ಬೆಂಗಳೂರು (ಆ.12): ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಭಾರೀ ಮತಗಳವು ನಡೆದಿತ್ತು ಎಂದು ಆರೋಪಿಸಿ ಇತ್ತೀಚೆಗೆ ಬೆಂಗಳರಿನಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್, ಇದೀಗ ಈ ಹೋರಾಟದ ಕಿಚ್ಚನ್ನು ಈಗ ದೆಹಲಿಗೆ ಕೊಂಡೊಯ್ದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ಸೋಮವಾರ ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:11 PM (IST) Aug 12
ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನಿಗಳ ಎದೆಯನ್ನು ಝಲ್ ಎನ್ನಿಸಿರೋ ಭಾರತೀಯ ಸೇನೆಯ ವೀರ ಯೋಧರಾದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
10:24 PM (IST) Aug 12
ಹಿರಿಯ ನಾಗರಿಕರು ಯಾವ ಬ್ಯಾಂಕ್ನಲ್ಲಿ ಎಫ್ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗತ್ತೆ? ಇಲ್ಲಿದೆ ಎಲ್ಲಾ ಬ್ಯಾಂಕ್ಗಳ ಡಿಟೇಲ್ಸ್...
08:02 PM (IST) Aug 12
ಶಾಲೆಯಲ್ಲಿ ಫೇಲ್ ಆದ 12 ವರ್ಷದ ಬಾಲಕಿಯೊಬ್ಬಳು ಸ್ಟ್ರಿಕ್ಟ್ ಅಪ್ಪ-ಅಮ್ಮನಿಗೆ ಭಯಪಟ್ಟು ಮನೆಬಿಟ್ಟು ಹೋಗಿ ಕಾಮುಕರ ಬಲೆಯಲ್ಲಿ ಸಿಲುಕಿದ್ದಾಳೆ. ಈಕೆಯ ದಾರುಣ ಸ್ಟೋರಿ ಕೇಳಿ...
07:09 PM (IST) Aug 12
99ರ ಹರೆಯದ ವೃದ್ಧ ತನ್ನ 96ರ ಹರೆಯದ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. 2011ರಲ್ಲಿ ಇಟಲಿಯಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭಾರಿ ವೈರಲ್ ಆಗ್ತಿದೆ.
06:21 PM (IST) Aug 12
Gen Z ಪೀಳಿಗೆಯವರು ಸುದ್ದಿ ಸೇವನೆಯಲ್ಲಿ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಉತ್ಪಾದಕ AI ಬಳಸಿ ಸುದ್ದಿಗಳನ್ನು ವಿಶ್ಲೇಷಿಸಿ, ಸ್ವತಂತ್ರವಾಗಿ ಪರಿಶೀಲಿಸಿ, ಸ್ಥಳೀಯ ಭಾಷೆಗಳಲ್ಲಿ ಸೇವಿಸುತ್ತಿದ್ದಾರೆ. ಇದು ಮಾಹಿತಿಯ ಸಕ್ರಿಯ ವಿಶ್ಲೇಷಣೆಗೆ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ.
05:49 PM (IST) Aug 12
03:19 PM (IST) Aug 12
ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲರು, ಅಂತಹ ರೀತಿಯ ವ್ಯಾಯಾಮವು 'ಇಲ್ಲಿ ಮತ್ತು ಅಲ್ಲಿ ಕೆಲವು ದೋಷಗಳನ್ನು ಹೊಂದಿರುವುದು ಖಚಿತ' ಎಂದು ಹೇಳಿದ್ದಾರೆ.
02:28 PM (IST) Aug 12
01:46 PM (IST) Aug 12
ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ಹಾಗೆಯೇ ಗುರುಗ್ರಾಮದಲ್ಲಿ ಕೇವಲ ಪಿಯುಸಿ ಶಿಕ್ಷಣ ಮುಗಿಸಿದ್ದ ಯುವಕನೋರ್ವ ನಕಲಿ ಐಎಎಸ್ ಅಧಿಕಾರಿಯಾಗಿದ್ದು ಆತನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
01:20 PM (IST) Aug 12
12:56 PM (IST) Aug 12
12:47 PM (IST) Aug 12
ಗಂಡು ಮಗುವಿನ ಆಸೆಗಾಗಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗಳಿಗೆ ವಿಷ ಉಣಿಸಿ ಕೊಂದಿದ್ದಾನೆ. ಈ ಘಟನೆ ತ್ರಿಪುರಾದಲ್ಲಿ ನಡೆದಿದ್ದು, ಆರೋಪಿ ಸರ್ಕಾರಿ ಉದ್ಯೋಗಿ.
12:20 PM (IST) Aug 12
12:12 PM (IST) Aug 12
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಫಾಲೋವರ್ಸ್‌ಗಳ ಸಂಖ್ಯೆಗಳನ್ನು ಹೋಲಿಸಲಾಗಿದೆ. ಕೆಲವು ವೇದಿಕೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವೆಡೆ ಬಿಜೆಪಿ ಮುನ್ನಡೆ ಸಾಧಿಸಿದೆ. ಮೋದಿ ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಖಾತೆಗಳ ಫಾಲೋವರ್ಸ್‌ಗಳ ಮಾಹಿತಿಯನ್ನೂ ನೀಡಲಾಗಿದೆ.
11:38 AM (IST) Aug 12
ಕೇರಳದಲ್ಲಿ ಪ್ರೀತಿಸಿದ ಯುವಕ ಮತ್ತು ಆತನ ಕುಟುಂಬದಿಂದ ಮತಾಂತರದ ಒತ್ತಾಯಕ್ಕೆ ಒಳಗಾದ 23 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ.
11:04 AM (IST) Aug 12
10:51 AM (IST) Aug 12
ತಾಯಿ ಬಿಟ್ಟು ಹೋದ ಚಿರತೆ ಮರಿಯೊಂದನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಯುವಕನೋರ್ವ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ಮರಿಯನ್ನು ಕರೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
07:49 AM (IST) Aug 12
ಮತಗಳವಿನ ಆರೋಪದ ಕುರಿತು ಸಾಕ್ಷ್ಯ ನೀಡುವಂತೆ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
07:48 AM (IST) Aug 12
ಅಮೆರಿಕ ಅಧ್ಯಕ್ಷ ಟ್ರಂಪ್ ರಾಜಧಾನಿ ವಾಷಿಂಗ್ಟನ್ ಡಿಸಿಯ ಪೊಲೀಸ್ ಇಲಾಖೆಯನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಿ, ಆ ಜಾಗಕ್ಕೆ ರಾಷ್ಟ್ರೀಯ ಗಾರ್ಡ್ (ಸೇನೆ) ಅನ್ನು ನಿಯೋಜಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.
07:48 AM (IST) Aug 12
ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿರುವನಂತಪುರದಿಂದ ದಿಲ್ಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಪ್ರಕ್ಷುಬ್ಧತೆ ಹಾಗೂ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
07:47 AM (IST) Aug 12
ಕರ್ನಾಟಕ ಮಾದರಿಯಲ್ಲಿ ಆಂಧ್ರಪ್ರದೇಶ ಮಹಿಳೆಯರಿಗಾಗಿ ಉಚಿತ ಸಾರಿಗೆ ಯೋಜನೆ ಜಾರಿಗೆ ಮುಂದಾಗಿದೆ. 2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು ಸರ್ಕಾರ ಆ.15ರಿಂದ ಯೋಜನೆ ಆರಂಭಿಸಲಿದೆ.
07:47 AM (IST) Aug 12
ಬೀದಿನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಶೀಘ್ರದಲ್ಲೇ ಆಶ್ರಯ ತಾಣಗಳಿಗೆ (ಶೆಡ್‌ಗೆ) ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
07:46 AM (IST) Aug 12
ಸೋಮವಾರ ಗದ್ದಲದ ನಡುವೆಯೂ ಆದಾಯ ತೆರಿಗೆಗೆ ಸಂಬಂಧಿಸಿದ 2 ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆದಾಯ ತೆರಿಗೆ(2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳು ಅಂಗೀಕಾರವಾದವು.
07:46 AM (IST) Aug 12
ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಸೇರಿದ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ನಟನಿಗೆ ಭದ್ರತೆ ಹೆಚ್ಚಿಸಿದ್ದಾರೆ.
07:45 AM (IST) Aug 12
ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಉದ್ದೇಶದಿಂದ ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರೊಂದಿಗೂ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.
07:45 AM (IST) Aug 12
ಪಹಲ್ಗಾಂ ದಾಳಿಯ ಮೂಲಕ ಭಾರತದ ಆಕ್ರೋಶಕ್ಕೆ ತುತ್ತಾಗಿದ್ದ ಪಾಕಿಸ್ತಾನ ಇದೀಗ ಮತ್ತೆ ಭಾರತದ ವಿರುದ್ಧ ರಾಜತಾಂತ್ರಿಕ ಸಮರ ಆರಂಭಿಸಿದೆ.