ದೆಹಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿದ್ದ ದಸರಾ ಸಂಭ್ರಮಾಚರಣೆ ದಿಢೀರ್ ರದ್ದು ಮಾಡಲಾಗಿದೆ. ಇದೇ ರಾವಣ ದಹನ ಆಚರಣೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ ಹಬ್ಬದ ಆಚರಣೆ ರದ್ದು ಮಾಡಲಾಗಿದೆ.
ನವದೆಹಲಿ (ಅ.02) ದೇಶಾದ್ಯಂತ ದಸರಾ ಆಚರಣೆ ಜೋರಾಗಿದೆ. ಮೈಸೂರಿನಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿ ಹೊತ್ತ ಅಂಬಾರಿ ದರ್ಶನ ಪಡೆದು ಭಕ್ತರು ಸಂಭ್ರಮಿಸಿದ್ದಾರೆ. ದೇಶದೆಲ್ಲೆಡೆ ದಸರಾ ಆಚರಣೆ ನಡೆಯುತ್ತಿದೆ. ಉತ್ತರ ಭಾರತದಲ್ಲಿ ವಿಜಯದಶಮಿಯ ಧ್ಯೋತಕವಾಗಿ ರಾವಣನ ಪ್ರತಿಕೃತಿ ದಹನ ಮಾಡಲಾಗುತ್ತದೆ. ಇಂದು ದೆಹಲಿಯಲ್ಲಿ ಹಲೆವೆಡೆ ದಸರಾ ಸಂಭ್ರಮಾಚರಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಬೇಕಿದ್ದ ದಸರಾ ಸಂಭ್ರಮಾಚರಣೆ ದಿಡೀರ್ ರದ್ದಾಗಿದೆ.
ಮೋದಿ, ಸೋನಿಯಾ ಗಾಂಧಿ ಹಾಜರಾಗಬೇಕಿದ್ದ ಹಬ್ಬ
ದೆಹಲಿಯಲ್ಲಿ ಆಯೋಜಿಸಿದ್ದ ದಸರಾ ಹಬ್ಬದ ಸಂಭ್ರಮ ರದ್ದಾಗಿದೆ. ಇದೇ ಸಂಭ್ರಮಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಬೇಕಿತ್ತು. ಇಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಈ ಸಂಭ್ರಮದಲ್ಲಿ ಪಾಲ್ಗೊಳ್ಲಬೇಕಿತ್ತು. ಆದರೆ ಸಂಭ್ರಮಾಚರಣೆ ರದ್ದು ಮಾಡಲಾಗಿದೆ.
ದೆಹಲಿಯಲ್ಲಿ ಭಾರಿ ಮಳೆಯಿಂದ ಸಂಭ್ರಮಾಚರಣೆ ರದ್ದು
ದೆಹಲಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ರಾವಣ ಪ್ರತಿಕೃತಿ ದಹನ ಸಂಭ್ರಮಾಚರಣೆ ರದ್ದು ಮಾಡಲಾಗಿದೆ. ಹಲವೆಡೆ ಆಯೋಜಿಸಿದ್ದ ದಸರಾ ಸಂಭ್ರಮಾಚರಣೆ ರದ್ದು ಮಾಡಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಬೇಕಿದ್ದ ದಸರಾ ಸಂಭ್ರಮಾಚರಣೆ ರದ್ದಾಗಿದೆ.
ಮುಖ್ಯ ಅತಿಥಿಯಾಗಿದ್ದ ಪ್ರಧಾನಿ ಮೋದಿ
ರಾವಣ ದಹನ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ,ಶ್ರೀರಾಮನ ಬಿಲ್ಲಿನಿಂದ ಬಾಣ ಬಿಡುತ್ತಿದ್ದಂತೆ ರಾವಣ ದಹನ ಆಗುವಂತೆ ಎಲ್ಲಾ ತಯಾರಿ ಮಾಡಲಾಗಿತ್ತು. ಆದರೆ ಮಳೆಯಿಂದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದೆ. ಕಳೆದೆರಡು ದಿನದಿಂದ ಹಲೆವೆಡೆ ಬಾರಿ ಮಳೆಯಾಗುತ್ತಿದೆ. ಇಷ್ಟೇ ಅಲ್ಲ ಭಾರತೀಯ ಹವಾಮಾನ ಇಲಾಖೆ ಭಾರಿ ಮಳೆ ಎಚ್ಚರಿಕೆ ನೀಡಿದೆ.
ಕೆಂಪು ಕೋಟೆ ಬಳಿ ಇರುವ ಪರೇಡ್ ಮೈದಾನದಲ್ಲಿ ಶ್ರೀ ಧಾರ್ಮಿಕ್ ಲೀಲಾ ಕಮಿಟಿ ಆಯೋಜಿಸಿದ್ದ ದಸರಾ ಹಬ್ಬದ ಸಂಭ್ರಮಾಚರಣೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಬೇಕಿತ್ತು. ಇತ್ತ ಪಿತಾಂಪುರದಲ್ಲಿ ಆಯೋಜಿಸಿದ್ದ ದಸರಾ ಹಬ್ಬದ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಬೇಕಿತ್ತು. ಆದರೆ ಎಲ್ಲಾ ಸಂಭ್ರಮಾಚರಣೆ ಮಳೆಯಿಂದ ರದ್ದಾಗಿದೆ.
ದೆಹಲಿಯಲ್ಲಿ ಸಂಜೆಯಿಂದ ಮಳೆ
ದೆಹೆಲಿಯಲ್ಲಿ ಇಂದು ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿದೆ. ದೆಹಲಿಯ ಹಲೆವೆಡೆ ಆರೇಂಜ್ ಹಾಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
