
ಅನಾರೋಗ್ಯಕ್ಕೆ ಆಹಾರವೇ ಮದ್ದು. ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ದಿನ ದಿನಕ್ಕೂ ಹದಗೆಡಿಸ್ತಿದೆ. ಐದರಲ್ಲಿ ಮೂವರಿಗೆ ಕೊಲೆಸ್ಟ್ರಾಲ್ (Cholesterol) ಸಮಸ್ಯೆ ಕಾಡ್ತಿದೆ. ಇದ್ರಿಂದ ಮುಕ್ತಿಪಡೆಯೋದು ದೊಡ್ಡ ಸವಾಲು. ಫಾಸ್ಟ್ ಫುಡ್, ಫ್ರೈಡ್ ಫುಡ್ (fried food) ತಿನ್ಬೇಡಿ ಅಂತ ವೈದ್ಯರು ಸಲಹೆ ನೀಡ್ತಿದ್ದಾರೆ. ಹೊರಗಿನ ತಿಂಡಿ ಮಾತ್ರ ಆರೋಗ್ಯಕ್ಕೆ ಹಾನಿಕರವಲ್ಲ, ಮನೆಯಲ್ಲಿ ನೀವು ಮಾಡುವ ರುಚಿಯಾದ ಅಡುಗೆ ಕೂಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ. ಮಸಾಲೆ ಆಹಾರ ಅಂದ್ಮೇಲೆ ಅದಕ್ಕೆ ಎಣ್ಣೆ ಒಗ್ಗರಣೆ ಇರ್ಬೇಕು. ಎಣ್ಣೆ ಹಾಕುವಾಗ ಕೈ ನಿಲ್ಲೋದಿಲ್ಲ. ಒಂದು ಬಾಜಿ ಮಾಡ್ಲಿ ಇಲ್ಲ ಪಲ್ಯ ಮಾಡ್ಲಿ ಲೆಕ್ಕ ಮಾಡ್ದೆ ಬಾಣೆಲೆಗೆ ಎಣ್ಣೆ ಹಾಕಿರ್ತೇವೆ. ದಿನ ನಾವು ಪರೋಕ್ಷವಾಗಿ ತಿನ್ನುವ ಈ ಎಣ್ಣೆ ನಮ್ಮ ಕೊಲೆಸ್ಟ್ರಾಲ್ ಜಾಸ್ತಿ ಮಾಡ್ತಿದೆ. ಎಣ್ಣೆ ಇಲ್ದೆ ಅಡುಗೆ ಮಾಡೋದು ಕಷ್ಟ ಅನ್ನೋರು, ಅಡುಗೆ ಮಾಡಾದ್ಮೇಲೆ ಎಣ್ಣೆ ತೆಗೆಯೋ ಟ್ರಿಕ್ಸ್ ಕಲಿತುಕೊಳ್ಳಿ.
ಪಲ್ಯದಿಂದ ಎಣ್ಣೆ ತೆಗೆಯೋದು ಹೇಗೆ? : ಪೂರಿ, ಬಜ್ಜಿ ಮೇಲೆ ಟಿಶ್ಯೂ ಹಾಕಿ ಎಣ್ಣೆ ತೆಗೆಯೋದನ್ನು ನೀವು ಟ್ರೈ ಮಾಡಿರ್ತೀರಿ. ಎಲ್ಲ ತರಕಾರಿ ಹಾಕಿ ರುಚಿ ರುಚಿ ಪಲ್ಯ ಮಾಡಿದ್ದು, ಅದ್ರಲ್ಲಿರುವ ಎಣ್ಣೆ ಹೇಗೆ ತೆಗೆಯೋದು? ಸಿಂಪಲ್ ಆಗಿ ಇದನ್ನು ನೀವು ಮಾಡ್ಬಹುದು. ಮೊದಲು ಮನಸೋ ಇಚ್ಛೆ ಎಣ್ಣೆ ಹಾಕಿ ಪಲ್ಯ ಮಾಡಿ. ನಂತ್ರ ಒಂದು ಬಾಣೆಲೆಗೆ ಎಲ್ಲ ಪಲ್ಯ ಹಾಕಿ, ಅದನ್ನು ಸುತ್ತಲು ಹರಡಿ, ಮಧ್ಯ ಜಾಗ ಮಾಡಿ, ಆ ಜಾಗದಲ್ಲಿ ಸಣ್ಣ ಬೌಲ್ ಉಲ್ಟಾ ಇಡಿ. ನಂತ್ರ ಬಾಣೆಲೆಯ ಮುಚ್ಚಳ ಮುಚ್ಚಿ. ಗ್ಯಾಸ್ ಮೇಲಿಟ್ಟು, ಐದು ನಿಮಿಷ ಬಿಸಿ ಮಾಡಿ. ನಂತ್ರ ಗ್ಯಾಸ್ ಆಫ್ ಮಾಡಿ, ಮುಚ್ಚಳ ತೆಗೆದು, ಬೌಲನ್ನು ನಿಧಾನವಾಗಿ ತೆಗೆಯಿರಿ. ಬೌಲ್ ಕೆಳಗೆ ಎಣ್ಣೆ ಸಂಗ್ರಹವಾಗಿರೋದನ್ನು ನೀವು ಕಾಣ್ಬಹುದು. ಈ ಎಣ್ಣೆಯನ್ನು ಸ್ಪೂನ್ ಸಹಾಯದಿಂದ ತೆಗೆಯಿರಿ. ಹೀಗೆ ಮಾಡಿದ್ರೆ ನಿಮ್ಮ ಪಲ್ಯದಲ್ಲಿರುವ ಹೆಚ್ಚುವರಿ ಆಯಿಲ್ ಹೊರಗೆ ಬರುತ್ತೆ.
ಎಲ್ಲಿ ಪೋಸ್ಟ್ ಆಗಿದೆ ಈ ವಿಡಿಯೋ? : ಇದನ್ನು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಮಾಡಿ ತೋರಿಸಿದ್ದಾರೆ. @radhikamaroo ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆ, ಪಲ್ಯದಲ್ಲಿರುವ ಎಣ್ಣೆ ತೆಗೆಯೋದನ್ನು ನೀಟಾಗಿ ತೋರಿಸಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರ ಕಮೆಂಟ್ : ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಅನೇಕರು ಇವರ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ. ಇದು ನಿಜವಾಗ್ಲೂ ವರ್ಕ್ ಆಗುತ್ತೆ ಎನ್ನುವ ಕಮೆಂಟ್ ಕೂಡ ಬಂದಿದೆ. ಮತ್ತೆ ಕೆಲವರು ಹ್ಯಾಕ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪಲ್ಯ ಮಾಡುವಾಗ ಅವರು ಇಷ್ಟೊಂದು ಆಯಿಲ್ ಹಾಕಿರಲಿಲ್ಲ, ಈಗ ಹೇಗೆ ಬಂತು ಎನ್ನುವ ಪ್ರಶ್ನೆ ಕೂಡ ಮಾಡಿದ್ದಾರೆ. ನಾವಂತೂ ಇದನ್ನು ಟ್ರೈ ಮಾಡಿಲ್ಲ. ಮನೆಯಲ್ಲಿ ನೀವು ಒಮ್ಮೆ ಪ್ರಯತ್ನ ಮಾಡಿ ರಿಸಲ್ಟ್ ಹೇಳಿ.
ಆಯಿಲ್ ಇಲ್ಲದೆ ಅಡುಗೆ ಮಾಡೋದು ಹೇಗೆ? : ಪಲ್ಯ, ಬಾಜಿ ಸೇರಿದಂತೆ ಅನೇಕ ಆಹಾರವನ್ನು ನೀವು ಆಯಿಲ್ ಇಲ್ದೆ ಮಾಡ್ಬಹುದು. ಬಾಣೆಲೆಗೆ ಎಣ್ಣೆ ಹಾಕುವ ಬದಲು ಬಾಣೆಲೆ ಬಿಸಿ ಆಗ್ತಿದ್ದಂತೆ ಸಾಸಿವೆ ಹಾಕಿದ್ರೆ ಅದು ಬಿಸಿಯಾಗಿ ಚಿಟಿಗುಡುತ್ತೆ. ಆಗ ಜಿರಿಗೆ, ಈರುಳ್ಳಿ ಎಲ್ಲವನ್ನು ನೀವು ಸೇರಿಸಿ ಹುರಿಯಬಹುದು. ಈರುಳ್ಳಿ ಬಾಣಲೆಗೆ ಹಿಡಿದಂಗೆ ಆದ್ರೆ ಒಂದೆರಡು ಚಮಚ ನೀರನ್ನು ಹಾಕಿ ಹುರಿದ್ರೆ ಆಯ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.