Jammu Kashmirದಲ್ಲಿ ಪೆಲ್ಲೆಟ್‌ ಗನ್‌ನಿಂದ 777 ಜನರ ಕಣ್ಣಿಗೆ ಗಾಯ: ದೃಷ್ಟಿ ಕಳ್ಕೊಂಡ ಶೇ. 80 ರಷ್ಟು ಜನ..!

By BK AshwinFirst Published Nov 7, 2022, 6:12 PM IST
Highlights

ಈ ಸಮಯದಲ್ಲಿ ಪೆಲ್ಲೆಟ್‌ ಗನ್‌ನಿಂದ ಗಾಯಗಳೊಳಾಗಿ ಕಣ್ಣಿನ ಆಪರೇಷನ್‌ ಮಾಡಿಸಿಕೊಂಡ 777 ಜನರ ಪೈಕಿ ಶೇ. 80 ರಷ್ಟು ಜನ ಬೆರಳುಗಳನ್ನು ಎಣಿಸುವಷ್ಟು ಮಾತ್ರ ದೃಷ್ಟಿಯನ್ನು ಹೊಂದಿದ್ದಾರೆ ಎಂದು ಸಂಶೋಧನಾ ಪತ್ರಿಕೆ ಹೇಳಿದೆ. ಈ ಹಿನ್ನೆಲೆ ನಾಗರಿಕರ ಮೇಲೆ ಪೆಲ್ಲೆಟ್‌ ಗನ್‌ಗಳ ಬಳಕೆಯ ವಿರುದ್ಧ ಸಲಹೆ ನೀಡಿದೆ.

ಜಮ್ಮು ಕಾಶ್ಮೀರದಲ್ಲಿ (Jammu Kashmir)  ಸೇನೆ (Army) ನಾಗರಿಕರ (Civilians) ಘರ್ಷಣೆಗಳನ್ನು ನಿಯಂತ್ರಿಸಲು ಅವರ ಮೇಲೆ ಹಲವು ವರ್ಷಗಳಿಂದ ಪೆಲ್ಲೆಟ್‌ ಗನ್‌ಗಳ (Pellet Guns) ಬಳಕೆ ಮಾಡಲಾಗುತ್ತಿತ್ತು. ಇದರಿಂದ ಜನರಿಗೆ ಸಾಕಷ್ಟು ಹಾನಿಯಾಗುತ್ತಿರುವ ಆರೋಪಗಳೂ ಕೇಳಿಬಂದರೂ, ಪೆಲ್ಲೆಟ್‌ ಗನ್‌ಗಳ ಬಳಕೆ ಮಾತ್ರ ನಿಂತಿರಲಿಲ್ಲ. ಈಗ, ಪೆಲ್ಲೆಟ್‌ ಗನ್‌ನಿಂದ ಕಣ್ಣಿಗೆ ಗಾಯ ಮಾಡಿಕೊಂಡ ಹಲವರು ತಮ್ಮ ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆ. ನೂರಾರು ಜನರು ಸ್ವಲ್ಪ ಮಟ್ಟಿಗಾದರೂ ದೃಷ್ಟಿ ನಷ್ಟ (Vision Loss) ಅನುಭವಿಸಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೇಳುತ್ತಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) 2016 ರ ಜುಲೈ ಹಾಗೂ ನವೆಂಬರ್‌ ನಡುವೆ ಪೆಲ್ಲೆಟ್‌ ಗನ್‌ಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡವರು ಸ್ವಲ್ಪ ಮಟ್ಟಿಗಾದರೂ ದೃಷ್ಟಿ ದೋಷ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಈ ಸಮಯದಲ್ಲಿ ಪೆಲ್ಲೆಟ್‌ ಗನ್‌ನಿಂದ ಗಾಯಗಳೊಳಾಗಿ ಕಣ್ಣಿನ ಆಪರೇಷನ್‌ ಮಾಡಿಸಿಕೊಂಡ 777 ಜನರ ಪೈಕಿ ಶೇ. 80 ರಷ್ಟು ಜನ ಬೆರಳುಗಳನ್ನು ಎಣಿಸುವಷ್ಟು ಮಾತ್ರ ದೃಷ್ಟಿಯನ್ನು ಹೊಂದಿದ್ದಾರೆ ಎಂದು ಸಂಶೋಧನಾ ಪತ್ರಿಕೆ ಹೇಳಿದೆ. ಈ ಹಿನ್ನೆಲೆ ನಾಗರಿಕರ ಮೇಲೆ ಪೆಲ್ಲೆಟ್‌ ಗನ್‌ಗಳ ಬಳಕೆಯ ವಿರುದ್ಧ ಸಲಹೆ ನೀಡಿದೆ. ಕಳಪೆ ದೃಷ್ಟಿ, ವೈದ್ಯಕೀಯ ಆರೈಕೆಯ ಹೆಚ್ಚಿನ ವೆಚ್ಚ ಮತ್ತು ದೀರ್ಘಕಾಲೀನ ಪುನರ್‌ ವಸತಿಯಿಂದಾಗಿ ಸಮಾಜ ಮತ್ತು ರೋಗಿಗಳ ಮೇಲೆ (ಹೆಚ್ಚಾಗಿ 20-29 ವಯಸ್ಸಿನ ಪುರುಷರು) ಈ ಗಾಯಗಳು "ಗಮನಾರ್ಹ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ-ಆರ್ಥಿಕ ಹೊರೆ" ಯನ್ನು ಹೇರಿವೆ ಎಂದೂ ಈ ವರದಿ ಹೇಳಿದೆ.

Latest Videos

ಇದನ್ನು ಓದಿ: ಪೆಲೆಟ್ ಗನ್'ನಿಂದ ಮತ್ತೊಂದು ಸಾವು; ಕಾಶ್ಮೀರ ಕಣಿವೆಯಲ್ಲಿ ಮತ್ತೆ ಭೋರ್ಗರೆದ ಪ್ರತಿಭಟನೆ

‘ದಿ ಇಂಡಿಯನ್ ಜರ್ನಲ್ ಆಫ್ ನೇತ್ರವಿಜ್ಞಾನ’ದಲ್ಲಿ ಪ್ರಕಟವಾದ ಈ ಸಂಶೋಧನಾ ಪತ್ರಿಕೆಯ ಮುಖ್ಯ ಲೇಖಕರಲ್ಲಿ ಒಬ್ಬರು ಮುಂಬೈ ಮೂಲದ ರೆಟಿನಾ ಸರ್ಜನ್ ಡಾ. ಎಸ್. ನಟರಾಜನ್ ಎಂದು ತಿಳಿದುಬಂದಿದೆ.. ಪೆಲ್ಲೆಟ್‌ಗಳಿಂದ ಗಾಯಗೊಂಡವರಿಗೆ ಶಸ್ತ್ರಚಿಕಿತ್ಸೆ ಮಾಡಲು ಅವರು 2016 ರಲ್ಲಿ ಐದು ಬಾರಿ ಶ್ರೀನಗರಕ್ಕೆ ಪ್ರಯಾಣಿಸಿದ್ದರು, ಜೊತೆಗೆ ನವದೆಹಲಿ ಮತ್ತು ಚೆನ್ನೈನಿಂದ ತಲಾ ಒಬ್ಬ ವೈದ್ಯರು ಸಹ ಹೋಗಿದ್ದರು. ಕಲ್ಲು ತೂರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಮತ್ತು ಗುಂಡು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳ ನಡುವಿನ ಘರ್ಷಣೆಯ ನಂತರ ಈ ಗಾಯಗಳಾದವರು ಎಂದು ತಿಳಿದುಬಂದಿದೆ.

ಹೆಚ್ಚಿನ ರೋಗಿಗಳು (98.7%) ಆಸ್ಪತ್ರೆಗೆ ದಾಖಲಾದ ದಿನ ಅಥವಾ ಮರುದಿನ ಶಸ್ತ್ರಚಿಕಿತ್ಸೆ ಪಡೆದರು. ಮೂರು ಶಸ್ತ್ರಚಿಕಿತ್ಸಕರು 777 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಈ ಪೈಕಿ 550 ಕ್ಕೂ ಹೆಚ್ಚು ಜನರು ಕಣ್ಣಿನ ಪ್ರಮುಖ ಭಾಗದ ಚಿಕಿತ್ಸೆ ಪಡೆದರು  ಮತ್ತು 370 ಕ್ಕೂ ಹೆಚ್ಚು ಜನರು ವಿಟ್ರೋರೆಟಿನಲ್ ಶಸ್ತ್ರಚಿಕಿತ್ಸೆ ಪಡೆದರು. ಇದರಲ್ಲಿ ವೈದ್ಯಕೀಯ ಪ್ರತಿಕ್ರಿಯೆಯು "ವಿಶಿಷ್ಟ" ಆಗಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರೈತರ ಮೇಲೆ ಪೆಲೆಟ್ ಗನ್, ತನಿಖೆಗೆ ಆದೇಶಿಸಿದ ಸಿಎಂ ಕಮಲನಾಥ್

"ಹೋಲಿಕೆಯಲ್ಲಿ, 2003 ರಿಂದ 2005 ರವರೆಗಿನ ಇರಾಕ್ ಯುದ್ಧದಲ್ಲಿ 797 ತೀವ್ರ ಕಣ್ಣಿನ ಗಾಯಗಳು ವರದಿಯಾಗಿವೆ. ಅದರಲ್ಲಿ 116 ಜನರ ಕಣ್ಣುಗಳನ್ನು ತೆಗೆದುಹಾಕಲಾಗಿದೆ. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿನ ಬ್ರಿಟಿಷ್ ಸಶಸ್ತ್ರ ಪಡೆಗಳ ವರದಿಯು 2004 ರಿಂದ 2008 ರವರೆಗೆ ಒಟ್ಟು 63 ಕಣ್ಣಿನ ಗಾಯದ ಪ್ರಕರಣಗಳನ್ನು ತೋರಿಸಿದೆ’’ ಎಂದೂ ಹೇಳಿದೆ.

click me!