Published : Oct 02, 2025, 07:09 AM ISTUpdated : Oct 02, 2025, 11:06 PM IST

India Latest News Live: ರಾವಣ ಜೊತೆ ಉಮರ್ ಖಾಲಿದ್ ಫೋಟೋ ದಹನ, JNU ದುರ್ಗಾ ವಿಸರ್ಜನೆ ವೇಳೆ ಮಾರಾಮಾರಿ

ಸಾರಾಂಶ

ವಾಷಿಂಗ್ಟನ್: ಅಮೆರಿಕದಲ್ಲಿ ಕೇಂದ್ರ ಸರ್ಕಾರದ ಕಾರ್ಯಚಟುವಟಿಕೆಗಳ ಸ್ಥಗಿತ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಿ ವೆಚ್ಚಗಳಿಗಾಗಿ ಹಣಕಾಸು ಅನುಮೋದನೆ ಮಸೂದೆಯು ನಿನ್ನೆ ಮತ್ತೆ ಸೆನೆಟ್‌ನಲ್ಲಿ ವಿಫಲವಾದ ಕಾರಣ, ಲಕ್ಷಾಂತರ ಸರ್ಕಾರಿ ನೌಕರರು ಸಂಕಷ್ಟದಲ್ಲಿದ್ದಾರೆ. ಅವರನ್ನು ವಜಾಗೊಳಿಸುವ ಎಚ್ಚರಿಕೆಯನ್ನು ಶ್ವೇತಭವನ ಪುನರುಚ್ಚರಿಸಿದೆ. ಶಟ್‌ಡೌನ್ ದೀರ್ಘಕಾಲ ಮುಂದುವರಿಯುವ ಆತಂಕವಿದ್ದು, ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆಯಿದೆ. ಯುಎಸ್ ಆರ್ಥಿಕತೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹೊಸ ಆರ್ಥಿಕ ವರ್ಷಕ್ಕೆ ಹಣವನ್ನು ಅನುಮೋದಿಸುವ ಮಸೂದೆಯನ್ನು ಅಕ್ಟೋಬರ್ ಒಂದರೊಳಗೆ ಯುಎಸ್ ಕಾಂಗ್ರೆಸ್ ಅಂಗೀಕರಿಸುವುದು ಅಮೆರಿಕದ ವಾಡಿಕೆ. ಈ ಬಾರಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮೋಕ್ರಾಟ್‌ಗಳು ಸೆನೆಟ್‌ನಲ್ಲಿ ಒಮ್ಮತಕ್ಕೆ ಬರಲು ವಿಫಲರಾದರು. ಇದರಿಂದಾಗಿ ದೇಶವು ಶಟ್‌ಡೌನ್‌ಗೆ ಸಾಗಿದೆ.

JNU Delhi

11:06 PM (IST) Oct 02

ರಾವಣ ಜೊತೆ ಉಮರ್ ಖಾಲಿದ್ ಫೋಟೋ ದಹನ, JNU ದುರ್ಗಾ ವಿಸರ್ಜನೆ ವೇಳೆ ಮಾರಾಮಾರಿ

ರಾವಣ ಜೊತೆ ಉಮರ್ ಖಾಲಿದ್ ಫೋಟೋ ದಹನ, ಜೆನ್‌ಯುನಲ್ಲಿ ದುರ್ಗಾ ವಿಸರ್ಜನೆ ವೇಳೆ ಮಾರಾಮಾರಿ, ತುಕ್ಡೆ ತುಕ್ಡೆ ಗ್ಯಾಂಗ್ ಎಂದೇ ಗುರುತಿಸಿಕೊಂಡಿದ್ದ ಹಲವರ ಫೋಟೋವನ್ನು ರಾವಣ ಪ್ರತಿಕೃತಿ ಜೊತೆ ದಹನ ಮಾಡಿದ್ದೇ ಈ ಮಾರಾಮಾರಿಗೆ ಕಾರಣವಾಗಿದೆ.

 

Read Full Story

08:49 PM (IST) Oct 02

ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಟ್ವಿಸ್ಟ್‌ - ಮ್ಯಾನೇಜರ್, ಸಂಘಟಕನ ವಿರುದ್ಧ ಕೊಲೆ ಕೇಸ್

Jubin Gargs Death Investigation: ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಅವರ ಸಿಂಗಾಪುರದಲ್ಲಿನ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಕಾರ್ಯಕ್ರಮ ಸಂಘಟಕ ಶ್ಯಾಮಕಾನು ಮಹಾಂತ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲಾಗಿದೆ. 

Read Full Story

08:34 PM (IST) Oct 02

ಈತ ಅಜ್ಞಾತ ಕೋಟ್ಯಧಿಪತಿ, 2 ಕೋಟಿ ಆದಾಯವಿದ್ದರೂ ಜಾನಿಟರ್ ಆಗಿ ಕೆಲಸ!

Japanese Janitor With ₹2 Crore Income Still Cleans Toilets ಜಪಾನ್‌ನ ಟೋಕಿಯೊ ನಿವಾಸಿ 56 ವರ್ಷದ ಕೊಯಿಚಿ ಮತ್ಸುಬಾರ, ವಾರ್ಷಿಕ 2 ಕೋಟಿ ರೂ. ಆದಾಯವಿದ್ದರೂ ಅರೆಕಾಲಿಕ ಜಾನಿಟರ್ ಆಗಿ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. 

Read Full Story

08:16 PM (IST) Oct 02

ದೆಹಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿದ್ದ ದಸರಾ ಸಂಭ್ರಮಾಚರಣೆ ದಿಢೀರ್ ರದ್ದು

ದೆಹಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿದ್ದ ದಸರಾ ಸಂಭ್ರಮಾಚರಣೆ ದಿಢೀರ್ ರದ್ದು ಮಾಡಲಾಗಿದೆ. ಇದೇ ರಾವಣ ದಹನ ಆಚರಣೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ ಹಬ್ಬದ ಆಚರಣೆ ರದ್ದು ಮಾಡಲಾಗಿದೆ.

Read Full Story

08:06 PM (IST) Oct 02

ಐ ಲವ್ ಮುಹಮ್ಮದ್ ವಿವಾದ - ಬರೇಲಿಯಲ್ಲಿ 48 ಗಂಟೆ ಇಂಟರ್ನೆಟ್ ಬಂದ್, ಇಮ್ರಾನ್ ಮಸೂದ್ ಗೃಹಬಂಧನ

ಬರೇಲಿ ಇಂಟರ್ನೆಟ್ ಸ್ಥಗಿತ: ಉತ್ತರ ಪ್ರದೇಶದ ಬರೇಲಿಯಲ್ಲಿ ಸೆಪ್ಟೆಂಬರ್ 26 ರಂದು ನಡೆದ ಹಿಂಸಾಚಾರದ ನಂತರ ಉದ್ವಿಗ್ನತೆ ಮುಂದುವರೆದಿದೆ. ಇಲ್ಲಿ ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು 81 ಜನರನ್ನು ಬಂಧಿಸಿದ್ದಾರೆ.

Read Full Story

07:57 PM (IST) Oct 02

'ನಮ್ಮ ಪ್ರಧಾನಿ ನೀಡಿದ್ದ 25 ಲಕ್ಷ ರೂಪಾಯಿ ಚೆಕ್‌ ಬೌನ್ಸ್‌ ಆಗಿತ್ತು..' ಪಾಕ್‌ ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ

Saeed Ajmal: Pakistan PM ₹25 Lakh Check Bounced 2009 ರಲ್ಲಿ ಪಾಕಿಸ್ತಾನ ಪ್ರಧಾನಿ ಆ ವರ್ಷ ಟಿ20 ವಿಶ್ವಕಪ್ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನಿಗೆ 25 ಲಕ್ಷ ಪಿಕೆಆರ್ ಚೆಕ್ ನೀಡಿದರು ಆದರೆ ಚೆಕ್ ಬೌನ್ಸ್ ಆಗಿತ್ತು.

Read Full Story

07:23 PM (IST) Oct 02

"ಅಮ್ಮ ಅವರನ್ನ ಬಿಟ್ಬಿಡಿ" - ಕಣ್ಣೆದುರೇ ಅತ್ತೆಯ ಜುಟ್ಟು ಹಿಡಿದು ಸೊಸೆ ಹಲ್ಲೆ, ವಿಡಿಯೋ ಮಾಡಿದ ಮೊಮ್ಮಗ!

Son Records Mother Brutally Assaulting Grandmother ಪಂಜಾಬ್‌ನ ಗುರುದಾಸ್ಪುರದಲ್ಲಿ ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಗೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ದೃಶ್ಯವನ್ನು ಆಕೆಯ ಮಗನೇ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Read Full Story

07:05 PM (IST) Oct 02

LIC ಜಾಹೀರಾತಿನಿಂದಲೇ ಜೀವಕ್ಕೆ ಬಂತು ಆಪತ್ತು - ಸಾವಿನ ದವಡೆಯಿಂದ ಆಟೋ ಚಾಲಕ ಜಸ್ಟ್ ಮಿಸ್

ಭಾರತೀಯ ಜೀವ ವಿಮಾ ನಿಗಮದ (LIC) ಬೃಹತ್ ಜಾಹೀರಾತು ಬಿಲ್‌ಬೋರ್ಡ್ ಭಾರೀ ಮಳೆಗೆ ಕುಸಿದು ಆಟೋ ಮೇಲೆ ಬಿದ್ದಿದೆ. ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಜೀವ ಉಳಿಸುವ ವಿಮೆಯ ಜಾಹೀರಾತಿನಿಂದಲೇ ಜೀವಕ್ಕೆ ಆಪತ್ತು ಬಂದಿದ್ದಕ್ಕೆ ಅನೇಕರು ಅಚ್ಚರಿಪಟ್ಟಿದ್ದಾರೆ. 

Read Full Story

06:38 PM (IST) Oct 02

'ಶಾಲೆಯಲ್ಲಿ ಪೂಜೆ-ಶಾಖೆ ನಡೆಸುವಂತಿಲ್ಲ.' 39 ಆರೆಸ್ಸೆಸ್‌ ಕಾರ್ಯಕರ್ತರ ಬಂಧಿಸಿದ ತಮಿಳುನಾಡು ಸರ್ಕಾರ!

Police detained 39 RSS workers in Chennai ಚೆನ್ನೈನ ಪೋರೂರ್ ಬಳಿಯ ಸರ್ಕಾರಿ ಶಾಲೆಯೊಂದರಲ್ಲಿ ಅನುಮತಿಯಿಲ್ಲದೆ ಪೂಜೆ ಮತ್ತು ವಿಶೇಷ ಶಾಖೆ ತರಬೇತಿ ಆಯೋಜಿಸಿದ್ದಕ್ಕಾಗಿ 39 ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

Read Full Story

06:24 PM (IST) Oct 02

ಇನ್‌ಸ್ಟಾಗ್ರಾಂ ರಹಸ್ಯವಾಗಿ ನಿಮ್ಮ ಮಾತು ಆಲಿಸುತ್ತಾ? ಮುಖ್ಯಸ್ಥ ಆ್ಯಡಮ್ ಬಿಚ್ಚಿಟ್ಟ ಸೀಕ್ರೆಟ್

ಇನ್‌ಸ್ಟಾಗ್ರಾಂ ರಹಸ್ಯವಾಗಿ ನಿಮ್ಮ ಮಾತು ಆಲಿಸುತ್ತಾ? ಮುಖ್ಯಸ್ಥ ಆ್ಯಡಮ್ ಬಿಚ್ಚಿಟ್ಟ ಸೀಕ್ರೆಟ್, ನೀವು ಮಾತನಾಡಿದ ಬೆನ್ನಲ್ಲೇ, ಆಲೋಚಿಸಿದ ಬೆನ್ನಲ್ಲೇ ಅದಕ್ಕೆ ತಕ್ಕ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿದೆಯಾ? ಈ ಕುರಿತು ಆಡ್ಯಮ್ ಹೇಳುವುದೇನು?

Read Full Story

05:54 PM (IST) Oct 02

ಶ್ರೀಮಂತಿಕೆಯಲ್ಲಿ ನಂ.1 ಸ್ಥಾನಕ್ಕೇರಿದ Shahrukh Khan! ಯಾರನ್ನು ಹಿಂದಿಕ್ಕಿ ಎಷ್ಟು ಆಸ್ತಿ ಗಳಿಸಿದ್ರು ನೋಡಿ

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಇದೀಗ ₹12,490 ಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ನಟನಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ 'ಜವಾನ್' ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದ ಅವರ, ಗೌರಿ ಖಾನ್ ಜೊತೆಗಿನ ಆಸಕ್ತಿದಾಯಕ ಪ್ರೇಮಕಥೆಯ ವಿವರಗಳೂ ಇಲ್ಲಿವೆ.
Read Full Story

05:50 PM (IST) Oct 02

ಭಾರತದಲ್ಲಿ ರಾವಣನಿಗೆ ಇದೆ ದೇಗುಲ, ವರ್ಷದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ದರ್ಶನ

ಭಾರತದಲ್ಲಿ ರಾವಣನಿಗೆ ಇದೆ ದೇಗುಲ, ವರ್ಷದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ದರ್ಶನ ಸಿಗಲಿದೆ.ಭಾರತದೆಲ್ಲೆಡೆ ರಾವಣನ ಪ್ರತಿಕೃತಿ ದಹಿಸಿ ದಸರಾ ಹಬ್ಬ ಆಚರಿಸಲಾಗುತ್ತದೆ. ಆದರೆ ಇಲ್ಲಿ ರಾವಣನ ಪೂಜೆ ನಡೆಯುತ್ತದೆ. ಈ ದೇಗುಲ ಎಲ್ಲಿದೆ?

Read Full Story

04:34 PM (IST) Oct 02

ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆದಾರ್ ಪೂನಾವಾಲ

ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆಧಾರ್ ಪೂನಾವಾಲ, ಸೀರಮ್ ಸಂಸ್ಥೆಯ ಸಿಇಓ ಆಧಾರ್ ಪೂನಾವಾಲ ಆರ್‌ಸಿಬಿ ಫ್ರಾಂಚೈಸಿ ಖರೀದಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

Read Full Story

04:24 PM (IST) Oct 02

ಕೊಲಂಬಿಯಾದಲ್ಲಿ ನಿಂತು, ಪ್ರಸ್ತುತ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ವಿಪಕ್ಷ ನಾಯಕ ರಾಹುಲ್‌ ಗಾಂಧಿ!

Rahul Gandhi in Colombia ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಚೀನಾದಂತೆ ತನ್ನ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೇಶದ ದೊಡ್ಡ ಅಪಾಯ ಎಂದಿದ್ದಾರೆ.

Read Full Story

03:23 PM (IST) Oct 02

ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್ ಬಚ್ಚನ್-ಐಶ್ವರ್ಯ ರೈ, 4 ಕೋಟಿ ಪರಿಹಾರಕ್ಕೆ ಡಿಮ್ಯಾಂಡ್

ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್ ಬಚ್ಚನ್-ಐಶ್ವರ್ಯ ರೈ, 4 ಕೋಟಿ ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಈ ಬಾರಿ ಇಬ್ಬರು ಜೊತೆಯಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾರ ವಿರುದ್ದ ಕೋರ್ಟ್ ಮೆಟ್ಟಿಲೇರಿದೆ? ಏನಿದು ಪ್ರಕರಣ?

Read Full Story

01:39 PM (IST) Oct 02

ಸರ್‌ ಕ್ರೀಕ್‌ ಪ್ರದೇಶದಲ್ಲಿ ಪಾಕಿಸ್ತಾನ ದುಸ್ಸಾಹಸ ಮಾಡಿದರೆ ಇತಿಹಾಸ ಬದಲಾಗೋದು ಖಂಡಿತ ಎಂದ ರಾಜ್‌ನಾಥ್‌ ಸಿಂಗ್‌

Rajnath Singh Warns Pakistan on Sir Creek Dispute ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಗಡಿ ವಿವಾದವನ್ನು ಕೆರಳಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Read Full Story

01:11 PM (IST) Oct 02

ಖುಷಿ ಹೆಚ್ಚಿಸಿದ ದಸರಾ ಸಂಭ್ರಮ, ನಾಲ್ಕನೇ ದಿನದಲ್ಲಿ 1 ಸಾವಿರ ಕೋಟಿ ಮೌಲ್ಯದ ಲಿಕ್ಕರ್‌ ಮಾರಾಟ!

Dasara liquor sales: ದಸರಾ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಮದ್ಯ ಮಾರಾಟವು ದಾಖಲೆ ಮಟ್ಟ ತಲುಪಿದೆ. ಗಾಂಧಿ ಜಯಂತಿಯ ಕಾರಣದಿಂದಾಗಿ, ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಮುಂಚಿತವಾಗಿ ಮದ್ಯವನ್ನು ಸಂಗ್ರಹಿಸಿದ್ದಾರೆ.

Read Full Story

10:54 AM (IST) Oct 02

ವಿಜಯ ದಶಮಿ ಹಬ್ಬದ ಸಂಭ್ರಮ ಡಬಲ್ ಮಾಡಿದ ಚಿನ್ನದ ಬೆಲೆ; ನಾಗಾಲೋಟಕ್ಕೆ ಕೊನೆಗೂ ಬಿತ್ತು ಲಗಾಮು

Gold Price Drop: ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಕಡಿವಾಣ ಬಿದ್ದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ನೀಡುತ್ತದೆ. ಜೊತೆಗೆ, ಬೆಳ್ಳಿ ದರದಲ್ಲಿನ ಬದಲಾವಣೆಯ ಮಾಹಿತಿಯನ್ನೂ ಒಳಗೊಂಡಿದೆ.

Read Full Story

More Trending News