Published : Aug 18, 2025, 07:10 AM ISTUpdated : Aug 18, 2025, 09:20 PM IST

India Latest News Live: ರಜನಿಕಾಂತ್ ಕೂಲಿ ಸಿನಿಮಾ 4 ದಿನದಲ್ಲಿ ಗಳಿಸಿದ್ದೆಷ್ಟು? ಅಧಿಕೃತ ಮಾಹಿತಿ ಹಂಚಿಕೊಂಡ ಸನ್ ಪಿಕ್ಚರ್ಸ್!

ಸಾರಾಂಶ

ನವದೆಹಲಿ: 1947ರಿಂದಲೂ ಬ್ರಿಟಿಷ್ ಕಾಲದ ಕಟ್ಟಡದಲ್ಲಿದ್ದ ಪ್ರಧಾನಿ ಕಚೇರಿ (ಪಿಎಂಒ) 78 ವರ್ಷಗಳ ನಂತರ ಮೊದಲ ಬಾರಿ ತನ್ನ ವಿಳಾಸ ಬದಲಿಸಲಿದೆ. ಪ್ರಸ್ತುತ ಸೌತ್ ಬ್ಲಾಕ್‌ನಲ್ಲಿರುವ ಪಿಎಂಒ ಮುಂದಿನ ತಿಂಗಳು ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣವಾದ ಕಾರ್ಯಾಂಗ ಕಟ್ಟಡಗಳ ವಲಯಕ್ಕೆ ಸ್ಥಳಾಂತರಗೊಳ್ಳಲಿದೆ.ಈಗಾಗಲೇ ವಲಯದಲ್ಲಿ ಪಿಎಂಒ ಕಚೇರಿ ಮತ್ತು ಇತರ ಉನ್ನತ ಸರ್ಕಾರಿ ಕಚೇರಿಗಳಿಗೆ ಕಟ್ಟಡ ಸಿದ್ಧವಾಗಿವೆ. ಇಲ್ಲಿ ಈಗಾಗಲೇ ಸಂಪುಟ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಕಟ್ಟಡಗಳು ಇವೆ. ನೂತನ ಪಿಎಂಒ, ಪ್ರಧಾನಿ ನಿವಾಸಕ್ಕೂ ಸನಿಹವಿದೆ.

rajinikanth coolie ott release see when and where to watch movie

09:20 PM (IST) Aug 18

ರಜನಿಕಾಂತ್ ಕೂಲಿ ಸಿನಿಮಾ 4 ದಿನದಲ್ಲಿ ಗಳಿಸಿದ್ದೆಷ್ಟು? ಅಧಿಕೃತ ಮಾಹಿತಿ ಹಂಚಿಕೊಂಡ ಸನ್ ಪಿಕ್ಚರ್ಸ್!

ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಬಿಡುಗಡೆಯ ನಂತರ ಮೊದಲ ವಾರಾಂತ್ಯದಲ್ಲಿ ₹404 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ತಮಿಳು ಸಿನಿಮಾ ಇತಿಹಾಸದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಕೂಲಿ ತನ್ನ ಹೆಸರಿಗೆ ಬರೆದುಕೊಂಡಿದೆ.
Read Full Story

08:45 PM (IST) Aug 18

ಎಸ್‌ಬಿಐ ಗೃಹ ಸಾಲದ ಬಡ್ಡಿ ದರ ಏರಿಕೆ - ನಿಮ್ಮ ಮೇಲಾಗುವ ಪರಿಣಾಮವೇನು? ಇತರೆ ಬ್ಯಾಂಕ್‌ಗಳಲ್ಲಿ ಎಷ್ಟಿದೆ?

ಎಸ್‌ಬಿಐ ಹೊಸ ಗೃಹ ಸಾಲಗಳ ಬಡ್ಡಿ ದರವನ್ನು 0.25% ಹೆಚ್ಚಿಸಿ 7.50% ರಿಂದ 8.70%ಕ್ಕೆ ನಿಗದಿಪಡಿಸಿದೆ. ಆರ್‌ಬಿಐ ದರ ಕಡಿತ ಸೂಚನೆ ನೀಡದ ಹಿನ್ನೆಲೆಯಲ್ಲಿ ಈ ಹೆಚ್ಚಳವಾಗಿದೆ. ಇತರ ಬ್ಯಾಂಕ್‌ಗಳಾದ ಬಿಒಬಿ, ಪಿಎನ್‌ಬಿ, ಕೆನರಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಕೊಟಕ್ ಮಹೀಂದ್ರಾ ಕೂಡಾ ವಿಭಿನ್ನ ದರ ಹೊಂದಿವೆ.

Read Full Story

08:06 PM (IST) Aug 18

ಭಾರತದಲ್ಲಿ ಒರಾಕಲ್‌ನ 3 ಸಾವಿರ ಉದ್ಯೋಗಿಗಳ ಕೆಲಸ ಕಸಿದ AI

ಒರಾಕಲ್ ತನ್ನ ಭಾರತೀಯ ತಂಡದ ಶೇ.10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಅಮೆರಿಕ ಮತ್ತು ಕೆನಡಾದಲ್ಲೂ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗಿದ್ದು, ಹೆಚ್ಚಿನ ಸಾಫ್ಟ್‌ವೇರ್ ಡೆವಲಪರ್‌ಗಳು ಪ್ರಭಾವಿತರಾಗಿದ್ದಾರೆ. ಕೃತಕ ಬುದ್ಧಿಮತ್ತೆ ಅಳವಡಿಕೆ ಈ ವಜಾಗೊಳಿಸುವಿಕೆಗೆ ಕಾರಣ ಎನ್ನಲಾಗಿದೆ.
Read Full Story

07:57 PM (IST) Aug 18

ಹಾವು ಮೈಮೇಲೆ ಬಿದ್ದಿತ್ತು ಆದ್ರೆ ಕಚ್ಚಿರಲಿಲ್ಲ - ಯುವಕನ ಭ್ರಮೆಗೆ ಹಾವಿನ ಜೀವವೇ ಹೋಯ್ತು

ಹಾವು ಎಂದರೆ ಹೌಹಾರೋರೆ ಜಾಸ್ತಿ. ಹಾವಿಗೆ ಭಯಪಡದ ಜನರಿಲ್ಲ, ಅದೇ ರೀತಿ ಇಲ್ಲೊಬ್ಬನಿಗೆ ಹಾವಿನ ಬಗ್ಗೆ ಇದ್ದ ಭಯವೇ ಭ್ರಮೆಯಾಗಿ ಕಾಡಿದೆ. ಹಾಗಿದ್ರೆ ಆಗಿದ್ದೇನು ಇಲ್ಲಿದೆ ನೋಡಿ ಸ್ಟೋರಿ…

Read Full Story

07:37 PM (IST) Aug 18

ಬೆಂಗಳೂರಿನ ಕಚೇರಿಯನ್ನು 1010 ಕೋಟಿಗೆ ಲೀಸ್‌ಗೆ ಪಡೆದುಕೊಂಡ ಆಪಲ್‌ ಕಂಪನಿ!

ಆಪಲ್ ಬೆಂಗಳೂರಿನಲ್ಲಿ 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಗುತ್ತಿಗೆಗೆ ಪಡೆದುಕೊಂಡಿದೆ. ಈ ಬೃಹತ್ ವಿಸ್ತರಣೆಯು ಭಾರತದಲ್ಲಿ ಕಂಪನಿಯ ಬೆಳವಣಿಗೆಯ ಯೋಜನೆಗಳ ಭಾಗವಾಗಿದೆ. ಹೊಸ ಕಚೇರಿಯು ಎಂಜಿನಿಯರಿಂಗ್, ಹಾರ್ಡ್‌ವೇರ್ ವಿನ್ಯಾಸ ಮತ್ತು ಇತರ ಕಾರ್ಯಗಳಿಗೆ ನೆಲೆಯಾಗಲಿದೆ.
Read Full Story

06:15 PM (IST) Aug 18

ರಷ್ಯಾದ ತೈಲಕ್ಕೆ ಭಾರೀ ತೆರಿಗೆ, ಟ್ರಂಪ್‌ ಭೇಟಿಯ ಮಾಹಿತಿಯನ್ನು ಮೋದಿಗೆ ತಿಳಿಸಿದ ಪುಟಿನ್‌

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

 

Read Full Story

05:54 PM (IST) Aug 18

ಭಾರತೀಯನ ಮದುವೆಯಾದ ಬ್ರೆಜಿಲ್ ಬೆಡಗಿ - ಲವ್‌ ಸ್ಟೋರಿ ಭಾರಿ ವೈರಲ್

ಮದುವೆ ಸ್ವರ್ಗದಲ್ಲೇ ನಿಗದಿಯಾಗಿರುತ್ತದೆ ಎಂಬ ಮಾತಿದೆ. ಅದರಂತೆ ಇಲ್ಲೊಂದು ಕಡೆ ಬ್ರೆಜಿಲ್ ಬೆಡಗಿಯೊಬ್ಬಳು ಭಾರತೀಯನ ಮದುವೆಯಾಗಿದ್ದು, ಈ ಜೋಡಿಯ ಪ್ರೇಮಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Read Full Story

04:15 PM (IST) Aug 18

ರಜೆ ಮುಗಿಸಿ ಹೊರಟ ಯೋಧನ ಮೇಲೆ ಟೋಲ್ ಸಿಬ್ಬಂದಿಯಿಂದ ಹಲ್ಲೆ - ಟೋಲ್ ಪ್ಲಾಜಾ ಧ್ವಂಸ ಮಾಡಿದ ಸ್ಥಳೀಯರು

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧರೊಬ್ಬರು ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್‌ಗೇಟ್‌ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.

Read Full Story

02:59 PM (IST) Aug 18

ಸ್ಟ್ಯಾಂಡ್ ಇದರೂ ಕೊಡದೇ ನಿರ್ಲಕ್ಷ್ಯ - ಮೊಮ್ಮಗನಿಗಾಗಿ ಗ್ಲುಕೋಸ್ ಬಾಟಲ್ ಹಿಡಿದು ಅರ್ಧಗಂಟೆ ನಿಂತ ವೃದ್ಧೆ

ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ಯಾಂಡ್ ಇದ್ದರೂ ಸಿಬ್ಬಂದಿ ತಕ್ಷಣವೇ ಕೊಡದೇ ನಿರ್ಲಕ್ಷ್ಯ ವಹಿಸಿದ ಕಾರಣ 72 ವರ್ಷದ ವೃದ್ಧೆ ಗ್ಲುಕೋಸ್ ಬಾಟಲಿ ಹಿಡಿದು ನಿಂತ ಘಟನೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Read Full Story

01:46 PM (IST) Aug 18

ಅಲಾಸ್ಕ ಭೇಟಿ ಬೆನ್ನಲ್ಲಿಯೇ ಮತ್ತೆ ಮುನ್ನಲೆಗೆ ಬಂದ ವ್ಲಾಡಿಮಿರ್‌ ಪುಟಿನ್‌ 'POOP' ಪ್ರೊಟೋಕಾಲ್‌!

ರಷ್ಯಾ ಅಧ್ಯಕ್ಷ ಪುಟಿನ್‌ ವಿದೇಶ ಪ್ರವಾಸದ ವೇಳೆ ಅವರ ಭದ್ರತಾ ಸಿಬ್ಬಂದಿ ಮಲ-ಮೂತ್ರ ಸಂಗ್ರಹಿಸಿ ರಷ್ಯಾಗೆ ಕೊಂಡೊಯ್ಯುತ್ತಾರೆ ಎಂಬ ಸುದ್ದಿ ಮತ್ತೆ ಹರಿದಾಡುತ್ತಿದೆ. ಗುಪ್ತಚರ ಸಂಸ್ಥೆಗಳು ಪುಟಿನ್‌ರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. 

Read Full Story

01:46 PM (IST) Aug 18

ಭರದಿಂದ ಸೇತುವೆ ಕಟ್ಟುತ್ತಿರುವ ಸೇನೆ - ಯೋಧರಿಂದ ಮೇಘಸ್ಫೋಟದಿಂದ ದಿಕ್ಕೆಟ್ಟವರ ರಕ್ಷಣೆ - ಯಮುನೆಯಲ್ಲಿ ಪ್ರವಾಹ ಭೀತಿ

ದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಮ್ಮು ಕಾಶ್ಮೀರದಲ್ಲಿ ಭೂಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ. ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮತ್ತೊಂದೆಡೆ ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Read Full Story

12:25 PM (IST) Aug 18

ಕೃಷ್ಣವೇಷಧಾರಿ ಮಗನ ದೃಷ್ಟಿ ತೆಗೆದ ಮುಸ್ಲಿಂ ತಾಯಿ, ಮಗಳಿಗೆ ರಾಧೆ ವೇಷ ಹಾಕಿದ ಮತ್ತೊಬ್ಬ ಮುಸ್ಲಿಂ ಅಮ್ಮ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಪುತ್ರನಿಗೆ ಕೃಷ್ಣನ ವೇಷ ತೊಡಿಸಿ, ದೃಷ್ಟಿ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಧಾರ್ಮಿಕ ಸಾಮರಸ್ಯವನ್ನು ಸಾರುತ್ತಿದೆ.
Read Full Story

11:24 AM (IST) Aug 18

ಪತ್ನಿ ನೀಡಿದ ವಿಚಿತ್ರ ಚಿಕಿತ್ಸೆಯಿಂದ ಮತ್ತೆ ನಡೆದಾಡಲು ಶುರು ಮಾಡಿದ ಪಾರ್ಶ್ವವಾಯು ಪೀಡಿತ ಪತಿ

ನಂಬಿಕೆಯನ್ನು ಮೀರಿದ ದೈವವಿಲ್ಲ ಎಂಬ ಮಾತಿದೆ. ಆ ಮಾತು ನಿಜವಾಗಿದೆ. ವೈದ್ಯರು ಕೈ ಚೆಲ್ಲಿದರೂ ಪತ್ನಿ ಮಾಡಿದ ಆರೈಕೆ ಫಲಕೊಟ್ಟಿದ್ದು, ಹಾಸಿಗೆ ಹಿಡಿದಿದ್ದ ಗಂಡ ಎದ್ದು ಓಡಾಡುವಂತಾಗಿದೆ. ಆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..

Read Full Story

10:25 AM (IST) Aug 18

ಮೊದಲ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದು ಬ್ರಿಟಿಷ್ ಡಾಕ್ಟರ್ ಅಲ್ಲ, ಭಾರತೀಯ ಕುಂಬಾರ - ಇಲ್ಲಿದೆ ನೋಡಿ ಸ್ಟೋರಿ

ಪ್ಲಾಸ್ಟಿಕ್ ಸರ್ಜರಿ ಆಧುನಿಕ ವೈದ್ಯಲೋಕದ ಕರಾಮತ್ತು ಎಂದೇ ನೀವು ಇಷ್ಟು ದಿನ ಭಾವಿಸಿದ್ದಿರಬಹುದು ಆದರೆ ಅದು ನಿಜನಾ? ಖಂಡಿತ ಅಲ್ಲ, 1793ರಲ್ಲೇ ಪುಣೆಯ ವೈದ್ಯನಲ್ಲ, ಮಡಿಕೆ ಮಾಡುವ ಕುಂಬಾರನೋರ್ವ ಇಂದು ಬಹಳಷ್ಟು ಫೇಮಸ್ ಆಗಿರುವ ಪ್ಲಾಸ್ಟಿಕ್ ಸರ್ಜರಿಯನ್ನು ಓರ್ವನ ಮೂಗಿಗೆ ಮಾಡಿ ಯಶಸ್ವಿಯಾಗಿದ್ದ.

Read Full Story

More Trending News