ಲಖನೌ: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಕೂಟದ ಪಕ್ಷಗಳಿಗೆ ಭಾರೀ ಪರಾಭವ ಉಂಟಾದ ಬೆನ್ನಲ್ಲೇ, ಚುನಾವಣಾ ರಣನೀತಿ ಸಂಸ್ಥೆ ಐ-ಪ್ಯಾಕ್ ಜೊತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸಂಬಂಧ ಕಡಿದುಕೊಂಡಿದೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸ್ಥಾಪಿಸಿದ್ದ ಹಾಗೂ ಈಗ ವಿನೇಶ್ ಚಂದೇಲ್ ಉಸ್ತುವಾರಿಯಲ್ಲಿದ್ದ ಐ-ಪ್ಯಾಕ್, ಎಸ್‌ಪಿ ಜತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಲಹೆ ನೀಡುವ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೂ ಮುನ್ನ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ರಣನೀತಿ ಹೆಣೆದಿತ್ತು. ಆದರೆ ಅದರ ರಣತಂತ್ರ ವಿಫಲವಾಗಿದೆ. ಆದ ಕಾರಣ ಯಾದವ್ ಈ ನಿರ್ಧಾರ ಘೋಷಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ‘ಶೋಟೈಂ’ ಎಂಬ ಸಂಸ್ಥೆ ಜತೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಬಂಗಾಳದಲ್ಲಿ ನಡೆದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐಪ್ಯಾಕ್ ಸ್ಥಾಪಕರಲ್ಲಿ ಒಬ್ಬರಾದ ವಿನೇಶ್ ಚಂದೇಲ್ ಬಂಧನವಾಗಿತ್ತು.
08:10 PM (IST) May 07
ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತದ ಕೊರತೆ ಇದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಇಲ್ಲದೆ ವಿಜಯ್ ಹೇಗೆ ಸಿಎಂ ಆಗ್ತಾರೆ ಎಂಬ ಚರ್ಚೆ ಜೋರಾಗಿದೆ.
07:45 PM (IST) May 07
ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
07:33 PM (IST) May 07
ರಿಯಾಲಿಟಿ ಶೋಗಳ ಲೋಕದಲ್ಲಿ 'ಬಿಗ್ ಬಾಸ್' ಅಂದ್ರೆ ಅದೊಂದು ಬಣ್ಣದ ಪ್ರಪಂಚ. ಇಲ್ಲಿ ಹೋದವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಕಳೆದುಹೋದ ಜನಪ್ರಿಯತೆಯನ್ನು ಮತ್ತೆ ಗಳಿಸುತ್ತಾರೆ ಎಂಬುದು ಜನರ ನಂಬಿಕೆ. ಆದರೆ, ಎಲ್ಲರಿಗೂ ಈ 'ಮನೆ' ಹೂವಿನ ಹಾಸಿಗೆಯಾಗಿರುವುದಿಲ್ಲ…
07:25 PM (IST) May 07
'ದೃಶ್ಯಂ 3' ಸಿನಿಮಾದಲ್ಲಿ ತಮಿಳು ನಟ ಅಜಿತ್ ಕುಮಾರ್ ಗೆಸ್ಟ್ ರೋಲ್ ಮಾಡ್ತಾರೆ ಅನ್ನೋ ಸುಳ್ಳು ಸುದ್ದಿಯೊಂದು ಹಬ್ಬಿದೆ. ಇದಕ್ಕೆ ನೆಟ್ಟಿಗರು ಕೊಟ್ಟಿರುವ ತಮಾಷೆಯ ಕಾಮೆಂಟ್‌ಗಳು ವೈರಲ್ ಆಗಿವೆ. ಮೇ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
07:15 PM (IST) May 07
ಟಿವಿಎಸ್ ಕಂಪನಿಯು ಹೊಸ 'ಆಯ್ಕ್ಯೂಬ್ ಎಸ್' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು 4.7 kWh ಸಾಮರ್ಥ್ಯದ ಬೃಹತ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 175 ಕಿ.ಮೀ ವರೆಗೆ ಸಂಚರಿಸುತ್ತದೆ.
06:57 PM (IST) May 07
06:41 PM (IST) May 07
ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರು 'ಕೆಡಿ' ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ.
06:36 PM (IST) May 07
05:28 PM (IST) May 07
ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಇದೀಗ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಮೇ 21 ರಂದು ತೆರೆಗೆ ಬರಲಿದೆ.
04:56 PM (IST) May 07
04:50 PM (IST) May 07
ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಯತ್ನವನ್ನು ವಿರೋಧಿಸಿದ್ದಕ್ಕೆ ಕೊಲೆಯಾದ ಪ್ರಾಣಿಪ್ರೇಮಿ ಸುನೀತಾ ಸಾವಿಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಕಂಬನಿ ಮಿಡಿದಿದ್ದಾರೆ. ಆರೋಪಿಯನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
04:35 PM (IST) May 07
ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
04:29 PM (IST) May 07
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ, ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 118 ಶಾಸಕರ ಸಹಿ ಇರುವ ಪತ್ರವನ್ನು ಕೇಳಿದ್ದಾರೆ. ಸದ್ಯ ಬಹುಮತಕ್ಕೆ 6 ಶಾಸಕರ ಕೊರತೆಯನ್ನು ವಿಜಯ್ ಎದುರಿಸುತ್ತಿದ್ದಾರೆ.
04:16 PM (IST) May 07
ನಟ ಕೃಷ್ಣಕುಮಾರ್ ಅವರ ಮಗಳು ಹಂಸಿಕಾ ಕೃಷ್ಣ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದಾಗಿ ಹಂಸಿಕಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಏನೂ ಕನ್ಫರ್ಮ್ ಆಗಿಲ್ಲ.
01:28 PM (IST) May 07
12:34 PM (IST) May 07
12:16 PM (IST) May 07
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೊಂದು 'ಯೋಜಿತ ಕೊಲೆ' ಎಂದು ಬಿಜೆಪಿ ಆರೋಪಿಸಿದೆ. ಮೃತನ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ.
10:53 AM (IST) May 07
ಐಟಿ ಸಿಟಿಯಲ್ಲಿ ಮಹಿಳೆಯರಿಗೆ ಭದ್ರತೆ ಇದೆಯೇ? ಈ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರವೇ ಸಿಗುತ್ತಿದೆ. ಸ್ವತಃ ಮಹಿಳಾ ಪೊಲೀಸ್ ಕಮಿಷನರ್‌ಗೇ ಕಿಡಿಗೇಡಿಗಳಿಂದ ಕಿರುಕುಳ ತಪ್ಪಿಲ್ಲ ಎಂದಾದರೆ, ಸಾಮಾನ್ಯ ಮಹಿಳೆಯರ ಪಾಡೇನು?
10:47 AM (IST) May 07
ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಜಯದ ನಂತರ ಬಿಜೆಪಿ ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಸಿದ್ಧತೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದು, ಮೇ 9 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
09:27 AM (IST) May 07
ಹಡಗೊಂದರಲ್ಲಿ 'ಹಂಟು ವೈರಸ್' ಪತ್ತೆಯಾಗಿದ್ದು, 8 ಜನರಿಗೆ ಸೋಂಕು ತಗುಲಿ ಮೂವರು ಮೃತಪಟ್ಟಿದ್ದಾರೆ. ಇಲಿಗಳಿಂದ ಹರಡುವ ಈ ವೈರಸ್ ತೀವ್ರ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ದು, ಸೋಂಕಿತರ ಸಂಪರ್ಕಿತರ ಮೇಲೆ ನಿಗಾ ಇರಿಸಿದೆ.
08:54 AM (IST) May 07
08:11 AM (IST) May 07