ್ವಲ್ಪ ಆಮ್ಲೀಯ ಮಣ್ಣಿನಲ್ಲಿ ಇದನ್ನು ಬೆಳೆಸಿ. ಬಿಸಿಲು ಇದಕ್ಕೆ ಅಗತ್ಯ. ಅತಿಯಾದ ನೀರಿನ ಅಗತ್ಯವಿಲ್ಲ. ಮಳೆಗಾಲ ಅಥವಾ ಬೇಸಿಗೆ ಆರಂಭದಲ್ಲಿ ಇದನ್ನು ಬೆಳೆಯಿರಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಲಿಯೋ ವಿಧಾನ
ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು