ಕೋಲ್ಹೆ ಹಂತಕ ಯೂಸೂಫ್‌ ಅಂತಸಂಸ್ಕಾರಕ್ಕೂ ಬಂದಿದ್ದ!

By Suvarna NewsFirst Published Jul 5, 2022, 9:05 AM IST
Highlights

* ಅಮರಾವತಿಯ ಔಷಧ ವರ್ತಕ ಉಮೇಶ್‌ ಕೋಲ್ಹೆ ಹತ್ಯೆ 

* ಕೋಲ್ಹೆ ಹಂತಕ ಯೂಸೂಫ್‌ ಅಂತಸಂಸ್ಕಾರಕ್ಕೂ ಬಂದಿದ್ದ

* ಹಂತಕ ಯೂಸುಫ್‌ ಜತೆ 16 ವರ್ಷದ ಸ್ನೇಹ

ಅಮರಾವತಿ(ಜು.05): ಅಮರಾವತಿಯ ಔಷಧ ವರ್ತಕ ಉಮೇಶ್‌ ಕೋಲ್ಹೆಯನ್ನು ಹತ್ಯೆ ಮಾಡಿದ್ದ ಯೂಸೂಫ್‌ ಖಾನ್‌, ಬಳಿಕ ಅವರ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಂಡಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಉಮೇಶ್‌ ಹಾಗೂ ಯೂಸುಫ್‌ ಇಬ್ಬರೂ 16 ವರ್ಷಗಳಿಂದ ಸ್ನೇಹಿತರಾಗಿದ್ದರು. ‘ಉಮೇಶ್‌ ಹಾಗೂ ಯುಸೂಫ್‌ ಒಂದೇ ವಾಟ್ಸಾಪ್‌ ಗ್ರೂಪ್‌ನಲ್ಲಿ ಸದಸ್ಯರಾಗಿದ್ದರು. ಈ ಗ್ರೂಪ್‌ನಲ್ಲಿ ಉಮೇಶ್‌, ಪ್ರವಾದಿ ಅವಹೇಳನ ಮಾಡಿದ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಮಾಡಿದ್ದರು. ಯೂಸುಫ್‌ ಈ ಪೋಸ್ಟ್‌ ಅನ್ನು ತನ್ನ ಸಮುದಾಯದವರೊಂದಿಗೆ ಹಂಚಿಕೊಂಡಿದ್ದ. ಇದು ಜನರನ್ನು ಕೆರಳಿಸಿದ್ದು ಅವರು ಉಮೇಶ್‌ ಹತ್ಯೆ ಮಾಡಲು ಮುಂದಾದರು’ ಎಂದು ಪೊಲೀಸರು ಹೇಳಿದ್ದಾರೆ.

Latest Videos

‘ಬಹುತೇಕ ಮುಸ್ಲಿಂ ಗ್ರಾಹಕರನ್ನು ಹೊಂದಿದ್ದ ಉಮೇಶ್‌ ಅವರ ಕಾರಣದಿಂದಲೇ ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ಆತ ಪ್ರವಾದಿ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿ, ಅವರ ಅವಹೇಳನ ಮಾಡುವವರನ್ನು ಬೆಂಬಲಿಸುವ ಮೂಲಕ ತನ್ನ ಗ್ರಾಹಕರಿಗೆ ದ್ರೋಹ ಬಗೆದಿದ್ದಾನೆ’ ಎಂದು ಯೂಸುಫ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

16 ವರ್ಷಗಳ ಫ್ರೆಂಡ್‌ಶಿಪ್‌

ಉಮೇಶ್‌ ಹಾಗೂ ಯೂಸುಫ್‌ ಖಾನ್‌ ಇಬ್ಬರೂ ಕಳೆದ 16 ವರ್ಷಗಳಿಂದ ಸ್ನೇಹಿತರಾಗಿದ್ದರು. ‘ಉಮೇಶ್‌ ಹಾಗೂ ಯುಸೂಫ್‌ ಒಂದೇ ವಾಟ್ಸಾಪ್‌ ಗ್ರೂಪ್‌ನಲ್ಲಿ ಸದಸ್ಯರಾಗಿದ್ದರು. ಈ ಗ್ರೂಪ್‌ನಲ್ಲಿ ಉಮೇಶ್‌, ಪ್ರವಾದಿ ಅವಹೇಳನ ಮಾಡಿದ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಮಾಡಿದ್ದರು. ಯೂಸುಫ್‌ ಈ ಪೋಸ್ಟ್‌ ಅನ್ನು ತನ್ನ ಸಮುದಾಯದವರೊಂದಿಗೆ ಹಂಚಿಕೊಂಡಿದ್ದ. ಇದು ಜನರನ್ನು ಕೆರಳಿಸಿದ್ದು ಅವರು ಉಮೇಶ್‌ ಹತ್ಯೆ ಮಾಡಲು ಮುಂದಾದರು’ ಎಂದು ಪೊಲೀಸರು ಹೇಳಿದ್ದಾರೆ.

‘ಬಹುತೇಕ ಮುಸ್ಲಿಂ ಗ್ರಾಹಕರನ್ನು ಹೊಂದಿದ್ದ ಉಮೇಶ್‌ ಅವರ ಕಾರಣದಿಂದಲೇ ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ಆತ ಪ್ರವಾದಿ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿ, ಅವರ ಅವಹೇಳನ ಮಾಡುವವರನ್ನು ಬೆಂಬಲಿಸುವ ಮೂಲಕ ತನ್ನ ಗ್ರಾಹಕರಿಗೆ ದ್ರೋಹ ಬಗೆದಿದ್ದಾನೆ’ ಎಂದು ಯೂಸುಫ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈವರೆಗೆ ಈ ಪ್ರಕರಣದಲ್ಲಿ 7 ಜನರನ್ನು ಬಂಧಿಸಲಾಗಿದೆ. ಈ ನಡುವೆ, ಗ್ರೂಪ್‌ಗಳಲ್ಲಿ ನೂಪುರ್‌ ಬೆಂಬಲಿಸಿ ಪೋಸ್ಟ್‌ ಮಾಡಿದ ಇನ್ನೂ 3 ಜನರಿಗೆ ಹತ್ಯೆಯ ಬೆದರಿಕೆಗಳು ಬಂದಿವೆ. ಇದರಲ್ಲಿ ಇಬ್ಬರು ಕ್ಷಮಾಪಣಾ ಯಾಚಿಸಿ ವಿಡಿಯೋ ಕೂಡಾ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇವರಲ್ಲಿ ಒಬ್ಬ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದು, ಈ ಕುರಿತು ಕೂಡಾ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

click me!