ಹೇಗಿದ್ರು ಹೇಗಾದ್ರು ಗೊತ್ತಾ.. 15 ಕೆಜಿ ತೂಕ ಕಳ್ಕೊಂಡ Zomato ಸಿಇಒ: ಫಿಟ್‌ನೆಸ್ ಗುಟ್ಟು ಬಿಟ್ಕೊಟ್ಟ ದೀಪಿಂದರ್ ಗೋಯಲ್

By BK Ashwin  |  First Published Aug 1, 2023, 6:41 PM IST

2019 ಮತ್ತು 2023 ರ ಚಿತ್ರಗಳನ್ನು ಮೊದಲು ಮತ್ತು ನಂತರ ಎಂದು ಇನ್ಸ್ಟಾಗ್ರಾಮ್‌ನಲ್ಲಿ ದೀಪಿಂದರ್‌ ಗೋಯಲ್‌ ಪೋಸ್ಟ್‌ ಹಂಚಿಕೊಂಡಿದ್ದು, ಇದು ವೈರಲ್‌ ಆಗ್ತಿದೆ. 2019 ರಲ್ಲಿ 87 ಕೆಜಿಯಿಂದ 2023 ರಲ್ಲಿ 72 ಕೆಜಿಗೆ ಇಳಿದಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ನವದೆಹಲಿ (ಆಗಸ್ಟ್ 1, 2023): ಭಾರತದ ಪ್ರಖ್ಯಾತ ಆಹಾರ ಡೆಲಿವರಿ ಅಪ್ಲಿಕೇಷನ್‌ಗಳಲ್ಲಿ ಝೊಮ್ಯಾಟೋ ಸಹ ಒಂದು. ಈ ಝೊಮ್ಯಾಟೋ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ  ದೀಪಿಂದರ್ ಗೋಯಲ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವರು, ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ವೊಂದು ಸಾಕಷ್ಟು ವೈರಲ್‌ ಆಗುತ್ತಿದೆ. ಅದೇನ್ಪಪಾ ಅಂತೀರಾ.. ದೀಪಿಂದರ್ ಗೋಯಲ್ ಇತ್ತೀಚೆಗೆ ತಮ್ಮ ವೈಯಕ್ತಿಕ ಫಿಟ್ನೆಸ್ ಪ್ರಯಾಣದ ನೋಟವೊಂದನ್ನು ಪೋಸ್ಟ್‌ ಮಾಡಿದ್ದಾರೆ. 

2019 ಮತ್ತು 2023 ರ ಚಿತ್ರಗಳನ್ನು ಮೊದಲು ಮತ್ತು ನಂತರ ಎಂದು ಇನ್ಸ್ಟಾಗ್ರಾಮ್‌ನಲ್ಲಿ ದೀಪಿಂದರ್‌ ಗೋಯಲ್‌ ಪೋಸ್ಟ್‌ ಹಂಚಿಕೊಂಡಿದ್ದು, ಇದು ವೈರಲ್‌ ಆಗ್ತಿದೆ. 2019 ಮತ್ತು 2023 ರಿಂದ ಅವರ ದೇಹದ ತೂಕ, ಕೊಲೆಸ್ಟ್ರಾಲ್ ಮಟ್ಟ ಮತ್ತು ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸಿವೆ. ದೀಪಿಂದರ್‌ ಗೋಯಲ್‌ 2019 ರಲ್ಲಿ 87 ಕೆಜಿಯಿಂದ 2023 ರಲ್ಲಿ 72 ಕೆಜಿಗೆ ಅವರ ತೂಕ ಇಳಿದಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಲ್ಕು ವರ್ಷಗಳಲ್ಲಿ ತನ್ನ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ದೇಹದ ಕೊಬ್ಬಿನ ಶೇಕಡಾವಾರು ಮಟ್ಟವನ್ನು ಸಹ ದೀಪಿಂದರ್‌ ಗೋಯಲ್‌ ಕಡಿಮೆ ಮಾಡ್ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

Latest Videos

undefined

ಇದನ್ನು ಓದಿ: ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

"2019 ರಲ್ಲಿ, ನನ್ನ ವೈಯಕ್ತಿಕ ಫಿಟ್‌ನೆಸ್ ಪ್ರಯಾಣದ ಒಂದು ನೋಟ, ಸಾಂಕ್ರಾಮಿಕ ರೋಗಕ್ಕೆ ಕೆಲವು ತಿಂಗಳುಗಳ ಮೊದಲು, ನಾನು ನನ್ನ ಆರೋಗ್ಯವನ್ನು ನನ್ನ ಕೆಲಸಕ್ಕೆ ಸಮಾನ ಆದ್ಯತೆಯಾಗಿ ಪರಿಗಣಿಸಲು ಪ್ರಾರಂಭಿಸಿದೆ. ಯಾವುದೂ ತೀವ್ರವಾಗಿಲ್ಲ. ಆದರೆ ಕೇವಲ ಸ್ಥಿರತೆಯನ್ನು ಕಾಯ್ದುಕೊಂಡೆ. ಇದು 2019 ಮತ್ತು 2023 ಫಲಿತಾಂಶಗಳ ಮುಖ್ಯಾಂಶ" ಎಂದು ದೀಪಿಂದರ್‌ ಗೋಯಲ್‌ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೆ, 4 ವರ್ಷಗಳಲ್ಲಿ 15 ಕೆಜಿ ತೂಕವನ್ನು ಹೇಗೆ ಇಳಿಸಲು ಸಾಧ್ಯವಾಯಿತು ಎಂಬುದರ ಕುರಿತೂ ದೀಪಿಂದರ್‌ ಗೋಯಲ್‌ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. "ನಾನು ನನ್ನ ಕಾರ್ಬೋಹೈಡ್ರೇಟ್ ಸೇವನೆಯನ್ನು ಟ್ರ್ಯಾಕ್‌ ಮಾಡಲು ಪ್ರಾರಂಭಿಸಿದೆ.  ಆರೋಗ್ಯಕರ ಆಹಾರವನ್ನು ಸೇವಿಸಿದೆ (ಎಲ್ಲವನ್ನೂ ಝೊಮ್ಯಾಟೋ ಮೂಲಕ ಆರ್ಡರ್‌ ಮಾಲಾಗಿದೆ. ಏಕೆಂದರೆ ಭಾರತೀಯ ಮನೆಯಲ್ಲಿ ಬೇಯಿಸಿದ ಆಹಾರವು ಕಾರ್ಬೋಹೈಡ್ರೇಟ್‌ಗಳಿಂದ ಪ್ರಾಬಲ್ಯ ಹೊಂದಿದೆ) ಮತ್ತು ನಿಯಮಿತವಾಗಿ ವರ್ಕೌಟ್‌ ಮಾಡಿದೆ’’ ಎಂದೂ ತಮ್ಮ ಫಿಟ್ನೆಸ್‌ ಸೀಕ್ರೆಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಸಿವು, ಬಳಲಿಕೆಯಿಂದ ಮೃತಪಟ್ಟ ವೀಗನ್‌ ಇನ್ಫ್ಲುಯೆನ್ಸರ್‌: ಕಚ್ಚಾ ಆಹಾರ ಮಾತ್ರ ಸೇವಿಸ್ತಿದ್ದ ಮಹಿಳೆ

"ನಾನು ವಿಪರೀತವಾಗಿ ಏನನ್ನೂ ಮಾಡಲಿಲ್ಲ, ವಾರಾಂತ್ಯದಲ್ಲಿ ಯಾವಾಗಲೂ ಒಂದು ಅಥವಾ ಎರಡು ದಿನಗಳು (ಚೋಲೆ ಭತೂರೆ, ಬಟರ್ ಚಿಕನ್, ಮತ್ತು ಗುಲಾಬ್ ಜಾಮೂನ್ ಹಾಗೂ ಇನ್ನೇನು). ಆದರೆ ಒಟ್ಟಾರೆಯಾಗಿ, ನನ್ನ ಹಿಂದಿನ ಅಭ್ಯಸಗಳಿಗೆ ಹೋಲಿಸಿದರೆ ನಾನು ಪ್ರತಿ ವಾರ ಹೆಚ್ಚು ಆರೋಗ್ಯಕರ ನಡವಳಿಕೆ ಹೊಂದಿದ್ದೇನೆ. ಅತಿಯಾಗಿಲ್ಲದ ಸ್ಥಿರತೆಯು ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ" ಎಂದೂ ಅವರು ಹೇಳಿದರು.

ಇನ್ನು, ಅವರ ರೂಪಾಂತರದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್‌ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟಪ್‌ ಉದ್ಯಮದಲ್ಲಿ ಮಾತ್ರವಲ್ಲ, ಫಿಟ್ನೆಸ್‌ ವಿಚಾರದಲ್ಲೂ ನೀವು ನನಗೆ ಸ್ಪೂರ್ತಿ ಎಂದು ಇನ್ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಹೊಗಳಿದ್ದಾರೆ. 

ಇದನ್ನೂ ಓದಿ: ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..!

click me!