ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಬರೋಬ್ಬರಿ 36 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದ್ದು, ಪುಟ್ಟ ಮಗನ ಎದುರೇ ದುರಂತ ನಡೆದಿದೆ. ತಾಯಿಗೆ ಅತ್ಯಂತ ಕ್ರೂರವಾಗಿ ತಂದೆ ಹಲ್ಲೆ ಮಾಡಿದ್ದಾರೆ, ತಾಯಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ ಎಂದು ಕಣ್ಣೀರಿಡುತ್ತಾ, ಭಯದಿಂದಲೇ ಘಟನೆ ವಿವರಿಸಿದ್ದಾನೆ. ಈ ಪ್ರಕರಣ ಸಂಬಂಧ ಪತಿ ಅರೆಸ್ಟ್ ಆಗಿದ್ದರೆ, ಪತಿಯ ತಂದೆ, ಸಹೋದರ ನಾಪತ್ತೆಯಾಗಿದ್ದಾರೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಲೈವ್ ಅಪ್‌ಡೇಟ್ ಇಲ್ಲಿದೆ.

11:41 PM (IST) Aug 24
ಬಿಹಾರದಲ್ಲಿ ಪ್ರವಾಸ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ರಾಹುಲ್ ಗಾಂಧಿಯವರ ಭದ್ರತೆಯನ್ನು ಭೇದಿಸಿ ಅಪ್ಪಿಕೊಂಡ ಘಟನೆ ನಡೆದಿದೆ.
10:56 PM (IST) Aug 24
10:53 PM (IST) Aug 24
ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಪತಿ ವಿಪಿನ್ ಭಾಟಿ ಎನ್‌ಕೌಂಟರ್ ನಂತರ, ಆತನ ತಾಯಿ ದಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನೆದುರೇ ನಡೆದ ಈ ಭೀಕರ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
09:36 PM (IST) Aug 24
ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಕೂದಲು ಹಿಡಿದು ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
06:59 PM (IST) Aug 24
ಚೀನೀ ಕ್ರಿಮಿನಲ್ ಗ್ಯಾಂಗ್‌ಗಳು ಇಂತಹ ಟೆಲಿಕಾಂ ವಂಚನೆಗಳ ಹಿಂದೆ ಇವೆ ಎಂದು ವರದಿಗಳು ಹೇಳುತ್ತವೆ.
06:23 PM (IST) Aug 24
ಶಾಪಿಂಗ್ ಮಾಲ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಿಸುತ್ತಿದ್ದೆ ಯುವತಿಗೆ ಚೇಳು ಕಚ್ಚಿದ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
05:29 PM (IST) Aug 24
ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ ವಿಪಿನ್ ಭಾಟಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.
04:36 PM (IST) Aug 24
WhatsAppಗೆ ಯಾರಾದರೂ ಯಾವುದೇ ರೀತಿಯ ಇನ್ವಿಟೇಷನ್ ಕಳುಹಿಸಿದರೆ ಓಪನ್ ಮಾಡುವ ಮುನ್ನ ಇರಲಿ ಎಚ್ಚರ. ನಿಮ್ಮ ಬಳಿ ನಂಬರ್ ಸೇವ್ ಆಗದೇ ಇದ್ದರೆ ಮೈಯೆಲ್ಲಾ ಕಣ್ಣಾಗಿರಲಿ. ಇಲ್ಲದಿದ್ರೆ ಲಕ್ಷ ಲಕ್ಷ ಕಳಕೊಳ್ತೀರಾ! ಆಗಿದ್ದೇನು ನೋಡಿ...
04:09 PM (IST) Aug 24
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳ ಜೊತೆ ರೈಲ್ವೆ ಪೊಲೀಸ್ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.
03:05 PM (IST) Aug 24
ಕೆ-ಡ್ರಾಮಾ 'ಟು ದಿ ಮೂನ್' ಟೀಸರ್‌ನಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿಯನ್ನು ಅವಹೇಳನ ಮಾಡಿರುವ ಆರೋಪ ಕೇಳಿಬಂದಿದ್ದು, ವ್ಯಾಪಕ ಟೀಕೆಗಳ ನಂತರ ಪ್ರಸಾರಕರು ಕ್ಷಮೆ ಯಾಚಿಸಿದ್ದಾರೆ.
02:57 PM (IST) Aug 24
01:38 PM (IST) Aug 24
ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ. ಇವರ ಶ್ರೀಮಂತಿಕೆಗೆ ಕಾರಣಾಗಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
12:43 PM (IST) Aug 24
07:31 AM (IST) Aug 24
ಪತಿ ಹಾಗೂ ಪತಿಯ ಪೋಷಕರು ನಿಕ್ಕಿ ಮೇಲೆ ಹಲ್ಲೆ ಮಾಡಿದ್ದಾರೆ. 36 ಲಕ್ಷ ರೂಪಾಯಿ ತಂದರೆ ಮಾತ್ರ ಮನೆಗೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಬದುಕನ್ನೇ ಅಂತ್ಯಗೊಳಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.