ಬೆಂಗಳೂರು (ಆ.23): ರೂಲ್ ಫ್ರಮ್ ಜೈಲ್ ಅಧಿಕಾರಿ ಯಾರಿಗೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅನೇಕ ವಿಪಕ್ಷ ನಾಯಕರು ಜೈಲಿನಲ್ಲಿದ್ದಾರೆ. ಅದೇ ಕಾರಣಕ್ಕಾಗಿ ಕ್ರಿಮಿನಲ್ ಮಂತ್ರಿಗಳ ವಜಾ ಮಸೂದೆಗೆ ವಿಪಕ್ಷ ಅಡ್ಡಿಪಡಿಸುತ್ತಿದೆ. ಭ್ರಷ್ಟ ಅಧಿಕಾರಿಗಳು ವಜಾ ಆಗ್ತಾರೆ. ಮಂತ್ರಿಗಳು ಯಾಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರ ವಿಧಾನಸಭಾ ಚುನಾವಣೆಯ ಭಾಷಣದಲ್ಲಿ ಹೇಳಿದ್ದಾರೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:01 PM (IST) Aug 23
ಸ್ವಾತಂತ್ರ್ಯವೂ ಬೇಕು, ಪತಿಯ ಜೊತೆಗೆ ಇರುವುದು ಕಷ್ಟವಾಗಿದೆ ಎಂದ ಮಹಿಳೆಯೊಬ್ಬರಿಗೆ ಪಾಠ ಮಾಡಿರುವ ಕೋರ್ಟ್ ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರಲಾರದು ಎನ್ನುವ ಮೂಲಕ ಹೇಳಿದ್ದೇನು ಕೇಳಿ..
08:59 PM (IST) Aug 23
ಮುಂಬೈ - ರಾಜ್ಯದ ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಆಗಸ್ಟ್ ತಿಂಗಳ ಸಂಬಳ 5 ದಿನ ಮುಂಚಿತವಾಗಿಯೇ ಅಂದರೆ 26 ಆಗಸ್ಟ್‌ರಂದು ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಇದರಿಂದ ನೌಕರರ ಗಣೇಶೋತ್ಸವದ ಸಂಭ್ರಮ ಇಮ್ಮಡಿ ಆಗಿದೆ.
07:01 PM (IST) Aug 23
06:06 PM (IST) Aug 23
ದೆಹಲಿ ಮೆಟ್ರೋದಲ್ಲಿ ಕೊಳಲು ವಾದಕನೋರ್ವನ ಕೊಳಲ ನಾದಕ್ಕೆ ಮಗುವನ್ನು ಅಮ್ಮನ ಕೈಯಿಂದಿಳಿದು ಅಂಬೆಗಾಲಿಡುತ್ತಲೇ ಆತನ ಬಳಿ ಹೋಗಿದೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
05:58 PM (IST) Aug 23
05:00 PM (IST) Aug 23
ಒಡಿಶಾದ ಶಾಲೆಯೊಂದರಲ್ಲಿ ಶಿಕ್ಷಕರು ಒಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಗಮನಿಸದೇ ತರಗತಿ ಕೋಣೆಗೆ ಬೀಗ ಹಾಕಿ ಹೋಗಿದ್ದಾರೆ. ಇದರಿಂದ ಹೊರಗೆ ಬರಲು ಯತ್ನಿಸಿದ ಬಾಲಕಿ ರಾತ್ರಿಯಿಡೀ ಕಿಟಕಿಯಲ್ಲಿ ಸಿಲುಕಿಕೊಂಡು ಕಾಲ ಕಳೆದ ಘಟನೆ ನಡೆದಿದೆ.
03:43 PM (IST) Aug 23
03:28 PM (IST) Aug 23
ಮಾಜಿ ಸಿಎಂ ಜಯಲಲಿತಾ ಒಮ್ಮೆ ಸಮಾವೇಶಕ್ಕೆ ಜಾಗ ಹುಡುಕುತ್ತಿದ್ದರು. ಅಂದು ಆ ಉದ್ಯಮಿ 100 ಎಕರೆ ಜಮೀನು ಖರೀದಿಸಿ ಜಯಲಲಿತಾ ಅವರಿಗೆ ನೀಡಿದ್ರಂತೆ. ಇಂದು ಅದೇ ಉದ್ಯಮಿ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ, ಫೈವ್ ಸ್ಟಾರ್ ಹೋಟೆಲ್‌ನಂತಿರೋ ಬಂಗ್ಲೆ ನೋಡಿ ಒಂದು ಕ್ಷಣ ಶಾಕ್ ಆಗಿದ್ರಂತೆ.
03:18 PM (IST) Aug 23
ಅಮೆರಿಕಾ ತನ್ನ ಸ್ವಪ್ರಯೋಜನಗಳಿಗಾಗಿ ಯಾರ ಜೊತೆ ಬೇಕಾದರೂ ದೋಸ್ತಿ ಮಾಡ್ಕೊಳ್ಳುತ್ತೆ. ಯಾರನ್ನಾದ್ರೂ ವಿರೋಧಿಸುತ್ತೆ. ಬೇರೆ ದೇಶಗಳ ವಿಷಯಗಳಲ್ಲಿ ತಲೆ ಹಾಕುತ್ತೆ. ಇಂಥ ದೇಶ ಇತ್ತೀಚೆಗೆ ಪಾಕಿಸ್ತಾನಕ್ಕೆ ಹತ್ತಿರ ಆಗ್ತಿದೆ. ಇದಕ್ಕೆ ನಿಜವಾದ ಕಾರಣ ಏನು ಅಂತ ನೋಡೋಣ.
03:06 PM (IST) Aug 23
ಎನ್‌ಎಸ್‌ಜಿ ಕಮಾಂಡೋ: 'ಬ್ಲ್ಯಾಕ್ ಕ್ಯಾಟ್ಸ್' ಅಂತ ಫೇಮಸ್ ಆಗಿರೋ ಎನ್‌ಎಸ್‌ಜಿ ಕಮಾಂಡೋ ಆಗೋದು ಅನೇಕ ಯುವಕರ ಕನಸು. ಆದ್ರೆ, ಈ ತಂಡ ಸೇರೋಕೆ ಸ್ಪೆಷಲ್ ಅರ್ಹತೆ, ಕಠಿಣ ಆಯ್ಕೆ ಪ್ರಕ್ರಿಯೆ ದಾಟಬೇಕು. ಅದೇನು ಅಂತ ನೋಡೋಣ.
01:15 PM (IST) Aug 23
ನಾಸಿಕ್‌ನಲ್ಲಿ ಬೀದಿನಾಯಿಯೊಂದು ಚಿರತೆಯನ್ನು ಬೇಟೆಯಾಡಿ 300 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
12:08 PM (IST) Aug 23
11:13 AM (IST) Aug 23
07:55 AM (IST) Aug 23
ರೂಲ್ ಫ್ರಂ ಜೈಲ್ (ಜೈಲಿನಿಂದಲೇ ಆಡಳಿತ) ನಡೆಸುವ ಅಧಿಕಾರ ಯಾರಿಗೂ ಇಲ್ಲ. ಕ್ರಿಮಿನಲ್‌ಗಳು ಜೈಲಲ್ಲಿರಬೇಕೇ ವಿನಾ ಅಧಿಕಾರದಲ್ಲಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
07:54 AM (IST) Aug 23
ಜಗತ್ತಿನಾದ್ಯಂತ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಸದ್ಯದ ಕಳವಳಕಾರಿ ಸಂಗತಿ ಏನೆಂದರೆ ಆಟವಾಡಲು ಶಟಲ್‌ಗಳೇ ಸಿಗದೆ ಹೋಗುವ ಪರಿಸ್ಥಿತಿ ಬರಬಹುದು.
07:54 AM (IST) Aug 23
ಡ್ರಗ್ಸ್ ಮಾಫಿಯಾ ವಿರುದ್ಧ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಒಟ್ಟು 72 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
07:53 AM (IST) Aug 23
ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಏಷ್ಯಾದ ಅತಿ ಅಗಲವಾದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.
07:53 AM (IST) Aug 23
‘ನಾಯಿಗಳಿಗೆ ಬೀದಿಗಳಲ್ಲಿ ಸಿಕ್ಕಸಿಕ್ಕಲ್ಲಿ ಆಹಾರ ಹಾಕಬಾರದು’ ಎಂದು ಕಟ್ಟೆಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಅದಕ್ಕಾಗಿ ಮೀಸಲು ಸ್ಥಳಗಳನ್ನು ಸ್ಥಾಪಿಸುವಂತೆ ನಗರಪಾಲಿಕೆಗಳಿಗೆ ಸೂಚಿಸಿದೆ.
07:52 AM (IST) Aug 23
ಸರ್ಕಾರಿ ಹಣ ದುರ್ಬಳಕೆ ಆರೋಪದ ಮೇಲೆ ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನುಶುಕ್ರವಾರ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
07:52 AM (IST) Aug 23
ದೇಶದ ಬಾಹ್ಯಾಕಾಶ ಕ್ಷೇತ್ರದ ಕನಸಿನ ಅಂತರಿಕ್ಷ ಕೇಂದ್ರದ ಪ್ರತಿಕೃತಿಯನ್ನು ಇಸ್ರೋ ಶುಕ್ರವಾರ ಅನಾವರಣಗೊಳಿಸಿದೆ. ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 2 ದಿನದ ರಾಷ್ಟ್ರೀಯ ಅಂತರಿಕ್ಷ ದಿನ ಆಚರಣೆಯ ಸಂದರ್ಭದಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.
07:52 AM (IST) Aug 23
ಆರ್ಥಿಕವಾಗಿ ಜರ್ಜರಿತಗೊಂಡಿರುವ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ ಕಾರ್ಖಾನೆಗಳಿಗಿಂತ ಹೆಚ್ಚು ಮಸೀದಿ, ಮದರಸಾಗಳೇ ಇವೆ ಎಂದು ಹೇಳಿದೆ.
07:51 AM (IST) Aug 23
ಪ್ರಧಾನಿ ನರೇಂದ್ರ ಮೋದಿ ಅವರ ಗಯಾ ಭೇಟಿ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಮತ ಚೋರ ಬಿಹಾರಕ್ಕೆ ಬಂದರೂ ಮತ ಚೋರಿ ಬಗ್ಗೆ ಒಂದೂ ಮಾತನಾಡಲಿಲ್ಲ’ ಎಂದಿದ್ದಾರೆ.