
ನವದೆಹಲಿ(ಏ.01) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ ಹೇರಲಾಗಿದೆ. ಪ್ರತಿ ದಿನ ಇಪ್ಪತ್ತೈದು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅತ್ತ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಈ ಮಹಾಮಾರಿ ಆರೋಗ್ಯ ವ್ಯವಸ್ಥೆಯ ಬಣ್ಣ ಬಯಲು ಮಾಡಿದೆ. ಅತ್ತ ಪ್ರಕರಣಗಳು ಏರುತ್ತವೆ, ಇತ್ತ ಜನರಿಗೆ ಆಸ್ಪತ್ರೆಗಳ:ಲ್ಲಿ ಬೆಡ್, ಆಕ್ಸಿಜನ್ ಏನೂ ಸಿಗುತ್ತಿಲ್ಲ. ಕೊರೋನಾ ಎದುರಿಸಲು ಬೇಕಾದ ಅಗತ್ಯ ಔಷಧ, ಟೆಸ್ಟಿಂಗ್ ಕಿಟ್ ಎಲ್ಲದರ ಕೊರತೆ ಎದ್ದು ಕಾಣುತ್ತಿದೆ.
ಹೀಗಿರುವಾಗ ಈ ಮಹಾಮಾರಿ ಹಾವಳಿಯಿಂದ ಬೆಚ್ಚಿ ಬಿದ್ದಿರುವ ದೆಹಲಿ ನಿವಾಸಿಗರಿಗೆ ಲಾಕ್‌ಡೌನ್ ಒಂದೇ ಪರಿಹಾರವಾಗಿ ಕಾಣುತ್ತಿದೆ. ವೈದ್ಯಕೀಯ ಸೌಲಭ್ಯದ ಕೊರತೆ, ಏರುತ್ತಿರುವ ಪ್ರಕರಣಗಳಿಂದ ಬೆಚ್ಚಿ ಬಿದ್ದಿರುವ ದೆಹಲಿ ನಿವಾಸಿಗರಲ್ಲಿ ಶೇ. 75ರಷ್ಟು ಮಂದಿ ಲಾಕ್ಡೌನ್ ಮುಂದುವರೆಸುವಂತೆ ಮನವಿ ಮಾಡಿದ್ದಾರೆಂದು ಸಮೀಕ್ಷೆಯೊಂದು ತಿಳಿಸಿದೆ.
ಲಾಕ್‌ಡೌನ್ ಮುಂದುವರೆಸಲು ಒಲವು ತೋರಿದ ಶೇ. 75 ರಷ್ಟು ಮಂದಿ
ಲೋಕಲ್ ಸರ್ಕಲ್ ದೆಹಲಿ ಪರಿಸ್ಥಿತಿ ಮುಂದಿಟ್ಟುಕೊಮಡು ಒಂದು ಸರ್ವೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 75ರಷ್ಟು ಮಂದಿ ಲಾಕ್‌ಡೌನ್ ಇನ್ನೂ ಕೆಲ ದಿನ ಮುಂದುವರೆಸುವಂತೆ ಸೂಚಿಸಿದ್ದಾರೆ. ಕಡಿಮೆ ಎಂದರೂ ಒಂದು ವಾರವಾದರೂ ಸರಿ ಆದರೆ ಸದ್ಯಕ್ಕೆ ಯಾವುದೇ ವ್ಯವಹಾರಕ್ಕೆ ಅವಕಾಶ ನೀಡದೇ, ಲಾಕ್‌ಡೌನ್ ಮುಂದುವರೆಸುವಂತೆ ತಿಳಿಸಿದ್ದಾರೆ.
ಈ ಶೇ. 75ರಲ್ಲಿ, ಶೇ. 31ರಷ್ಟು ಮಂದಿ ಮೂರು ವಾರಕ್ಕಿಂತ ಮೊದಲು ಏನೂ ತೆರೆಯುವುದು ಬೇಡ ಎಂದಿದ್ದರೆ, ಶೇ. 29ರಷ್ಟು ಮಂದಿ ಎರಡು ವಾರ ಲಾಕ್‌ಡೌನ್ ಮುಂದುವರೆಸಲು ಒಲವು ತೋರಿದ್ದಾರೆ. ಇನ್ನು ಶೇ. 15ರಷ್ಟು ಮಂದಿ ಒಂದು ವಾರ ಲಾಕ್‌ಡೌನ್ ಮುಂದುವರೆಸುವಂತೆ ತಿಳಿಸಿದ್ದರೆ.
ಇನ್ನುಳಿದವರಲ್ಲಿ ಶೇ. 13ರಷ್ಟು ಮಂದಿ ಲಾಕ್‌ಡೌನ್ ಹಾಗೂ ಜನತಾ ಕರ್ಫ್ಯೂ ಕೊನೆಗೊಳಿಸಿ ಕೇವಲ ನೈಟ್ ಕರ್ಫ್ಯೂ ವಿಧಿಸಲು ಸೂಚಿಸಿದ್ದರೆ, ಶೇ. 5ರಷ್ಟು ಮಂದಿ ಲಾಕ್‌ಡೌನ್, ಕರ್ಫ್ಯೂ ಹೀಗೆ ಎಲ್ಲಾ ನಿಯಮಗಳನ್ನು ಹಿಂಪಡೆಯಯಿರಿ ಎಂದಿದ್ದಾರೆ. ಕೇವಲ ಶೇ. 7ರಷ್ಟು ಮಂದಿ ಈ ಬಗ್ಗೆ ಯಾವುದೇ ಅಭಿಪ್ರಾಯ ನೀಡಿಲ್ಲ. ಇನ್ನು ಈ ಸಮೀಕ್ಷೆಯಲ್ಲಿ ಒಟ್ಟು 16397 ಮಂದಿ ಭಾಗವಹಿಸಿದ್ದರೆಂಬುವುದು ಉಲ್ಲೇಖನೀಯ.
ಶೇ. 84ರಷ್ಟು ಮಂದಿಗೆ ಹೋಂ ಡೆಲಿವರಿ ವ್ಯವಸ್ಥೆ ಬೇಕು
ಇನ್ನು ಲಾಕ್‌ಡೌನ್ ಮುಂದುವರೆಸಲು ಒಲವು ತೋರಿಸಿರುವ ದೆಹಲಿ ನಿವಾಸಿಗರು ಹೋಂ ಡೆಲಿವರಿ ವ್ಯವಸ್ಥೆಗೂ ಪ್ರಾಥಮಿಕತೆ ನೀಡಿದ್ದಾರೆ. ಶೇ. 84ರಷ್ಟು ಮಂದಿ ಎಲ್ಲಾ ವಸ್ತುಗಳ ಹೋಂ ಡೆಲಿವರಿ ವ್ಯವಸ್ಥೆ ಇರಲಿ, ಜನರು ಮನೆಯಲ್ಲೇ ಉಳಿಯಲಿ. ಇದರಿಂದ ಸೋಂಕು ಕಡಿಮೆಯಾಗುತ್ತದೆ ಎಂದಿದ್ದಾರೆ. ಶೇ. 43ರಷ್ಟು ಮಂದಿ ಕೇವಲ ಔಷಧಿ ಹಾಗೂ ದಿನಸಿ ಸಾಮಗಗ್ರಿಗಳ ಹೋಂ ಡೆಲಿವರಿ ವ್ಯವಸ್ಥೆ ಇದ್ದರೆ ಸಾಕು ಎಂದಿದ್ದಾರೆ. ಆದರೆ ಶೇ. 41ರಷ್ಟು ಮಂದಿ ಎಲ್ಲಾ ವಸ್ತುಗಳ ಹೋಂ ಡೆಲಿವರಿ ಇರಬೇಕೆಂದಿದ್ದಾರೆ.
ಆದರೆ ಶೇ. 13ರಷ್ಟು ಮಂದಿ ಅಂಗಡಿಗೆ ಹೋಗಿ ವಸ್ತು ಖರೀದಿಸಲು ಒಂದು ಸಿಸ್ಟಂ ಇರಬೇಕು. ಇದಕ್ಕಾಗಿ ಶಿಫ್ಟ್ ನಿಗದಿಪಡಿಸಬೇಕೆಂದಿದ್ದಾರೆ. ಇನ್ನು ಶೇ. 3 ರಷ್ಟು ಮಂದಿ ಏಣು ಹೇಳಿಲ್ಲ. ಈ ಸಮೀಕ್ಷೆಯಲ್ಲಿ 5801 ಮಂದಿ ಭಾಗವಹಿಸಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ