MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಸೆಪ್ಟೆಂಬರ್‌ನಿಂದ ATMನಲ್ಲಿ 500 ರೂ, ನೋಟುಗಳು ಸಿಗಲ್ಲವಾ? RBI ನೀಡಿದ ಸ್ಪಷ್ಟನೆ ಏನು?

ಸೆಪ್ಟೆಂಬರ್‌ನಿಂದ ATMನಲ್ಲಿ 500 ರೂ, ನೋಟುಗಳು ಸಿಗಲ್ಲವಾ? RBI ನೀಡಿದ ಸ್ಪಷ್ಟನೆ ಏನು?

Rs 500 notes: ಸೆಪ್ಟೆಂಬರ್ ನಿಂದ ₹500 ರದ್ದತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಬಗ್ಗೆ ಪಿಐಬಿ ಸ್ಪಷ್ಟನೆ ನೀಡಿದೆ.

2 Min read
Mahmad Rafik
Published : Jul 16 2025, 04:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Social Media

ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಸೆಪ್ಟೆಂಬರ್ ನಿಂದ 500 ರೂಪಾಯಿ ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಬರೆಯಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30, 2025 ರ ನಂತರ ಎಟಿಎಂಗಳಲ್ಲಿ 500 ರೂ. ಮುಖಬೆಲೆ ನೋಟು ತುಂಬಿಸೋದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ ಎಂಬ ಮಾಹಿತಿಯನ್ನು ವೈರಲ್ ಪೋಸ್ಟ್ ಒಳಗೊಂಡಿದೆ.

26
Image Credit : google

ಈ ಪೋಸ್ಟ್ ಜೊತೆ ಇನ್ಮುಂದೆ ಎಟಿಎಂಗಳಲ್ಲಿ ಕೇವಲ 100 ರೂಪಾಯಿ ಮತ್ತು 200 ರೂಪಾಯಿ ಮುಖಬೆಲೆ ನೋಟುಗಳು ಸಿಗಲಿವೆ ಎಂಬ ಮಾಹಿತಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ವೇಗವಾಗಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.

Related Articles

Related image1
RBI Mandate: ATM ಬಳಕೆ ಮಾಡ್ತೀರಾ? ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ!
Related image2
UPI ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
36
Image Credit : social media

ಈ ಪೋಸ್ಟ್ ಸುಳ್ಳು!

ಸೆಪ್ಟೆಂಬರ್ 2025ರ ಅಂತ್ಯದ ವೇಳೆಗೆ ಎಟಿಎಂಗಳಿಂದ 500 ರೂಪಾಯಿ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್ ಮಾರುಟ್ಟೆಯಲ್ಲಿ ಹಲ್‌ಚಲ್ ಸೃಷ್ಟಿಸಿತ್ತು. ಈ ಪೋಸ್ಟ್ ಸುಳ್ಳು ಎಂದು ಸರ್ಕಾರ ಹೇಳಿದೆ.

46
Image Credit : our own

PIB ಫ್ಯಾಕ್ಟ್ ಚೆಕ್

500 ರೂ. ಮುಖಬೆಲೆ ಕುರಿತು ಹರಿದಾಡುತ್ತಿರುವ ಪೋಸ್ಟ್ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು PIB ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದೆ. RBI ಬ್ಯಾಂಕ್‌ಗಳಿಗೆ ಈ ರೀತಿಯಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ. ಈ ನಕಲಿ ಸುದ್ದಿಗಳಿಗೆ ಸಾರ್ವಜನಿಕರು ಗಮನ ಕೊಡಬಾರದು. ಸರ್ಕಾರಿ ಮೂಲಗಳಿಂದ ಸಿಗುವ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಪಿಐಬಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

56
Image Credit : Gemini

500 ರೂಪಾಯಿ ನೋಟುಗಳು ಮಾನ್ಯವಾಗಿರುತ್ತವೆ. ಮೊದಲಿನಂತೆಯೇ ಮುಂದೆಯೂ 500 ರೂ. ನೋಟುಗಳ ಮೂಲಕ ಸಾರ್ವಜನಿಕರು ವ್ಯವಹರಿಸಬಹುದಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವಂತಿಲ್ಲ ಪಿಐಬಿ ವೈರಲ್ ಪೋಸ್ಟ್ ಬಗ್ಗೆ ಸ್ಪಷ್ಟಪಡಿಸಿದೆ.

66
Image Credit : Gemini

ಆರ್‌ಬಿಐನಿಂದ ನಿರ್ದೇಶನ

ಸೆಪ್ಟೆಂಬರ್ 30, 2025 ರ ವೇಳೆಗೆ ಎಟಿಎಂಗಳಲ್ಲಿ ಶೇ. 75 ರಷ್ಟು ನೋಟುಗಳು 100-200 ರೂ.ಗಳಾಗಿರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಿಸಿದೆ. ಈ ಪ್ರಮಾಣ ಮಾರ್ಚ್ 31, 2026 ರ ವೇಳೆಗೆ ಶೇ. 90 ಕ್ಕೆ ಹೆಚ್ಚಾಗುತ್ತದೆ. ಗ್ರಾಹಕರು ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸಲುಮ ಆರ್‌ಬಿಐ ಸೂಚನೆ ನೀಡಿದೆ.

Has RBI really asked banks to stop disbursing ₹500 notes from ATMs by September 2025? 🤔

A message falsely claiming exactly this is spreading on #WhatsApp#PIBFactCheck

✅ No such instruction has been issued by the @RBI.

✅ ₹500 notes will continue to be legal tender.

🚨… pic.twitter.com/znWuedOUT8

— PIB Fact Check (@PIBFactCheck) July 12, 2025

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆರ್‌ಬಿಐ
ಹಣ (Hana)
ವ್ಯಾಪಾರ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved