'ಸಂಸ್ಕೃತ ಶ್ಲೋಕಗಳನ್ನು ಬೋಧಿಸಿದರೆ ರೇಪ್‌ ತಡೆಯಬಹುದು'!

By Kannadaprabha NewsFirst Published Dec 21, 2019, 8:35 AM IST
Highlights

ಸಂಸ್ಕೃತ ಶ್ಲೋಕಗಳನ್ನು ಬೋಧಿಸಿದರೆ ರೇಪ್‌ ತಡೆಯಬಹುದು!|  ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಪ್ರತಿಪಾದನೆ

ನಾಗ್ಪುರ[ಡಿ.21]: ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕಗಳ ಬೋಧನೆಯಿಂದ ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅತ್ಯಾಚಾರ ಘಟನೆಗಳನ್ನು ತಡೆಯಬಹುದಾಗಿದೆ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಪ್ರತಿಪಾದಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕಗಳನ್ನು ಬೋಧಿಸಬೇಕೆಂದು ನಾಗ್ಪುರ ವಿವಿ ಭೋದಕ ಸಿಬ್ಬಂದಿಗೆ ಸೂಚಿಸಿದ್ದಾರೆ.

ನಾಗ್ಪುರ ವಿವಿಯ ಜಮನಾಲಾಲ್‌ ಬಜಾಜ್‌ ಅವರ ಆಡಳಿತಾತ್ಮಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಮತ್ತು ದುಷ್ಟಜನರ ನಡುವಿನ ವ್ಯತ್ಯಾಸಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಲ್ಲದೆ, ಹಣವಂತರು ತಮ್ಮ ಹಣ, ಜ್ಞಾನ, ಅಧಿಕಾರವನ್ನು ಮಹಿಳೆಯರ ಮೇಲೆ ದೌರ್ಜನ್ಯಕ್ಕಾಗಿ ದುರುಪಯೋಗಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!