ರೇಪ್‌ ಆರೋಪಿ ‘ಪ್ರತಿಭಾವಂತ ವಿದ್ಯಾರ್ಥಿ’, ಜಾಮೀನು ಮಂಜೂರು ಮಾಡಿದ ಹೈಕೋರ್ಟ್!

By Suvarna NewsFirst Published Aug 24, 2021, 11:11 AM IST
Highlights

* ಅತ್ಯಾಚಾರ ಆರೋಪಿ, ಪ್ರತಿಭಾವಂತ ಮತ್ತು ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿ ಎಂದ ಕೋರ್ಟ್‌

* ಜಾಮೀನು ಮಂಜೂರು ಮಾಡಿದ ಗುವಾಹಟಿ ಹೈಕೋರ್ಟ್‌

ಗುವಾಹಟಿ(ಆ.24): ಅತ್ಯಾಚಾರ ಆರೋಪಿಯನ್ನು ಪ್ರತಿಭಾವಂತ ಮತ್ತು ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿಯೆಂದು ಪ್ರತಿಪಾದಿಸಿರುವ ಗುವಾಹಟಿ ಹೈಕೋರ್ಟ್‌ ಆತನಿಗೆ ಜಾಮೀನು ಮಂಜೂರು ಮಾಡಿದೆ.

ಹಾಗಲ್ಲ..ಹೀಗೆ... ಅಸ್ವಾಭಾವಿಕ ಸೆಕ್ಸ್‌ಗೆ ಉದ್ಯಮಿ ಪತಿ ಒತ್ತಾಯ!

ನ್ಯಾಯಾಲಯಕ್ಕೆ ಎಫ್‌ಐಆರ್‌, ವೈದ್ಯಕೀಯ ವರದಿ ಮತ್ತು ಸಾಕ್ಷ್ಯಗಳ ಹೇಳಿಕೆಗಳಿಂದ ಆರೋಪಿ ತಪ್ಪಿತಸ್ಥ ಎಂದು ಮನವರಿಕೆಯಾಗಿತ್ತು. ಆದಾಗ್ಯೂ, ಸಂತ್ರಸ್ತ ಯುವತಿ ಮತ್ತು ಆರೋಪಿ ಇಬ್ಬರು ಸಹ 19-21 ವರ್ಷದೊಳಗಿನವರಾಗಿದ್ದು, ಇಬ್ಬರೂ ಸಹ ದೇಶದ ಪ್ರತಿಷ್ಠಿತ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಾಗಿದ್ದಾರೆ. ಹೀಗಾಗಿ ಈ ಇಬ್ಬರು ಸಹ ಅಸ್ಸಾಂನ ಭವಿಷ್ಯದ ಆಸ್ತಿಯಾಗಿದ್ದಾರೆ ಎಂದು ಹೇಳಿತು. ಅಲ್ಲದೆ ಆರೋಪಿಗೆ ಜಾಮೀನು ಮಂಜೂರು ಮಾಡಿತು.

ಮತ್ತೊಂದು ನಿರ್ಭಯ ಪ್ರಕರಣದಿಂದ ಬೆಚ್ಚಿ ಬಿದ್ದ ದೆಹಲಿ;ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ರೇಪ್!

ಬಿಟೆಕ್‌ ವಿದ್ಯಾರ್ಥಿಯಾದ ಆರೋಪಿ ಸಂತ್ರಸ್ತ ಯುವತಿಯನ್ನು ಮಾ.28ರಂದು ಅಕ್ಷರಾ ಶಾಲಾ ಆವರಣಕ್ಕೆ ಕರೆಸಿಕೊಂಡು ಮದ್ಯಪಾನ ಮಾಡಿಸಿದ್ದ. ಬಳಿಕ ಆಕೆ ಪ್ರಜ್ಞೆ ತಪ್ಪಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

click me!