LIVE NOW
Published : Dec 21, 2025, 07:07 AM ISTUpdated : Dec 21, 2025, 11:57 AM IST

India Latest News Live: ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು

ಸಾರಾಂಶ

 

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೂತನವಾಗಿ ನೇಮಕವಾಗಿದ್ದ ಮಹಿಳಾ ವೈದ್ಯೆ ಡಾ। ನುಸ್ರತ್‌ರ ಹಿಜಾಬ್‌ ಎಳೆದಿದ್ದರು. ಅಂದಿನಿಮದ ತೀವ್ರ ಮಾನಸಿಕ ಒತ್ತಡದಲ್ಲಿ ಸಿಲುಕಿರುವ ನುಸ್ರತ್‌, ಕರ್ತವ್ಯಕ್ಕೆ ಹಾಜರಾಗಲು ಕೊನೆಯ ದಿನವಾಗಿದ್ದ ಶನಿವಾರ ಡ್ಯೂಟಿಗೆ ಗೈರಾಗಿದ್ದಾರೆ. ಈ ನಡುವೆ ನುಸ್ರತ್‌ಗೆ ಜಾರ್ಖಂಡ್ ಸರ್ಕಾರ ಆಫರ್‌ ನೀಡಿದೆ. ‘ನಮ್ಮಲ್ಲಿ ನುಸ್ರತ್‌ಗೆ 3 ಲಕ್ಷ ರು. ಮಾಸಿಕ ಸಂಬಳ, ಸರ್ಕಾರಿ ಫ್ಲಾಟ್ ಮತ್ತು ಅಪೇಕ್ಷಿತ ಹುದ್ದೆಯೊಂದಿಗೆ ಕೆಲಸ ನೀಡುತ್ತೇವೆ’ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಹೇಳಿದ್ದಾರೆ.

 

11:57 AM (IST) Dec 21

ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು

ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ 17 ವರ್ಷದ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ಸ್ವಂತ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಪೋಷಕರಿಗೆ ನಿದ್ರೆ ಮಾತ್ರೆ ನೀಡಿ, ಅವರು ಗಾಢ ನಿದ್ರೆಗೆ ಜಾರಿದ ನಂತರ, ಈ ಕೃತ್ಯವೆಸಗಲಾಗಿದೆ.

Read Full Story

10:59 AM (IST) Dec 21

ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್ - ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?

ವಿಶ್ವಕಪ್ ತಂಡದಿಂದ ಉಪನಾಯಕ ಶುಭಮನ್ ಗಿಲ್ ಅವರನ್ನು ಅನಿರೀಕ್ಷಿತವಾಗಿ ಕೈಬಿಡಲಾಗಿದೆ. ಪವರ್‌ಪ್ಲೇನಲ್ಲಿನ ಕಳಪೆ ಸ್ಟ್ರೈಕ್ ರೇಟ್, ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮಾ ಜೋಡಿಗೆ ಆದ್ಯತೆ, ಮತ್ತು ತಂಡದ ಸಂಯೋಜನೆಯನ್ನು ಸಮತೋಲನಗೊಳಿಸುವ ನಿರ್ಧಾರವೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
Read Full Story

10:33 AM (IST) Dec 21

ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು

ಆ್ಯಶಸ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 82 ರನ್‌ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ, ಸರಣಿ ಕೈವಶ ಮಾಡಿಕೊಂಡು ಕಿರೀಟವನ್ನು ಉಳಿಸಿಕೊಂಡಿದೆ. 435 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಅಂತಿಮ ದಿನ ಹೋರಾಟ ನಡೆಸಿದರೂ, ಆಸೀಸ್ ಬೌಲರ್‌ಗಳ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು.

Read Full Story

09:19 AM (IST) Dec 21

ಅಂಡರ್-19 ಏಷ್ಯಾಕಪ್‌ - ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!

ದುಬೈ: 12ನೇ ಆವೃತ್ತಿಯ ಅಂಡರ್‌-19 ಏಷ್ಯಾಕಪ್‌ ಫೈನಲ್‌ ಭಾನುವಾರ ನಡೆಯಲಿದ್ದು, ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ

 

Read Full Story

More Trending News