ಕರ್ನಾಟಕದಲ್ಲಿ ನೂರಾರು ರೈತರ ಆತ್ಮಹತ್ಯೆ, ಸಿದ್ದು ಸರ್ಕಾರ ತಲೆಕೆಡಿಸಿಕೊಳ್ತಿಲ್ಲ: ಪ್ರಧಾ

By Kannadaprabha News  |  First Published Sep 29, 2024, 4:20 AM IST

ಕಾಂಗ್ರೆಸ್‌ನದ್ದು ಬರೀ ಸುಳ್ಳು ಭರವಸೆಗಳು ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್‌ನ ಆಡಳಿತದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ರೈತರ ಜೀವನದ ಬಗ್ಗೆ ತಲೆಕೆಡಿಸಿಕೊಂ ಡಿಲ್ಲ. ಅವರು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ದ್ರೋಹ ಮಾಡುವ ಇತಿಹಾಸ ಹೊಂದಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ  


ಹಿಸಾರ್(ಹರ್ಯಾಣ)(ಸೆ.29): ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇರಿದಂತೆ ವಿಪಕಗಳ ಸರ್ಕಾರಗಳ ವಿರುದ್ಧ ವಾಗ್ದಾಳಿ ಮುಂದುವ ರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಕರ್ನಾಟಕದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನೂರಾರು ರೈತರ ಆತ್ಮಹತ್ಯೆ ಸಂಭವಿಸಿವೆ. ಆದರೆ ಈ ಬಗ್ಗೆ ಅಲ್ಲಿನ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ' ಎಂದು ಕಿಡಿಕಾರಿದ್ದಾರೆ. 

ಶನಿವಾರ ಹಿಸಾರ್‌ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಎಂದಿಗೂ ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಂಭೀರವಾಗಿಲ್ಲ.  ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಬಿಜೆಪಿ ಮಾತ್ರ. ನಾವು ರೈತರನ್ನು ಗೌರವಿಸುವ ಕಾರಣದಿಂದ ರೈತರಿಗೆ 'ಪಿಎಂ ಕಿಸಾನ್ ಸಮ್ಮಾನ್ ನಿಧಿ' ಅಡಿ ವಾರ್ಷಿಕ ಕ 6,000 ನೀಡುತ್ತಿದ್ದೇವೆ. ಕಾಂಗ್ರೆಸ್ ಹರ್ಯಾಣದಲ್ಲಿ ರೈತರಿಗೆ 'ಚಂದ್ರ 'ನ ತೋರಿಸುವ ಭರವಸೆ ನೀಡುತ್ತಿದೆ. ಆದರೆ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ನೀಡಿದ ಭರವಸೆಗಳನ್ನು ಏಕೆ ಈಡೇರಿಸುವುದಿಲ್ಲ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್‌ನ ಆಡಳಿತದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತ್ಯವೆಂದರೆ ಕಾಂಗ್ರೆಸ್ ರೈತರ ಜೀವನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ಕೇವಲ ಸುಳ್ಳು ಭರವಸೆ ಗಳನ್ನು ನೀಡುತ್ತಾರೆ ಮತ್ತು ದ್ರೋಹ ಮಾಡಿದ ಇತಿಹಾಸ ವನ್ನು ಹೊಂದಿದ್ದಾರೆ' ಎಂದು ಕಿಡಿಕಾರಿದರು. 

Latest Videos

undefined

ಪ್ರಧಾನಿಯಾಗಲು ಸಾಕಷ್ಟು ಬಾರಿ ಆಫರ್‌ ಬಂದಿತ್ತು: ‘ರಾಜಕೀಯ ಬಾಂಬ್‌’ ಸಿಡಿಸಿದ ಕೇಂದ್ರ ಸಚಿವ

ಬರೀ ಕುರ್ಚಿ ವ್ಯಾಮೋಹ: ಹರ್ಯಾಣದಲ್ಲಿ ಬಾಪು (ಭೂಪಿಂದರ್ ಸಿಂಗ್ ಹೂಡಾ) ಮತ್ತು ಬೇಟಾ (ದೀಪೇ ಂದರ್ ಹೂಡಾ) ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಸಿಎಂ ಆಗುವ ಬಯಕೆ ಹೊಂದಿದ್ದು, ಅದಕ್ಕಾಗಿ ತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದಾರೆ. ಇದರಿಂದಾಗಿ ಪಕ್ಷದ ಪಾಲಿಗೆ ಸ್ಥಿರತೆ ಎನ್ನುವುದು ದೂರದ ಮಾತು. ತನ್ನ ನಾಯಕರನ್ನೇ ಬಗ್ಗೂಡಿಸಲಾಗದ ಪಕ್ಷ, ರಾಜ್ಯದಲ್ಲಿ ಸ್ಥಿರತೆಯನ್ನು ಹೇಗೆ ಸ್ಥಾಪಿಸುತ್ತದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನದ್ದು ಬರೀ ಸುಳ್ಳು ಭರವಸೆಗಳು ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್‌ನ ಆಡಳಿತದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ರೈತರ ಜೀವನದ ಬಗ್ಗೆ ತಲೆಕೆಡಿಸಿಕೊಂ ಡಿಲ್ಲ. ಅವರು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ದ್ರೋಹ ಮಾಡುವ ಇತಿಹಾಸ ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

click me!