ಕ್ಯಾಲಿಫೋರ್ನಿಯಾ: ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ವೇತನ ಶಿಬಿರ ಹಮ್ಮಿ ಕೊಳ್ಳಲಾಗಿದೆ. ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ. ಗಗನಯಾನದಿಂದ ಬಂದ ನಂತರ ಯಾತ್ರಿಗಳು ತಲೆ ಸುತ್ತುವಿಕೆ, ವಾಕರಿಕೆ, ಅಸ್ಥಿರ ನಡಿಗೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುವ ಅಪಾಯವಿರುತ್ತದೆ. ಗಗನಯಾನಿಗಳ ಸ್ನಾಯುಗಳಲ್ಲಿ ಜೀವಕೋಶಗಳ ನಷ್ಟವಾಗುತ್ತದೆ. ಅಂತೆಯೇ, ಬೆನ್ನು, ಸೊಂಟ, ತೊಡೆ ಎಲುಬುಗಳ ಶೇ.1ರಷ್ಟು ಸಾಂದ್ರತೆ ಕಳೆದುಕೊಳ್ಳುತ್ತಾರೆ. ಗುರುತ್ವಾಕರ್ಷಣೆ ಕೊರತೆಯಿಂದ ದೇಹದ ದ್ರವಗಳು ಗಗನಯಾತ್ರಿಗಳ ತಲೆ ಭಾಗದಲ್ಲಿ ಶೇಖರಣೆಯಾಗಿ ಅದು ಊದಿ ಕೊಂಡಿರುವ ಸಾಧ್ಯತೆ ಇರುತ್ತದೆ. ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆಯಿಂದಾಗಿ ಕಾಲುಗಳು ಕೃಶ ಮತ್ತು ಬಲಹೀನವಾಗಿರುತ್ತವೆ. ಜೊತೆಗೆ, ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದು ವಾಗುತ್ತದೆ. ಪರಿಣಾಮವಾಗಿ ಭೂಮಿಗೆ ಮರಳುತ್ತಿದ್ದಂತೆ ಗಗನಯಾತ್ರಿಗಳು ನಡೆಯಲು
ಕಷ್ಟಪಡುವಂತಾಗುತ್ತದೆ. ಈ ಪುನಶ್ಚೇತನ ಶಿಬಿರ ಅವರಿಗೆ ಆರೈಕೆ ನೀಡಲಿದೆ.
11:07 PM (IST) Jul 16
ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ಪ್ರಧಾನಿ ನೆತನ್ಯಾಹು ಅವರ ಸಮ್ಮಿಶ್ರ ಸರ್ಕಾರಕ್ಕೆ ಆಘಾತ ಎದುರಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿದ್ದ ಪ್ರಮುಖ ಪಕ್ಷವೊಂದು ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ.
10:28 PM (IST) Jul 16
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭ್ರಷ್ಟರು ಎಂದು ಕರೆದ ರಾಹುಲ್ ಗಾಂಧಿ, ಅವರು ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಶರ್ಮಾ ಅವರು ಅಸ್ಸಾಂನ ಭೂಮಿಯನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದರು.
09:12 PM (IST) Jul 16
08:57 PM (IST) Jul 16
ಪರಿಗಣಿಸಲಾಗುತ್ತಿರುವ ಬದಲಾವಣೆಗಳನ್ನು ಜಾರಿಗೆ ತಂದರೆ, ಉದ್ಯೋಗಿಗಳು ತಮ್ಮ 30 ರ ಹರೆಯದಲ್ಲೂ ತಮ್ಮ ಸಂಪೂರ್ಣ ಇಪಿಎಫ್‌ಓ ನಿಧಿಯನ್ನು ಹಿಂಪಡೆಯಲು ಅವಕಾಶ ನೀಡಲಾಗುತ್ತದೆ.
07:54 PM (IST) Jul 16
30 ವಿಧದ ಅಪರೂಪದ ರಾಗಿ ತಳಿಗಳನ್ನು ರಕ್ಷಿಸಿ, ನೂರಾರು ಮಹಿಳೆಯರಿಗೆ ತರಬೇತಿ ನೀಡಿರುವ ಒಡಿಶಾದ ಬುಡಕಟ್ಟು ಮಹಿಳೆ ರೈಮತಿ ಘಿಯುರಿಯಾ ಅವರ ಸಾಹಸಗಾಥೆ ಇಲ್ಲಿದೆ.
07:37 PM (IST) Jul 16
ಅಮೆರಿಕದ ಹಾಲಿನ ಉತ್ಪನ್ನಗಳ ಆಮದು ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಮಾಂಸಾಹಾರಿ ಆಹಾರ ಸೇವಿಸುವ ಹಸುಗಳ ಹಾಲನ್ನು ಭಾರತ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
07:34 PM (IST) Jul 16
ಈ ಅಪಾರ್ಟ್ಮೆಂಟ್ ಶಿವ ಆಸ್ಥಾನ್ ಹೈಟ್ಸ್ ಪುನರಾಭಿವೃದ್ಧಿ ಯೋಜನೆಯಲ್ಲಿದೆ, ಇದನ್ನು ದಿವಂಗತ ಡೆವಲಪರ್ ಮತ್ತು ರಾಜಕಾರಣಿ ಬಾಬಾ ಸಿದ್ದಿಕ್ ನಿರ್ಮಿಸಿದ್ದರು.
07:07 PM (IST) Jul 16
ಕಡಿಮೆ ಬೆಲೆಯ ಭಾರತೀಯ ಚಾನೆಲ್‌ಗಳು ಮತ್ತು ಒಟಿಟಿ ಕಂಟೆಂಟ್‌ಗಳನ್ನು ನೀಡುವ ಐಪಿಟಿವಿಗಳು ವಿದೇಶದಲ್ಲಿರುವ ಭಾರತೀಯರನ್ನು ಸಮಸ್ಯೆಗೆ ಸಿಲುಕಿಸುತ್ತಿವೆ. ಕಾನೂನುಬಾಹಿರವಾಗಿ ಕಂಟೆಂಟ್ ಕದ್ದು ಮಾರಾಟ ಮಾಡುವ ಐಪಿಟಿವಿ ಮಾಫಿಯಾವನ್ನು ಪೊಲೀಸರು ಬೇಟೆಯಾಡುತ್ತಿದ್ದಾರೆ.
06:35 PM (IST) Jul 16
Weight Loss Treatment: ನಗರದ ಖಾಸಗಿ ಆಸ್ಪತ್ರೆಯಲ್ಲಿ ತೂಕ ಇಳಿಕೆ ಶಸ್ತ್ರಚಿಕಿತ್ಸೆ ವೇಳೆ ಬಿಜೆಪಿ ನಾಯಕನ ಸೋದರಿ ರಜನಿ ದೇವಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
05:55 PM (IST) Jul 16
05:49 PM (IST) Jul 16
ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದ ಸ್ಮರಿಕಾ ಚಂದ್ರಕರ್, ಐದು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ನಂತರ ಕೃಷಿಯತ್ತ ಮುಖ ಮಾಡಿದರು. ಈಗ ವಿವಿಧ ತರಕಾರಿಗಳನ್ನು ಬೆಳೆದು ವಾರ್ಷಿಕ 1.5 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.
05:04 PM (IST) Jul 16
ಆರೋಪಿಗಳಲ್ಲಿ ಒಬ್ಬ ಗಾಜಿಯಾಬಾದ್‌ನಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿ ಆಗಿದ್ದಾನೆ. ಹಲ್ಲೆ ನಡೆಸುವ ಎರಡು ದಿನಗಳ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿದೆ.
04:29 PM (IST) Jul 16
ಸೌದಿ ಅರೇಬಿಯಾ, ಯುಎಇ, ನೇಪಾಳ ಸೇರಿದಂತೆ ವಿವಿಧ ದೇಶಗಳ ಜೈಲುಗಳಲ್ಲಿ ಸಾವಿರಾರು ಭಾರತೀಯರು ಶಿಕ್ಷೆ (indians in foreign Jail) ಅನುಭವಿಸುತ್ತಿದ್ದಾರೆ. ಯಾವ ದೇಶದಲ್ಲಿ ಎಷ್ಟು ಮಂದಿ ಭಾರತೀಯರು ಜೈಲುವಾಸ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
04:07 PM (IST) Jul 16
Rs 500 notes: ಸೆಪ್ಟೆಂಬರ್ ನಿಂದ ₹500 ರದ್ದತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಬಗ್ಗೆ ಪಿಐಬಿ ಸ್ಪಷ್ಟನೆ ನೀಡಿದೆ.
03:26 PM (IST) Jul 16
ನಾಲ್ಕು ವರ್ಷದ ಬಾಲಕಿಯನ್ನು ಕೊಲೆ ಮಾಡಿ ಸಮುದ್ರಕ್ಕೆ ಎಸೆದ ಘಟನೆ ನಡೆದಿದೆ. ಮಲತಂದೆಯೇ ಕೊಲೆಗೈದಿದ್ದು, ಮಗು ತನ್ನನ್ನು 'ಅಪ್ಪಾ' ಎಂದು ಕರೆದಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
02:35 PM (IST) Jul 16
28 ವರ್ಷದ ಯುವ ಉದ್ಯಮಿಯೊಬ್ಬರು ಕೋಟಿ ಸಂಪಾದಿಸುತ್ತಿದ್ದರೂ ನೆಮ್ಮದಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆರೋಗ್ಯ ಹದಗೆಟ್ಟಿದೆ, ಆಯಾಸದಿಂದ ಬಳಲುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
02:29 PM (IST) Jul 16
Who is Kanthapuram AP Aboobacker Musliyar: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಿಸಲು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಯತ್ನಿಸುತ್ತಿದ್ದಾರೆ.
02:10 PM (IST) Jul 16
ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಅವರ ಮನೆಗೆ ಕಮಲ್ ಹಾಸನ್ ಭೇಟಿ ನೀಡಿ, ಅವರ ಜೊತೆ ತೆಗೆದ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
01:12 PM (IST) Jul 16
ಬಡ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ನಿಮಗೆ ಬರುತ್ತಿಲ್ವಾ? ಹಾಗಿದ್ದರೆ ಕೂಡಲೇ ಹೀಗೆ ಮಾಡಿ...
01:07 PM (IST) Jul 16
ಲಂಡನ್ ಹರಾಜಿನಲ್ಲಿ ಮಹಾತ್ಮ ಗಾಂಧೀಜಿಯವರ ಅಪರೂಪದ ಆಯಿಲ್ ಪೇಂಟಿಂಗ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಇದುವರೆಗಿನ ಅತ್ಯಧಿಕ ಬೆಲೆ ಇದಾಗಿದೆ.
12:40 PM (IST) Jul 16
ಕಾಲುವೆಗೆ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿದ ತಂದೆ ಬಂಧನ. ತಾಯಿ ಮುಂದೆಯೇ ಕೊಲೆ, ಗಂಡನ ಬೆದರಿಕೆಗೆ ಸುಮ್ಮನಿದ್ದ ಮಹಿಳೆ. ಒಂದು ತಿಂಗಳ ಬಳಿಕ ಸತ್ಯ ಬಯಲು.
11:54 AM (IST) Jul 16
ಸಣ್ಣ ವಿಮಾನವೊಂದನ್ನು ಕದ್ದು ಪೈಲಟ್ ಪರಾರಿಯಾಗಿದ್ದ. ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ ನಂತರ ಪೈಲಟ್‌ನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಹಲವು ವಿಮಾನಗಳ ಹಾರಾಟ ರದ್ದಾಗಿದೆ.
11:24 AM (IST) Jul 16
11:17 AM (IST) Jul 16
ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ಮುಂದೂಡಲಾಗಿದೆ. ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆದ ಮಧ್ಯಸ್ಥಿಕೆ ಚರ್ಚೆಗಳು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ
10:40 AM (IST) Jul 16
ಸಾಮಾಜಿಕ ಸೇವೆಯ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದ ಹೊಂಡಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
08:55 AM (IST) Jul 16
114 ವರ್ಷದ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಎನ್‌ಆರ್‌ಐ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಲಂಧರ್‌ನಲ್ಲಿ ನಡೆದ ಈ ಘಟನೆಯಲ್ಲಿ ಫೌಜಾ ಸಿಂಗ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.