ರಾವಣ ಬ್ರಾಹ್ಮಣ, ಆದರೆ ರಾಕ್ಷಸ ಎಂದೇ ಗುರುತಿಸ್ತೇವೆ. ಶೃಂಗೇರಿ ದಾಳಿ, ಶಿವಾಜಿ ಹತ್ಯೆ ಉದಾಹರಿಸಿ ಹೇಳಿದ್ದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಮಟಾ (ಫೆಬ್ರವರಿ 9, 2023): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸುವಾಗ ಬ್ರಾಹ್ಮಣರ ಕುರಿತು ತಾವು ನೀಡಿದ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ನಾನು ಮಾತನಾಡಿದ್ದು ಬ್ರಾಹ್ಮಣ ಸಮುದಾಯದ ಕುರಿತಲ್ಲ, ವ್ಯಕ್ತಿಗಳ ಬಗ್ಗೆಯಷ್ಟೆ. ರಾವಣನೂ ಬ್ರಾಹ್ಮಣ. ಆದರೆ ಅವನನ್ನು ನಾವು ರಾಕ್ಷಸ ಅಂತ ಗುರುತಿಸುತ್ತೇವೆಯೇ ಹೊರತು ಬ್ರಾಹ್ಮಣ ಅಂತ ಅಲ್ಲ ಎಂದು ಹೇಳಿದ್ದಾರೆ.
ಕುಮಟಾ ಹಾಗೂ ಗೋಕರ್ಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವನಿಗೆ ರುದ್ರಾಭಿಷೇಕ ಆರಂಭಿಸಿದ್ದೇ ರಾವಣೇಶ್ವರ. ಇಷ್ಟಾದರೂ ರಾವಣನನ್ನು ರಾಕ್ಷಸ ಎಂದೇ ಗುರುತಿಸುತ್ತೇವೆಯೇ ಹೊರತು ಬ್ರಾಹ್ಮಣ ಎಂದಲ್ಲ. ಅದೇ ರೀತಿ ನಾನು ಶೃಂಗೇರಿಯ ಚಂದ್ರಮೌಳೇಶ್ವರ ದೇವಸ್ಥಾನ ಧ್ವಂಸ ಮಾಡಿದವರ ಡಿಎನ್‌ಎಗಳ ಬಗ್ಗೆ ಮಾತನಾಡಿದ್ದೇನೆ. ವಿದ್ಯಾರಣ್ಯರು ಕಟ್ಟಿದ ಚಂದ್ರಮೌಳೇಶ್ವರ ದೇಗುಲದ ಮೇಲೆ ದಾಳಿ ಮಾಡಿದವರು ಯಾರು? ಶಿವಾಜಿ ಹತ್ಯೆ ಮಾಡಿದವರು ಯಾರು? ಆ ವರ್ಗ(ಪೇಶ್ವೆಗಳು)ದ ಜನರನ್ನು ನೀವು ಬ್ರಾಹ್ಮಣರು ಅಂತ ಕರೆಯುತ್ತೀರಾ ಎಂದು ಮರುಪ್ರಶ್ನಿಸಿದರು.
undefined
ಇದನ್ನು ಓದಿ: ಎಚ್‌ಡಿಕೆಗೆ ಸೋಲಿನ ಹತಾಶೆ, ಸ್ಥಿಮಿತ ಇಲ್ಲ: ಬ್ರಾಹ್ಮಣ ಸಿಎಂ ಹೇಳಿಕೆಗೆ ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ..
ಬ್ರಾಹ್ಮಣರ ಬಗ್ಗೆ ಗೌರವ ಇದೆ:
ಬ್ರಾಹ್ಮಣ ಸಮಾಜದ ಬಗ್ಗೆ ನಾನು ಇಂದಿಗೂ ಗೌರವ ಇಟ್ಟುಕೊಂಡಿದ್ದೇನೆ. ನನ್ನ ಹೇಳಿಕೆಯಲ್ಲಿ ಚರ್ಚೆಯಾಗಿರುವುದು ವ್ಯಕ್ತಿ ಮಾತ್ರ. ಅದನ್ನು ಸಮಾಜಕ್ಕೆ ಅನ್ವಯಿಸುವುದು ತಪ್ಪು. ಬ್ರಾಹ್ಮಣರ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಬಿಂಬಿಸುತ್ತಿದ್ದು, ನನ್ನ ಹೇಳಿಕೆ ನಂತರ ಅನೇಕ ಜನ ದೂರವಾಣಿ ಮುಖಾಂತರ ಹೇಳಿಕೆ ಸರಿ ಇದೆ ಎಂದಿದ್ದಾರೆ. ನಾನು ಬ್ರಾಹ್ಮಣರ ಬಗ್ಗೆ ಯಾವುದೇ ರೀತಿಯ ಅವಮಾನಕರ ಮಾತು ಹೇಳಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ .25 ಕೋಟಿ ಅನುದಾನ ಹಾಗೂ ನಿವೇಶನ ನೀಡಿದ್ದೇನೆ. ಆದರೆ ಬಿಜೆಪಿ ಸರ್ಕಾರ ಎಷ್ಟುಹಣ ಬಿಡುಗಡೆ ಮಾಡಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.
ಬ್ರಾಹ್ಮಣರ ಕುರಿತ ನನ್ನ ಹೇಳಿಕೆಯನ್ನು ಪ್ರಶ್ನಿಸಿದ ಗೋಕರ್ಣದ ಅರ್ಚಕರಿಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಚಕರು ಕರೆ ಮಾಡಿದಾಗ ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಅಭಿಮಾನಿ ಎಂದಿದ್ದರು. ಆದರೆ, ನಿಮ್ಮ ಹೇಳಿಕೆಗೆ ಭಾರೀ ಚರ್ಚೆ ನಡೆಯುತ್ತಿದೆಯಲ್ಲ ಎಂದು ಹೇಳಿದ್ದರು. ನಾನೆಂದಿಗೂ ಬ್ರಾಹ್ಮಣ ಸಮಾಜದ ಬಗ್ಗೆ ಎಲ್ಲೂ ಟೀಕೆ ಮಾಡಿಲ್ಲ, ಈ ಸಮಾಜದ ಬಗ್ಗೆ ಗೌರವ ಇಟ್ಟಿದ್ದೇನೆ ಎಂದು ತಿಳಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್