ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಕಳೆದ ನಾಲ್ಕು ತಿಂಗಳುಗಳಿಂದ ಅಲೆದಾಡುತ್ತಿದ್ದ ಒಬ್ಬಂಟಿ ಮಹಿಳೆಗೆ ದಸಂಸ ಸದಸ್ಯರು ಆಸರೆಯಾಗಿ ನಿಂತು ಯೋಜನೆಯ ಫಲಾನುಭವಿಯನ್ನಾಗಿಸಿದ್ದಾರೆ.
ಹುಣಸೂರು : ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಕಳೆದ ನಾಲ್ಕು ತಿಂಗಳುಗಳಿಂದ ಅಲೆದಾಡುತ್ತಿದ್ದ ಒಬ್ಬಂಟಿ ಮಹಿಳೆಗೆ ದಸಂಸ ಸದಸ್ಯರು ಆಸರೆಯಾಗಿ ನಿಂತು ಯೋಜನೆಯ ಫಲಾನುಭವಿಯನ್ನಾಗಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿಯ ಪ. ಜಾತಿಯ 70ರ ಹರೆಯದ ವಿಧವೆ ತಾಯಮ್ಮ ಸರ್ಕಾರದ ಮಾಸಾಶನ ಮತ್ತು ಪಡಿತರವನ್ನು ನಂಬಿಕೊಂಡೇ ಬದುಕಿರುವ ಒಂಟಿ ಜೀವವಾಗಿದೆ. ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿರುವುದನ್ನು ಮನಗಂಡು ತನಗೂ ಯೋಜನೆ ಮಾಡಿಕೊಡಿರೆಂದು ಗ್ರಾಪಂ ಕೇಂದ್ರಕ್ಕೆ ಅಲೆದೂ ಅಲೆದೂ ಸುಸ್ತಾದರು.
undefined
ವಿಷಯ ತಿಳಿದ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮತ್ತವರ ತಂಡ ತಾಯಮ್ಮನವರ ಎಲ್ಲ ದಾಖಲೆಗಳನ್ನು ಪಡೆದು ಕಟ್ಟೆಮಳಲವಾಡಿಯ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಿ ಲೋಪದೋಷಗಳನ್ನು ಸರಿಪಡಿಸಿಕೊಂಡು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸಲ್ಲಿಸಿದರು.
ಒಂಟಿ ಮಹಿಳೆಯ ಸಂಕಷ್ಟದ ಬದುಕಿನ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಮಾಹಿತಿ ಪಡೆದು ಕೂಡಲೇ ದಾಖಲೆಗಳನ್ನು ಅಪ್ ಲೊಡ್ ಮಾಡಿ ಯೋಜನೆಯಡಿ ಮಂಜೂರಾತಿ ನೀಡಲಾಯಿತು.
ಸೌಲಭ್ಯಗಳಿಂದ ವಂಚಿತರಾದ ಹಾಡಿ ಜನ
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಡಿ.30): ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಬೇಕಾದ್ರೆ ಆಧಾರ್, ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಆದ್ರೆ ಜಿಲ್ಲೆಯ ಸಾಕಷ್ಟು ಬುಡಕಟ್ಟು ಸೋಲಿಗರ ಬಳಿ ದಾಖಲೆಗಳೇ ಇಲ್ಲ. ದಾಖಲೆಗಳಿಲ್ಲದ ಹಾಡಿ ಜನರು ಎಲ್ಲಾ ಸೌಲಭ್ಯದಿಂದ ವಂಚಿತರಾಗ್ತಿದ್ದಾರೆ. ಇವರಿಗೆ ಶಿಬಿರ ಆಯೋಜಿಸಿ ಆಧಾರ್, ರೇಷನ್ ಕಾರ್ಡ್ ಮಾಡಿಸಿಕೊಡಲೂ ಪ್ಲ್ಯಾನ್ ಮಾಡಿದ್ದಾರೆ. ದಾಖಲೆಗಳಿಲ್ಲದ ಹಾಡಿ ಜನರ ಸ್ಟೋರಿ ಇಲ್ಲಿದೆ ನೋಡಿ...
ಅಗತ್ಯ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್, ಡಿಜೀಟಲಿಕರಣವಾಗಿಟ್ಟುಕೊಳ್ಳುವ ಈ ಕಾಲದಲ್ಲೂ ಕೂಡ ಚಾಮರಾಜನಗರ ಜಿಲ್ಲೆಯ ನೂರಾರು ಸೋಲಿಗ ಕುಟುಂಬಗಳು ಆಧಾರ್, ರೇಷನ್ ಕಾರ್ಡ್ ನಿಂದ ವಂಚಿತವಾಗಿವೆ. ಇದರಿಂದ ಈ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಸಾಧ್ಯವಾಗ್ತಿಲ್ಲ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಾರ 158 ಹಾಡಿಗಳಿವೆ.ಈಗಾಗ್ಲೇ 135 ಹಾಡಿಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು ಜಿಲ್ಲಾದ್ಯಂತ 30 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನರು ವಾಸವಿದ್ದಾರೆ. ಆದ್ರಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಜಾತಿ ಪ್ರಮಾಣ ಪತ್ರ,ವಿಲ್ಲ, 10 ಸಾವಿರಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಇದರ ಜೊತೆಗೆ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಪಡಿತರ ಸೌಲಭ್ಯ ಪಡೆದಿಲ್ಲ. ಈ ಅಂಶ ಬೆಳಕಿಗೆ ಬಂದ ತಕ್ಷಣ ಆಧಾರ್ ಕಾರ್ಡ್ ನೋಂದಣಿಗೆ 2500 ಕ್ಕೂ ಹೆಚ್ಚು ಹಾಡಿ ಜನರಿಗೆ ನೋಂದಾವಣಿ ಮಾಡಲಾಗಿದೆ. ಇನ್ನೂ ಅಗತ್ಯ ದಾಖಲೆಗಳಿಲ್ಲದ ಜನರ ಬಳಿಗೆ ಹೋಗಲೂ ಶಿಬಿರ ಆಯೋಜಿಸಿ ಆಧಾರ್,ರೇಷನ್ ಕಾರ್ಡ್ ಜೊತೆಗೆ ಬ್ಯಾಂಕ್ ವ್ಯವಸ್ಥೆ ಕಲ್ಪಿಸಲು ಪ್ಲ್ಯಾನ್ ಮಾಡಿದ್ದಾರೆ..
ಲಿಂಗಾಯತ ಕನ್ನಡ ನಾಡಿನ ಪ್ರಥಮ ಧರ್ಮ: ಹಿರಿಯ ನ್ಯಾಯವಾದಿ ವಿರೂಪಾಕ್ಷ
ಇನ್ನೂ ಚಾಮರಾಜನಗರದ ಕಾಡಂಚಿನಲ್ಲಿ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡ್ತಿದ್ದಾರೆ. ನಾವು ಯಾವುದೇ ಸರ್ಕಾರಿ ಯೋಜನೆ ಪಡೆಯಲು ಸಾಧ್ಯವಾಗ್ತಿಲ್ಲ. ಏಕೆಂದರೆ ನಮ್ಮ ಬಳಿ ಆಧಾರ್, ರೇಷನ್ ಕಾರ್ಡ್, ಗುರುತಿನ ಚೀಟಿ ಯಾವುದು ಇಲ್ಲ. ಅಧಿಕಾರಿಗಳ ಇತ್ತ ಗಮನಹರಿಸ್ತಿಲ್ಲ ಅಂತಾ ಆರೋಪ ಮಾಡ್ತಾರೆ. ಇನ್ನೂ ರೇಷನ್ ಕಾರ್ಡ್ ಇಲ್ಲದೇ ಅನ್ನಭಾಗ್ಯ ಯೋಜನೆಯಿಂದಲೂ ವಂಚಿತರಾಗಿದ್ದೇವೆ, ಪಡಿತರ ಸಿಕ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದಷ್ಟೇ ಅಲ್ಲ ಸರ್ಕಾರದ ಗ್ಯಾರಂಟಿ ಸ್ಕೀಂ ಪಡೆಯಲು ದಾಖಲೆಗಳು ಕೂಡ ಕಡ್ಡಾಯವಾಗಿದೆ. ಆದ್ರೆ ನಮ್ಮ ಬಳಿ ಯಾವುದೇ ದಾಖಲಾತಿಯಿಲ್ಲ. ಇಂದಿಗೂ ಕೂಡ ಸರ್ಕಾರದ ಯಾವುದೇ ಸೌಲಭ್ಯವಿಲ್ಲದೇ ಬದುಕುತ್ತಿದ್ದೇವೆ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ಯಪಡಿಸುತ್ತಾರೆ..
ಒಟ್ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಿದ್ರೂ ಕೂಡ ದಾಖಲೆಗಳು ಅತ್ಯಾವಶ್ಯಕ. ಇಂತಹ ದಾಖಲೇಗಳಿಲ್ಲದೆ ಈ ಡಿಜಿಟಲ್ ಯುಗದಲ್ಲೂ ಕೂಡ ಹಾಡಿ ಜನರು ಸೌಲಭ್ಯ ವಂಚಿತರಾಗಿದ್ದಾರೆ. ಅಧಿಕಾರಿಗಳು ಶಿಬಿರ ಆಯೋಜನೆ ಮೂಲಕ ದಾಖಲೆಗಳನ್ನು ಮಾಡಿಸಲು ಚಿಂತಿಸಿದ್ದಾರೆ. ಇದು ಆದಷ್ಟು ಬೇಗ ನಡೆದು ಎಲ್ಲರಿಗೂ ದಾಖಲೆ ಲಭಿಸಲಿ,ಸರ್ಕಾರದ ಸವಲತ್ತು ಸಿಗಲಿ ಎಂಬುದೇ ನಮ್ಮ ಆಶಯ...