'ಇಂದಿರಾ, ರಾಜೀವ್ ಪ್ರಾಣ ತ್ಯಾಗ ಮಾಡಿದ್ರು, ಸೋನಿಯಾ ಪ್ರಧಾನಿ ಪಟ್ಟ ಬಿಟ್ಟರು'

By Suvarna NewsFirst Published Aug 12, 2021, 8:19 PM IST
Highlights

* ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಜನ್ಮದಿನ
*ಸಿದ್ದರಾಮಯ್ಯಗೆ ಜನ್ಮದಿನ ಶುಭಾಶಯ ಕೋರಿದ ಡಿಕೆ ಶಿವಕುಮಾರ್
* ಮೇಕೆದಾಟು  ವಿಚಾರದಲ್ಲಿ ರಾಜ್ಯದ ಹಿತ ಬಲಿ ಕೊಡಲು ಬಿಡುವುದಿಲ್ಲ
* ಸಿಎಂ ಬೊಮ್ಮಾಯಿ ಹೇಳಿಕೆಯ ಜತೆ  ನಿಲ್ಲುತ್ತೇವೆ

ಬೆಂಗಳೂರು(ಆ. 12)  ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೇವೆ.  ಭಗವಂತ ಅವರಿಗೆ ಹೆಚ್ಚಿನ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾರೈಸಿದ್ದಾರೆ.

ಸಿ.ಟಿ.ರವಿ ಬಿಜೆಪಿ ಸಂಸ್ಕೃತಿ ಪ್ರತಿಬಿಂಬಿಸುತ್ತಿದ್ದಾರೆ. ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ನೆಹರು ಕುಟುಂಬದ ತ್ಯಾಗ ದೊಡ್ಡದು. ಅವರಂತೆ ಯಾರು ಕೂಡ ತ್ಯಾಗ ಮಾಡಿಲ್ಲ. ನೆಹರು ಕುಟುಂಬದ ಆಸ್ತಿಯನ್ನು ದಾನ ಮಾಡಿದ್ದಾರೆ. ಅದು ಸಿ.ಟಿ.ರವಿಗೆ ಗೊತ್ತಿಲ್ಲ ಕಾಣುತ್ತದೆ ಎಂದು  ವಾಗ್ದಾಳಿ ಮಾಡಿದರು.

ಸಿಎಂ ಬೊಮ್ಮಾಯಿಗೆ ಅದ್ಭುತ ಸಲಹೆ ಕೊಟ್ಟ ಡಿಕೆ ಶಿವಕುಮಾರ್

ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು. ನಮಗೂ ತಮಿಳುನಾಡಿನಲ್ಲಿ ರಾಜಕೀಯ ಹೊಂದಾಣಿಕೆ ಇದೆ. ಆದರೆ ರಾಜ್ಯದ ಹಿತದ ಬಗ್ಗೆ ಬದ್ಧತೆ ಇದೆ. ಮೇಕೆದಾಟು ಕುಡಿಯುವ ನೀರಿನ ಬಗ್ಗೆ ಯಾರ ಅನುಮತಿಯೂ ಬೇಕಿಲ್ಲ  ನನ್ನ ಕ್ಷೇತ್ರದಲ್ಲಿ ಇರುವ ಮೇಕೆದಾಟು ಯೋಜನೆ ಗಮನ ನೀಡಲೇಬೇಕಿದೆ. ನಾವು ಬೊಮ್ಮಾಯಿ ಹೇಳಿಕೆ ಜೊತೆ ನಿಲ್ಲುತ್ತೇವೆ. ಯೋಜನೆಯಿಂದ  ಕುಡಿಯುವ ನೀರಿನ ಬವಣೆ ನೀಗಲಿದೆ ಎಂದರು.

click me!